ಕುಶಾಲನಗರ ಏ.10 NEWS DESK : ಸತತ ಒಂದು ತಿಂಗಳ ವ್ರತಾಚರಣೆಯ ನಂತರ ಮುಸಲ್ಮಾನರ ಪ್ರಮುಖ ಹಬ್ಬಗಳಲ್ಲಿ ಒಂದಾಗ ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಯಿತು.
ಕುಶಾಲನಗರದ ಹಿಲಾಲ್ ಮಸೀದಿ, ಕೂಡಿಗೆ, ಶುಂಠಿಕೊಪ್ಪ, ನಂಜರಾಜಪಟ್ಟಣ ಸೇರಿದಂತೆ ಹಲವೆಡೆ ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಯಿತು. ಮಸೀದಿಗಳಲ್ಲಿ ವಿಶೇಷ ನಮಾಜ಼್ ನೆರವೇರಿಸಲಾಯಿತು. ಊರಿನಲ್ಲಿ ಶಾಂತಿ ನೆಲೆಸಲು ಹಾಗೂ ಮಳೆಗಾಗಿ ಪ್ರಾರ್ಥಿಸಲಾಯಿತು.
ದಾನದ ಧರ್ಮವೆಂದೇ ಪ್ರಖ್ಯಾತವಾದ ಈದುಲ್ ಫಿತರ್ ಹಬ್ಬದಂದು ಶಾಫಿ ಬಾಂಧವರು ಬಡವರಿಗೆ ದಾನ, ಧರ್ಮಗಳನ್ನು ನೀಡಿದರು. ನಂತರ ಸರ್ವರಿಗೂ ಈದುಲ್ ಫಿತರ್ ಹಬ್ಬದ ಶುಭಾಶಯಗಳನ್ನು ಸಾರಿದ ಮುಸ್ಲಿಂ ಸಹೋದರರು, ಹಿಂದೂ ಸಹೋದರರಿಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭ ಮಾತನಾಡಿದ ಕುಶಾಲನಗರ ಹಿಲಾಲ್ ಮಸೀದಿ ಅಧ್ಯಕ್ಷ ಎಂ.ಎಂ.ಎಸ್.ಹುಸೇನ್ ಮಾತನಾಡಿ, ಈದುಲ್ ಫಿತರ್ ನ ಶುಭಾಶಯಗಳನ್ನು ತಿಳಿಸಿದರು.
ಹಿಲಾಲ್ ಮಸೀದಿ ಧರ್ಮಗುರುಗಳಾದ ನಾಸರ್ ಫೈಜಿ಼ ಮಾತನಾಡಿ, ನಾಡಿನಲ್ಲಿ ಸರ್ವರೂ ಶಾಂತಿ, ಸಹೋದರತೆಯಿಂದ ಬಾಳಬೇಕಾಗಿದೆ ಎಂದರು.
ಹಿಲಾಲ್ ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮಾತನಾಡಿ, ನಾಡಿನಲ್ಲಿ ಮಳೆಯಿಲ್ಲದೇ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದ ಅವರು, ಸರ್ವರಿಗೂ ಈದುಲ್ ಫಿತರ್ ಹಬ್ಬದ ಶುಭಾಶಯಗಳು ಹಾಗೂ ಹಿಂದೂ ಸಮುದಾಯದವರಿಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭ ಕುಶಾಲನಗರದ ಹಿಲಾಲ್ ಮಸೀದಿ ಕಮಿಟಿ ಪದಾಧಿಕಾರಿಗಳು, ಅಲ್ ಇಹ್ಸಾನ್ ಅಸೋಸಿಯೇಷನ್ ಪ್ರಮುಖರು, ನುಸ್ರತುಲ್ ಇಸ್ಲಾಂ ನ ಪದಾಧಿಕಾರಿಗಳು ಹಾಗೂ ಊರಿನ ಪ್ರಮುಖರು ಇದ್ದರು.








