ಮಡಿಕೇರಿ ಏ.17 NEWS DESK : ಗೌಡ ಜನಾಂಗದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುವ ಗೌಡ ಪ್ರೀಮಿಯರ್ ಲೀಗ್ ಸೀಸನ್-2 ಪಂದ್ಯಾವಳಿಗೆ ಮಾಜಿ ಶಾಸಕ ಕೊಂಬಾರನ ಜಿ.ಬೋಪಯ್ಯ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಜನಾಂಗ ಬಾಂಧವರು ಸ್ಪರ್ಧಾತ್ಮಕ ಕ್ರೀಡಾಕೂಟ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಈ ಮೂಲಕ ಇನ್ನಷ್ಟು ಪ್ರತಿಭೆಗಳು ರಾಜ್ಯ, ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿ ಜಿಲ್ಲೆಗೆ ಕೀರ್ತಿಯನ್ನು ತರುವಂತಾಗಲಿ ಎಂದು ಶುಭಹಾರೈಸಿದರು.
ಯುವ ವೇದಿಕೆಯ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಅಧ್ಯಕ್ಷತೆ ನಡೆದ ಕಾರ್ಯಕ್ರಮದಲ್ಲಿ ಪುದಿಯನೆರವನ ರಿಶಿತ್ ಮಾದಯ್ಯ ಪ್ರಾಸ್ತಾವಿಕ ಮಾತನಾಡಿದರು.
ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ್, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ ನವೀನ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷ ಅಮೆ ದಮಯಂತಿ, ಸ್ಥಾಪಕ ಅಧ್ಯಕ್ಷ ಪೆÇನ್ನಚ್ಚನ ಮಧುಸೂದನ್, ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಪೈಕೇರ ಮನೋಹರ್ ಮಾದಪ್ಪ, ವೇದಿಕೆಯ ಗೌರವ ಸಲಹೆಗಾರರಾದ ಕಟ್ಟೆಮನೆ ಸೋನಾಜಿತ್, ವೇದಿಕೆಯ ಕಾನೂನು ಸಮಿತಿ ಅಧ್ಯಕ್ಷರಾದ ಕೊಟ್ಟಕೇರಿಯನ ದಯಾನಂದ್, ಉದಯೋನ್ಮುಖ ಕ್ರಿಕೆಟ್ ಆಟಗಾರ ಸುಳ್ಯಕೋಡಿ ರಿಷಿ ಬೋಪಣ್ಣ ಗೌಡ ಸಂಪ್ರದಾಯದ ವಿಶೇಷತೆ ಹೊಂದಿರುವ ಟ್ರೋಫಿ ಮತ್ತು ಬಾಲನ್ನು ಅನಾವರಣಗೊಳಿಸಿ, ಪಂದ್ಯಾವಳಿಗೆ ಶುಭಹಾರೈಸಿದರು.
ಜನಾಂಗದ ಸಂಪ್ರದಾಯದಂತೆ ತೋಟಂಬೈಲ್ ಅನಂತಕುಮಾರ್ ಗಣಪತಿಗೆ ಪೂಜೆ ನೆರವೇರಿಸಿ ಒಕ್ಕಣೆ ಹೇಳಿದರು.
ಈ ಸಂದರ್ಭ ಗೌಡ ಮಹಿಳಾ ಒಕ್ಕೂಟದ ಸದಸ್ಯರು ಗಣಪತಿಯನ್ನು ಸ್ತುತಿಸಿದರು. ನವೀನ್ ದೇರಳ ಸ್ವಾಗತಿಸಿದರು, ಪಾಂಡಿ ಕೀರ್ತಿ ಗಿರೀಶ್ ಪ್ರಾರ್ಥಿಸಿದರು. ಮೂಡಗದ್ದೆ ವಿನೋದ್ ನಿರೂಪಿಸಿದರು, ಕೆದಂಬಾಡಿ ಕಾಂಚನ ಗೌಡ ವಂದಿಸಿದರು.
ಕಾರ್ಯಕ್ರಮದಲ್ಲಿ ಖಜಾಂಚಿ ನೆಯ್ಯಣಿ ಸಂಜು ಅವರ ನಿಧನಕ್ಕೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.
ಮೊದಲು ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಗೌಡ ಯುವ ವೇದಿಕೆ ರೈಸಿಂಗ್ ಸ್ಟಾರ್ಸ್ ಮಧ್ಯೆ ಕ್ರೀಡಾಕೂಟದ ಪ್ರದರ್ಶನ ಪಂದ್ಯ ನಡೆದು ಯುವ ವೇದಿಕೆ ತಂಡ ಜಯಗಳಿಸಿತು.









