
ಮಡಿಕೇರಿ ಏ.13 NEWS DESK : ಸೋಮವಾರಪೇಟೆ ಲಯನ್ಸ್ ಕ್ಲಬ್ ನ ಮಾಸಿಕ ಸಭೆಯು ಅಧ್ಯಕ್ಷರಾದ ಎ.ಎಸ್.ಮಹೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸೋಮವಾರಪೇಟೆ ಶ್ರೀಗಂಧ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಲಯನ್ಸ್ ಕ್ಲಬ್‌ನ ಸದಸ್ಯರಾದ ಹಾರಂಗಿ ಅಚ್ಚುಕಟ್ಟು ಪ್ರದೇಶದ ಸದಸ್ಯ ಎ.ಪಿ ಸುಬ್ಬಯ್ಯ, ಜಿಲ್ಲಾ ಸಹಕಾರ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಯಾದ ಜಲಜಶೇಖರ್, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಎಸ್.ಮಹೇಶ್, ಜಿಲ್ಲಾ ಶ ಸಾ ಪ ಉಪಾಧ್ಯಕ್ಷ ಜೆ.ಸಿ.ಶೇಖರ್, ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾದ ಎ.ಎಂ.ಆನಂದ ಆನಂದ್ ಅವರನ್ನು ಲಯನ್ಸ್ ಕ್ಲಬ್‍ನ ಪ್ರಮುಖರು ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭ ಕ್ಲಬ್‍ನ ವಲಯಾಧ್ಯಕ್ಷ ಚೆಟ್ಟಿಮಾಡ ರೋಹಿತ್, ಕಾರ್ಯದರ್ಶಿ ಚಾವಡಿ ಶಿವಕುಮಾರ್ ಹಾಗೂ ಖಜಾಂಚಿ ಕೆ.ಡಿ.ವೀರಪ್ಪ ಹಾಗೂ ಲಯನ್ಸ್ ಕ್ಲಬ್ ನ ಎಲ್ಲಾ ಸದಸ್ಯರು ಹಾಜರಿದ್ದರು.








