ಮಡಿಕೇರಿ ಏ.20 NEWS DESK : ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ “ನಮ್ಮ ನಡೆ ಮತಗಟ್ಟೆಯ ಕಡೆ” ಮತದಾನ ಜಾಗೃತಿ ಅಭಿಯಾನ ನಡೆಯಿತು.
ಜಾಥಕ್ಕೆ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಬಿ.ಕಾವೇರಿಯಪ್ಪ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬ ಭಾರತೀಯನ್ನು ಮತದಾನದಲ್ಲಿ ಭಾಗವಹಿಸಬೇಕು. ಭಾರತದ ಪ್ರಜಾಪ್ರಭುತ್ವ ದೇಶ. ಮತದಾನ ಇದರ ತಿರುಳು 18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಮತದಾನದಲ್ಲಿ ಭಾಗವಹಿಸುವ ಅವಕಾಶವನ್ನು ಸಂವಿಧಾನದ ನೀಡಿದೆ.ಅದ್ದರಿಂದ ಮತದಾನದಲ್ಲಿ ತಪ್ಪದೆ ಭಾಗವಹಿಸಿ ಮತದಾನ ಯಶಸ್ವಿ ನಾವು ಪ್ರಯತ್ನಿಸೋಣ ಹಾಗೂ ಇತರಿಗೂ ತಿಳಿಸೋಣ ಎಂದು ತಿಳಿಸಿದರು.
ಯೋಜನಾಧಿಕಾರಿ ವನಿತ್ ಕುಮಾರ್ ಹಾಜರಿದ್ದರು.
ಕಾವೇರಿ ಕಾಲೇಜಿನಿಂದ ಆರಂಭಗೊಂಡ ಜಾಥಾವು ಗೋಣಿಕೊಪ್ಪಲು- ವಿರಾಜಪೇಟೆ ಮುಖ್ಯ ರಸ್ತೆಯ ಮೂಲಕ ಸಾಗಿ ಖಾಸಗಿ ಬಸ್ ನಿಲ್ದಾಣ ವರಗೆ ಜಾಥ ನಡೆಸಲಾಯಿತು.








