ಸೋಮವಾರಪೇಟೆ ಏ.15 NEWS DESK : ಅಂಬೇಡ್ಕರ್ ಸೇನೆ ಮತ್ತು ಗಾಂಧಿನಗರದ ದೊಡ್ಡಮಾರಿಯಮ್ಮ ದೇವಾಲಯ ಸಮಿತಿ, ಬೆಟ್ಟದಳ್ಳಿ ಮಾನವತ ಯುವಕ ಸಂಘ, ಶಾಂತಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಗ್ರಾಮಾಭಿವೃದ್ಧಿ ಸಮಿತಿ, ವೆಂಕಟೇಶ್ವರ ಬ್ಲಾಕ್ ನ ಆದಿಕರ್ನಾಟಕ ಸಮಾಜ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜನ್ಮದಿನಾಚರಣೆಯನ್ನು ಸೋಮವಾರಪೇಟೆಯಲ್ಲಿ ಆಚರಿಸಲಾಯಿತು.
ಪಟ್ಟಣದ ಮುಖ್ಯ ರಸ್ತೆಯಲ್ಲಿ ಅಲಂಕೃತ ವಾಹನದಲ್ಲಿ ಡಾ.ಅಂಬೇಡ್ಕರ್ ಅವರ ಭಾವಚಿತ್ರವನ್ನು ಅಳವಡಿಸಿ, ವಾದ್ಯವೃಂಧ ಮತ್ತು ಡಿಜೆಯೊಂದಿಗೆ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ ವಿವಿಧ ಸಂಘಸಂಸ್ಥೆಗಳ ಪ್ರಮುಖರಾದ ಹಾನಗಲ್ ಜಯಪ್ಪ, ಪ್ರತಾಪ್ ಶಾಂತಳ್ಳಿ, ಜಗದೀಶ್ ಬೆಟ್ಟದಳ್ಳಿ, ಎಚ್.ಜೆ.ಜವರಪ್ಪ, ಪ್ರವೀಣ್, ಎಂ.ಪಿ.ಹೊನ್ನಪ್ಪ ಇದ್ದರು.








