
ಸೋಮವಾರಪೇಟೆ ಏ.16 NEWS DESK : ಸೋಮವಾರಪೇಟೆ ಸಮೀಪದ ಕೋವರ್‍ಕೊಲ್ಲಿ ಟಾಟಾ ಕಾಫಿ ಸಂಸ್ಥೆಯ ಶ್ರೀ ವನದುರ್ಗಾದೇವಿ ದೇವಾಲಯದ 50ನೇ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.
ಕಾರ್ಯಕ್ರಮದ ಪ್ರಯುಕ್ತ ಬೆಳಿಗ್ಗೆ ಶ್ರೀ ಗಣಪತಿ ಹೋಮ, ವನದುರ್ಗಾದೇವಿಗೆ ಪಂಚಾಮೃತ ಅಭಿಷೇಕ, ಚಂಡಿಕಾ ಹೋಮ ನೆರವೇರಿತು.
ಸಂಜೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಪೂಜಾ ಕಾರ್ಯವನ್ನು ದೇವಾಲಯದ ಅರ್ಚಕ ಬಾಲೂ ಭಟ್, ರಾಘವೇಂದ್ರ ಭಟ್ ಮತ್ತಿತರರು ಇದ್ದರು.








