
ಮಡಿಕೇರಿ ಏ.15 NEWS DESK : ಕೊಡವರ ಹೊಸ ವರ್ಷ ಎಡಮ್ಯಾರ್ ಆಚರಣೆ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಗೋಣಿಕೊಪ್ಪದಲ್ಲಿ ಪಂಜಿನ ಮೆರವಣಿಗೆ ನಡೆಸಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಉಮಾಮಹೇಶ್ವರಿ ದೇವಾಲಯದ ಬಳಿಯಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಪ್ರಮುಖರು ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿದರು.
ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ ಅವರು ಶಾಂತಿಧೂತ ಮಹಾತ್ಮಗಾಂಧಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶವಾದದ ಮಹತ್ವ ಮತ್ತು ಪ್ರಸ್ತುತತೆಯ ಬಗ್ಗೆ ವಿವರಿಸಿದರು.
ಡಾ.ಅಂಬೇಡ್ಕರ್ ಅವರು ರಾಷ್ಟçದಾದ್ಯಂತ ಜಾತಿ, ಮತ, ಧರ್ಮ, ಜನಾಂಗ, ಲಿಂಗ, ಜನಾಂಗೀಯತೆ, ಸಮುದಾಯದ ಗಾತ್ರ ಮತ್ತು ಲಿಂಗವನ್ನು ಲೆಕ್ಕಿಸದೆ ಎಲ್ಲಾ ಜನರ ಯೋಗಕ್ಷೇಮಕ್ಕಾಗಿ ಭೂಮಿಯ ಮೇಲಿನ ಶ್ರೇಷ್ಠ ಸಂವಿಧಾನವನ್ನು ಜನತೆಗೆ ಅರ್ಪಿಸಿದ್ದಾರೆ. ಮಹಾತ್ಮ ಗಾಂಧಿ ಅವರು ಹಕ್ಕುಗಳನ್ನು ಸಾಧಿಸಲು ಇಡೀ ಜಗತ್ತಿಗೆ ಶಾಂತಿಯುತ ಮತ್ತು ಸತ್ಯವಾದ ಅಹಿಂಸಾತ್ಮಕ ಸತ್ಯಾಗ್ರಹವನ್ನು ಕಲಿಸಿದರು.
ಸಿಎನ್‌ಸಿ ತನ್ನ ಕಾನೂನುಬದ್ಧ ಆಕಾಂಕ್ಷೆಗಳನ್ನು ಸಾಧಿಸಲು ಸಂವಿಧಾನದ ತತ್ವಗಳನ್ನು ನಂಬುತ್ತದೆ ಮತ್ತು ಅನುಸರಿಸುತ್ತದೆ. ಗೌರವಾನ್ವಿತ ಗುರಿಗಳನ್ನು ಸಾಧಿಸಲು ಗಾಂಧಿಯವರ ಆದರ್ಶ ಮಾರ್ಗ ಮತ್ತು ಶಾಂತಿಯುತ ಸತ್ಯಾಗ್ರಹದ ಸಾರವನ್ನು ಅಳವಡಿಸಿಕೊಂಡಿದೆ. ಡಾ.ಅಂಬೇಡ್ಕರ್ ಅವರ ಸಂಘಟನೆ, ಶಿಕ್ಷಣ ಮತ್ತು ಚಳವಳಿಯ ತತ್ವವನ್ನು ಅನುಸರಿಸುತ್ತಿದೆ. “ಹಿಂಸಾಚಾರವಿಲ್ಲದೆ ಪ್ರತಿರೋಧ, ಶತ್ರುಗಳಿಲ್ಲದ ಮುಖಾಮುಖಿ, ಗೆಲುವಿನ ತನಕ ಹೋರಾಟ” ಎನ್ನುವ ಗಾಂಧಿಯವರ ಪ್ರಸಿದ್ಧ ಘೋಷವಾಕ್ಯ, ಸಿದ್ಧಾಂತವನ್ನು ಸಿಎನ್‌ಸಿ ಅಳವಡಿಸಿಕೊಂಡಿದೆ ಎಂದರು.
30ನೇ ವರ್ಷದ ಎಡಮ್ಯಾರ್ ಆಚರಣೆ ಮೂಲಕ ಆದಿಮಸಂಜಾತ ಬುಡಕಟ್ಟು ಜನಾಂಗ ಕೊಡವರ ಹಕ್ಕುಗಳ ಕುರಿತು ಆಡಳಿತ ವ್ಯವಸ್ಥೆ ಮತ್ತು ವಿಶ್ವದ ಗಮನ ಸೆಳೆಯಲಾಗುತ್ತಿದ್ದು, ರಾಜ್ಯಾಂಗದತ್ತ ಹಕ್ಕೊತ್ತಾಯಗಳನ್ನು ಪ್ರಚುರಪಡಿಸಲಾಗುತ್ತಿದೆ.
