ಮಡಿಕೇರಿ ಏ.10 NEWS DESK : ಯವಕಪಾಡಿ ಗ್ರಾಮದ ಕಕ್ಕಬೆ ಶ್ರೀ ಆದಿ ಪನ್ನಾಂಗಾಲ ತಮ್ಮೆ ದೇವಿಯ ವಾರ್ಷಿಕ ಉತ್ಸವವು ಏ.12 ಮತ್ತು 13 ರಂದು ನಡೆಯಲಿದೆ.
ದೇವಾಲಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಉತ್ಸವವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದೆ.
ಏ.12 ರಂದು ಬೆಳಿಗ್ಗೆ 10 ಗಂಟೆಗೆ ಅಂಜಪರವಂಡ ಮನೆಯಿಂದ ಭಂಡಾರ ಬರುವುದು, 11 ಗಂಟೆಗೆ ತಡಂಬು ತೊಳೆಯುವುದು, ಮಧ್ಯಾಹ್ನ 1 ಗಂಟೆಗೆ ನಾಡು ಹತ್ತಿಸುವುದು ಮತ್ತು ಹರಕೆ ಒಪ್ಪಿಸುವುದು, ರಾತ್ರಿ 9 ಗಂಟೆಗೆ ಕರಿ ಚಾಮುಂಡಿ ಭಾರಣಿ ನಡೆಯಲಿದೆ.
ಏ.13 ರಂದು 11 ಗಂಟೆಗೆ ಕುರುಂದ ದೇವರ ಹಬ್ಬ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ತಕ್ಕ ಮುಖ್ಯಸ್ಥರು ಹಾಗೂ ಮುವತ್ತಮೂರು ಕುಡಿಯವರು ಕೋರಿದ್ದಾರೆ.








