ನಾಪೋಕ್ಲು ಏ.11 NEWS DESK : ಚೆರಿಯಪರಂಬು, ಹಳೆತಾಲ್ಲೂಕು, ಕೊಳಕೇರಿ, ಎಮ್ಮೆಮಾಡು, ಕೊಟ್ಟಮುಡಿ,ಕುಂಜಿಲ ವ್ಯಾಪ್ತಿಯ ಜುಮಾ ಮಸೀದಿ ಸೇರಿದಂತೆ ವಿವಿಧೆಡೆ ಈದುಲ್ ಫಿತರ್ ಅನ್ನು ಮುಸಲ್ಮಾನ ಬಾಂಧವರು ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಖತೀಬರದ ಅಶ್ರಫ್ ಅಸ್ಸಾನಿ ನೇತೃತ್ವದಲ್ಲಿ ಸಾಮೂಹಿಕ ಈದುಲ್ ಫಿತರ್ ನಮಾಜ್ ನೆರವೇರಿಸಲಾಯಿತು.
ಪ್ರತಿಯೊಬ್ಬರು ಪ್ರವಾದಿಯವರ ಸಂದೇಶದಂತೆ ನಾಡಿನಲ್ಲಿ ಶಾಂತಿ ಸೌಹಾರ್ದತೆ ಮತ್ತು ಐಕ್ಯತೆಯಿಂದ ಜೀವನ ನಡೆಸಬೇಕು. ಇಸ್ಲಾಂ ಶಾಂತಿಯ ಧರ್ಮವಾಗಿದ್ದು, ಮತ್ತೊಬ್ಬರಿಗೆ ನೋವುಂಟು ಮಾಡುವ ಕಾರ್ಯ ಪ್ರವೃತ್ತಿಗಳನ್ನು ಮಾಡದೆ ಎಲ್ಲಾ ಧರ್ಮದವರೊಂದಿಗೆ ಸೌಹಾರ್ದತೆಯನ್ನು ಬೆಳೆಸಬೇಕು ಎಂದು ಗುರುಗಳು ಈದ್ ಸಂದೇಶ ನೀಡಿದರು.
ನಾಡಿನ ಸುಭಿಕ್ಷಕ್ಕಾಗಿ ಮತ್ತು ನಾಡಿನಲ್ಲಿ ಮೃತಪಟ್ಟವರಿಗೆ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ಈ ಸಂದರ್ಭ ಜಮಾಯತ್ ನ ಅಧ್ಯಕ್ಷ ಎಂ.ಹೆಚ್.ಅಬ್ದುಲ್ ರೆಹಮಾನ್, ಉಪ ಅಧ್ಯಕ್ಷ ಪಿ.ಎಂ ಅರಫತ್, ಕಾರ್ಯದರ್ಶಿ ಯೂನಸ್, ಮಾಜಿ ಅಧ್ಯಕ್ಷ ಸಲೀಂ ಹ್ಯಾರಿಸ್ , ಎಂ.ಎ.ಮನ್ಸೂರ್ ಅಲಿ ಸಮಿತಿ ಸದಸ್ಯರು ಹಾಗೂ ಪದಾಧಿಕಾರಿಗಳು ಸದಸ್ಯರು ಮತಬಾಂಧವರು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.