ಸಂವಿಧಾನದ ಆರ್ಟಿಕಲ್ 244 ರಡಿಯಲ್ಲಿ ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ನಿರ್ಣಯದ ಹಕ್ಕು ನೀಡಬೇಕು. ಸಂವಿಧಾನದ 340 ಮತ್ತು 342 ನೇ ವಿಧಿಯಡಿಯಲ್ಲಿ ಮೈಕ್ರೋಸ್ಕ್ಯೂಲ್ ಕೊಡವ ಜನಾಂಗದ ರಕ್ಷಣೆಯಾಗಬೇಕು. ಸಂವಿಧಾನದ 25, 26 ರ ವಿಧಿಯಡಿ ಕೊಡವರ ಗನ್ ನ್ನು ಸೇರ್ಪಡೆಗೊಳಿಸಿ ಕೋವಿ ಹೊಂದುವ ಹಕ್ಕನ್ನು ಆಭಾದಿತಗೊಳಿಸಬೇಕು. ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ ಗೆ ಸೇರಿಸಬೇಕು ಮತ್ತು ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡಬೇಕು.
“ಕೇಂದ್ರ ವಿಸ್ತಾ” ಪಾರ್ಲಿಮೆಂಟ್ ನಲ್ಲಿ ಆದಿಮಸಂಜಾತ ಕೊಡವರನ್ನು ಪ್ರತಿನಿಧಿಸಲು ಸಿಕ್ಕಿಂನ ಬೌದ್ಧ ಸನ್ಯಾಸಿಗಳಿಗಾಗಿ “ಸಂಘ” ಕ್ಷೇತ್ರದ ರೀತಿಯಲ್ಲಿ ಕೊಡವರಿಗೆ ವಿಶೇಷವಾದ ಅಮೂರ್ತ ಕೊಡವ ಸಂಸದೀಯ ಕ್ಷೇತ್ರವನ್ನು ರಚಿಸಬೇಕು. ಕೆಳದಿ ರಾಜ ಪರಿವಾರ ಕ್ರೌರ್ಯ ಮತ್ತು ನಿರಂಕುಶತ್ವದ ಅಧಿಕಾರ ಚಕ್ರದಡಿಯಲ್ಲಿ ನಾಲ್ನಾಡಿನ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿನ ಅರಮನೆಯ ಸಂಚಿನಲ್ಲಿ ಅಮಾಯಕ ಕೊಡವರ ರಾಜಕೀಯ ಹತ್ಯೆಗಳು ಘಟಿಸಿದೆ. ದೇವಟ್ ಪರಂಬುವಿನಲ್ಲಿ ಟಿಪ್ಪು ಸುಲ್ತಾನ್‌ನಿಂದ ನಡೆಸಲ್ಪಟ್ಟ ಕೊಡವ ನರಮೇಧ ದುರಂತದಲ್ಲಿ ಕೊಡವ ಜನಾಂಗದ ಅಮಾನವೀಯ ಮಾರಣ ಹೋಮ ನಡೆದಿದ್ದು, ಈ ಎರಡು ದುರಂತ ಘಟನೆಗಳನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಅಂತರಾಷ್ಟ್ರೀಯ ಹತ್ಯಕಾಂಡ ಪಟ್ಟಿಯಲ್ಲಿ ಸೇರಿಸಬೇಕು. ಮತ್ತು ಅಂತರರಾಷ್ಟ್ರೀಯ ಸ್ಮಾರಕಗಳನ್ನು ನಿರ್ಮಿಸಬೇಕು ಎಂದು ನಾಚಪ್ಪ ಒತ್ತಾಯಿಸಿದರು.
