ವಿರಾಜಪೇಟೆ ಏ.10 NEWS DESK : ವಿರಾಜಪೇಟೆ ತಾಲೂಕು ಬಿಟ್ಟಂಗಾಲ ಗ್ರಾಮದ ಪೊನ್ನೀರ ಕುಟುಂಬಸ್ತರು ವರ್ಷಂಪ್ರತಿ ನಡೆಸಿಕೊಂಡು ಬರುವ ಶ್ರೀ ಬೇಟೆ ಚಾಮುಂಡಿ ದೇವರ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.
ಮುಂಜಾನೆ ಶುದ್ಧ ಕಳಸ ನೆರವೇರಿಸಿ, ರಾತ್ರಿಯಿಂದ ವಿವಿಧ ದೈವಗಳೊಂದಿಗೆ ಮರುದಿನದ ವರೆಗೆ ಬೇಟೆ ಚಾಮುಂಡಿ ದೈವದ ಕೋಲದೊಂದಿಗೆ ವಾರ್ಷಿಕ ಹಬ್ಬಕ್ಕೆ ತೆರೆ ಎಳೆಯಲಾಯಿತು.
ವಿವಿಧೆಡೆಯಿಂದ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.








