ನಾಪೋಕ್ಲು ಏ.11 NEWS DESK : ಬೇತು ಗ್ರಾಮದ ಕೊಂಡೀರ ಪೂವಣ್ಣ (ಗಿರಿ) ಎಂಬವರ ತೋಟಕ್ಕೆ ಬೆಂಕಿ ಬಿದ್ದಿದ್ದು, ಅಪಾರ ನಷ್ಟ ಸಂಭವಿಸಿದೆ.
ಪೂವಣ್ಣ ಅವರ ಗದ್ದೆಯ ಹುಲ್ಲಿನ ರಾಶಿಗೆ ಬೆಂಕಿ ತಗಲಿದ್ದು, ಗದ್ದೆ ಉದ್ದಕ್ಕೂ ವ್ಯಾಪಿಸಿದ ಬೆಂಕಿ ಕಾಫಿ ತೋಟಕ್ಕೂ ಹಬ್ಬಿದೆ. ಸುಮಾರು 50 ಕಾಫಿ ಗಿಡಗಳಷ್ಟು ಸುಟ್ಟು ನಷ್ಟ ಸಂಭವಿಸಿದೆ. ಈ ಸಂದರ್ಭ ಗ್ರಾಮಸ್ಥರು ಹರಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಗ್ನಿಶಾಮಕ ದಳದ ವಾಹನ ಗ್ರಾಮಕ್ಕೆ ಆಗಮಿಸಿದ್ದರೂ ಸ್ಥಳಕ್ಕೆ ತೆರಳಲಾಗದೆ ಮಕ್ಕಿ ಶ್ರೀ ಶಾಸ್ತವು ದೇವಾಲಯದ ಸಮೀಪ ಸ್ಥಗಿತಗೊಳಿಸಲಾಯಿತು. ಬಳಿಕ ಸಿಬ್ಬಂದಿಗಳು ಮಾತ್ರ ಘಟನಾ ಸ್ಥಳಕ್ಕೆ ತೆರಳಿ ಬಾಕಿ ಉಳಿದ ಅಲ್ಪ ಸ್ವಲ್ಪ ಬೆಂಕಿಯನ್ನು ನಂದಿಸಿ ಸಹಕರಿಸಿದರು.
ವರದಿ : ದುಗ್ಗಳ ಸದಾನಂದ.








