
ಸೋಮವಾರಪೇಟೆ ಏ.17 NEWS DESK : ಶ್ರೀ ರಾಮನವಮಿ ಉತ್ಸವ ಸಮಿತಿ ಮತ್ತು ಹಿಂದುಜಾಗರಣಾ ವೇದಿಕೆ ವತಿಯಿಂದ ಆಂಜನೇಯ ದೇವಾಲಯದಲ್ಲಿ ಶ್ರೀ ರಾಮನವಮಿ ಆಚರಿಸಲಾಯಿತು.
ಪಟ್ಟಣದ ರಾಮಮಂದಿರದಲ್ಲಿ ರಾಮನವಮಿ ಅಂಗವಾಗಿ ಮುಂಜಾನೆಯಿಂದಲೇ ವಿಶೇಷ ಪೂಜೆ, ಹೋಮಹವನ ನಡೆಯಿತು.
ದೇವಾಲಯದಲ್ಲಿ ಭಕ್ತಾದಿಗಳಿಗೆ ಪಾನಕ ಮತ್ತು ಪ್ರಸಾದ ವಿನಿಯೋಗ ನಡೆಯಿತು. ಮತ್ತು ನೆರೆದಿದ್ದ ಭಕ್ತಾದಿಗಳಿಗೆ ಅನ್ನದಾನ ನಡೆಯಿತು.
ಪಟ್ಟಣದ ಬಸ್ ನಿಲ್ದಾಣ ಮತ್ತು ಮಹಾತ್ಮಗಾಂಧಿ ವೃತ್ತದ ಬಳಿ ಸಾರ್ವಜನಿಕರಿಗೆ ಪಾನಕ ವಿತರಿಸಲಾಯಿತು.
ರಾಮನವಮಿ ಶೋಭ ಯಾತ್ರೆ, ಶಾಂತಿಯುವವಾಗಿ ನಡೆಯಲು ಡಿವೈಎಸ್‍ಪಿ ಗಂಗಾಧರಪ್ಪ ಮತ್ತು ಇನ್ಸ್‍ಪೆಕ್ಟರ್ ವಸಂತ್ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ನಡೆಯಿತು.