ನರೆದಿದ್ದವರು ಗುರು-ಕಾರೋಣ, ಪವಿತ್ರ ಸಂವಿಧಾನ, ಸೂರ್ಯ-ಚಂದ್ರ, ಭೂಮಿ, ತಾಯಿ- ಪ್ರಕೃತಿ, ಪರ್ವತ ದೇವತೆ, ಜಲ ದೇವತೆ ಕಾವೇರಿ ಹೆಸರಿನಲ್ಲಿ ಸಿಎನ್‌ಸಿ ಬೇಡಿಕೆಗಳ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಕಲಿಯಂಡ ಮೀನಾ ಪ್ರಕಾಶ್, ಬೊಟ್ಟಂಗಡ ಸವಿತಾ, ಅರೆಯಡ ಸವಿತಾ, ಪ್ರೊ.ಇಟ್ಟೀರ ಕಮಲಾಕ್ಷಿ ಬಿದ್ದಪ, ಅಜ್ಜಮಾಡ ಸಾವಿತ್ರಿ, ಚೋಳಪಂಡ ಜ್ಯೋತಿ ನಾಣಯ್ಯ, ಅಜ್ಜಮಾಡ ಡೈಝಾ ಚಿಮ್ಮ, ನಂದಿನೆರವಂಡ ನಿಶಾ, ನಂದಿನೆರವಂಡ ಸೋನಿಯಾ ಅಪ್ಪಣ್ಣ, ನಂದಿನೆರವಂಡ ಬೀನಾ ಅಯ್ಯಣ್ಣ, ಅದೇಂಗಡ ರೂಪ ರಮೇಶ್, ಅಜ್ಜಮಾಡ ಗಣಿಕಾ, ಕಲಿಯಂಡ ಪ್ರಕಾಶ್, ಜಮ್ಮಡ ಮೋಹನ್, ಕಾಂಡೇರ ಸುರೇಶ್, ಅಳ್ಮಂಡ ಜೈ, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಕಿರಿಯಮಾಡ ಶೆರಿನ್, ಮದ್ರಿರ ಕರುಂಬಯ್ಯ, ಡಾ.ಕಾಳಿಮಾಡ ಶಿವಪ್ಪ, ಪ್ರೊ.ಇಟ್ಟಿರ ಬಿದ್ದಪ, ಅರೆಯಡ ಗಿರೀಶ್, ಬೊಟ್ಟಂಗಡ ಗಿರೀಶ್, ಚಂಬAಡ ಜನತ್, ಮಂದಪಂಡ ಮನೋಜ್, ಆಲೆಮಾಡ ರೋಷನ್, ಕಾಡ್ಯಮಾಡ ಗೌತಮ್, ಅಪ್ಪಾರಂಡ ಪ್ರಸಾದ್, ಬೇಪಡಿಯಂಡ ಬಿದ್ದಪ್ಪ, ಬೇಪಡಿಯಂಡ ದಿನು, ಪಾರ್ವಂಗಡ ನವೀನ್, ಪಾರ್ವಂಗಡ ಬೋಸ್, ಪಾರ್ವಂಗಡ ಗಿರೀಶ್, ಪಾರ್ವಂಗಡ ಮಿಲನ್, ಅದೇಂಗಡ ಚಿಟ್ಟಿ ರಮೇಶ್, ಚೋಳಪಂಡ ನಾಣಯ್ಯ, ಪಟ್ರಪಂಡ ರಮೇಶ್, ನಂದಿನೆರವಂಡ ಅಚ್ಚಯ್ಯ, ನಂದಿನೆರವಂಡ ಅಯ್ಯಣ್ಣ, ನಂದಿನೆರವಂಡ ಅಪ್ಪಣ್ಣ, ನಂದೇಟಿರ ಸುಬ್ಬಯ್ಯ, ಪುಟ್ಟಿಚಂಡ ದೇವಯ್ಯ, ಕೊದೇಂಗಡ ನರೇಂದ್ರ, ಕೇಚಮಾಡ ಶರತ್, ಅಜ್ಜಮಾಡ ಚಿಮ್ಮ, ಅಪ್ಪೆಂಗಡ ಮಾಲೆ, ಅಜ್ಜಮಾಡ ಸೋಮಯ್ಯ, ಅರೆಯಡ ಸಾವನ್, ಮಂಡೆಪಂಡ ರಾಜೇಶ್, ಮೇಕತಂಡ ಪವಿ, ಚಾರಿಮಂಡ ಶಿವು, ಸುಳ್ಳಿಮಾಡ ಪ್ರಭು, ಚಂಗನಮಕ್ಕಡ ವಿನು, ಸಾದೆರ ರಮೇಶ್, ಅಚ್ಚಕಾಳೇರ ಸಂತು, ಮಲ್ಚಿರ ಮಹೇಶ್, ಚೀರಂಡ ದಿನು, ಮುಂಜಾಂದಿರ ನಂದ, ಕೋಳೆರ ರಾಜ, ಆದೆಂಗಡ ರಾಖಿ ಸೇರಿದಂತೆ ಹಲವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.









