
ನಾಪೋಕ್ಲು ಏ.17 NEWS DESK : ಮೂರ್ನಾಡು ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಬರೆದ ಲೇಖನಗಳ ಗುಚ್ಛವಾದ “ಕ್ಯಾಂಪಸ್ ಕ್ರೋನಿಕಲ್” ನ್ಯೂಸ್ ಲೆಟರ್ ಬಿಡುಗಡೆ ಹಾಗೂ ವಿಶ್ವ ಪಾರಂಪರಿಕ ದಿನವನ್ನು ಆಚರಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ಪುದಿಯೋಕ್ಕಡ ಸುಬ್ರಮಣಿ ಹಾಗೂ ಖಜಾಂಚಿ ಬಡುವಂಡ ಸುಬ್ರಮಣ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆನ್ಲೈನ್ ಹಾಗೂ ಆಫ್ಲೈನ್ ಗಳಲ್ಲಿ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ವಿಶ್ವ ಪಾರಂಪರಿಕ ದಿನದ ಅಂಗವಾಗಿ ನಡೆದ ವಿದ್ಯಾರ್ಥಿಗಳ ಚುಟುಕು ನಾಟಕ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ದ್ವಿತೀಯ ಬಿ.ಕಾಂ ನ ವಿದ್ಯಾರ್ಥಿನಿ ಹರ್ಷಿತಾ ವಿಶ್ವ ಪಾರಂಪರಿಕ ದಿನದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ರೇಖಾ ಚಿಣ್ಣಪ್ಪ, ಸಂಪಾದಕ ಮಂಡಳಿಯ ಇತರ ಸದಸ್ಯರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ







