Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಶಾಸಕ ಎ.ಎಸ್.ಪೊನ್ನಣ್ಣ ಅವರ ಜನ್ಮದಿನಾಚರಣೆ : ತಲಕಾವೇರಿಯಲ್ಲಿ ವಿಶೇಷ ಪೂಜೆ : ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ* 
  • *ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5792 ಪ್ರಕರಣಗಳು ಇತ್ಯರ್ಥ*
  • *ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಡೆಂಗ್ಯೂ ಕುರಿತು ಮಾಹಿತಿ ಕಾರ್ಯಾಗಾರ*
  • *ಅಂತರ ಜಿಲ್ಲಾ ಫುಟ್‌ಬಾಲ್ ಪಂದ್ಯಾವಳಿ : ಕೊಡಗು ತಂಡಕ್ಕೆ ಸತತ ಎರಡು ಭರ್ಜರಿ ಜಯ*
  • *ಶಕ್ತಿ ವೃದ್ಧಾಶ್ರಮದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಅವರ ಹುಟ್ಟುಹಬ್ಬ ಆಚರಣೆ : ಕಂಬಳಿ ವಿತರಣೆ*
  • ಜು.11 ಮತ್ತು 12ರಂದು ನಾಪೋಕ್ಲುವಿನಲ್ಲಿ “ಸಾಹಿತ್ಯೋತ್ಸವ-2026”
  • *ಜಲಾಶಯದ ನೀರನ್ನು ಅವಲಂಬಿಸಿ ಬೆಳೆ ಬೆಳೆಯದಂತೆ ರೈತರಿಗೆ ಕೊಡಗು ಜಿಲ್ಲಾಧಿಕಾರಿ ಮನವಿ*
  • *ಬಾಡಗರಕೇರಿ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಸಂಪನ್ನ*
  • *ಚೆಟ್ಟಿಮಾನಿ, ಕುಂದಚೇರಿ, ಕಾನಕಂಡಿ ರಸ್ತೆ ಉದ್ಘಾಟನೆ : ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಬದ್ಧ : ಶಾಸಕ ಎ.ಎಸ್.ಪೊನ್ನಣ್ಣ ಭರವಸೆ*
  • *ಬಿ.ಆರ್.ಭವಿಷ್‍ಗೆ ಸನ್ಮಾನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಹಿಳಾ ಸಬಲೀಕರಣ ಕಾರ್ಯಕ್ರಮ : ನಾನು ಕರ್ನಾಟಕದ ಮಹಿಳೆಯರ ಬೆಂಬಲಕ್ಕೆ ದೃಢವಾಗಿ ನಿಂತಿದ್ದೇನೆ : ತ್ರಿಶಿಖಾ ಕುಮಾರಿ ಒಡೆಯರ್*
ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

*ಮಹಿಳಾ ಸಬಲೀಕರಣ ಕಾರ್ಯಕ್ರಮ : ನಾನು ಕರ್ನಾಟಕದ ಮಹಿಳೆಯರ ಬೆಂಬಲಕ್ಕೆ ದೃಢವಾಗಿ ನಿಂತಿದ್ದೇನೆ : ತ್ರಿಶಿಖಾ ಕುಮಾರಿ ಒಡೆಯರ್*

ಏಪ್ರಿಲ್ 21, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮೈಸೂರು ಏ.21 NEWS DESK : ಮೈಸೂರಿನಲ್ಲಿ ನಡೆದ ಮಹಿಳಾ ಸಬಲೀಕರಣ ಮತ್ತು ವಾಣಿಜ್ಯೋದ್ಯಮ’ ಜಾಗೃತಿ ಕಾರ್ಯಕ್ರಮದಲ್ಲಿ ಮಹಾರಾಣಿ ತ್ರಿಶಿಖಾ ಕುಮಾರಿ ಒಡೆಯರ್ ಭಾಗವಹಿಸಿ ತಮ್ಮ ಬೆಂಬಲ ಸೂಚಿಸಿದರು. ಮಹಿಳೆಯರ ಬೆಳವಣಿಗೆ ಮತ್ತು ಸಮೃದ್ಧಿಗೆ ಅನುಕೂಲಕರ ವಾತಾವರಣ ಸೃಷ್ಟಿಸುವ ಬಗ್ಗೆ ಒತ್ತಿ ಹೇಳಿದ ಮಹಾರಾಣಿ “ನಾವು ಈ ಸಬಲೀಕರಣದ ಸಾಮೂಹಿಕ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ, ನಾನು ಕರ್ನಾಟಕದ ಮಹಿಳೆಯರ ಬೆಂಬಲಕ್ಕೆ ದೃಢವಾಗಿ ನಿಂತಿದ್ದೇನೆ. ಅವರಿಗೆ ಅಗತ್ಯವಾದ ಪರಿಕರಗಳು ಮತ್ತು ಜ್ಞಾನವನ್ನು ಒದಗಿಸುವ ಮೂಲಕ, ನಾವು ಆ ಸಮುದಾಯಗಳನ್ನು ಉನ್ನತೀಕರಿಸಿ ಅವರ ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡಬಹುದು” ಎಂದರು. ‘ಮಹಿಳಾ ಸಬಲೀಕರಣ ಮತ್ತು ಉದ್ಯಮಶೀಲತೆ’ ಕಾರ್ಯಕ್ರಮದ ಯಶಸ್ಸಿನ ಕುರಿತು ಮಾತನಾಡಿದ ಮಹಾರಾಣಿ ತ್ರಿಶಿಖಾ ಕುಮಾರಿ ಒಡೆಯರ್ ಅವರು ಈ ಕಾರ್ಯಕ್ರಮವು ತರುವ ಪರಿವರ್ತಕ ಪರಿಣಾಮದ ಭರವಸೆಯ ಬಗ್ಗೆ ವಿವಿರಿಸಿದರು. “ಈ ಕಾರ್ಯಕ್ರಮವು ಮಹಿಳೆಯರಿಗೆ ಜ್ಞಾನವನ್ನು ನೀಡುವುದಲ್ಲದೆ, ಅವರಲ್ಲಿ ಆತ್ಮವಿಶ್ವಾಸ ಮತ್ತು ಕ್ಷಮತೆಯನ್ನು ತರುತ್ತದೆ. ಸರ್ಕಾರ- ಸಾರ್ವಜನಿಕ ಸಹಯೋಗದ ಪ್ರಯತ್ನಗಳ ಮೂಲಕ, ನಾವು ಎಲ್ಲರನ್ನೂ ಒಳಗೊಂಡ ಸಮಾಜವನ್ನು ಸೃಷ್ಟಿಸಿ, ಮಹಿಳೆಯರಿಗೆ ಅಭಿವೃದ್ಧಿ ಹೊಂದಲು ಅವಕಾಶ ಸೃಷ್ಟಿಸಬಹುದು ಎಂದು ಹೇಳಿದರು. CSIR-NIIST ನ ಹಿರಿಯ ವಿಜ್ಞಾನಿ ವೆಂಕಟೇಶ್ ತುಳಸಿರಾಮನ್, “ನಾವು ಆಧುನಿಕ ಪ್ರಪಂಚದ ಸಂಕೀರ್ಣತೆಗಳನ್ನು ಎದುರಿಸುತ್ತಿರುವಾಗ, ಮಹಿಳೆಯರನ್ನು ಸಬಲೀಕರಣಗೊಳಿಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರವನ್ನು ಅಲ್ಲಗೆಳೆಯಲಾಗುವುದಿಲ್ಲ. ಅತ್ಯಾಧುನಿಕ ಸಂಶೋಧನೆ ಮತ್ತು ನವೀನ ಪರಿಹಾರಗಳನ್ನು ಬಳಸಿಕೊಳ್ಳುವ ಮೂಲಕ ಮಹಿಳೆಯರು ಕೇವಲ ತಮ್ಮ ಉತ್ಪಾದಕತೆ ಮತ್ತು ಸ್ಪರ್ಧಾತ್ಮಕತೆಯನ್ನು ಮಾತ್ರ ಹೆಚ್ಚಿಸಿಕೊಳ್ಳದೇ, ತಮ್ಮ ಸಮುದಾಯಗಳಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಕೂಡ ಹೆಚ್ಚಿಸಬಹುದು” ಎಂದರು. ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಸ್‌ಎಂಇ) ಮತ್ತು ಸರ್ಕಾರಿ ಉಪಕ್ರಮಗಳಲ್ಲಿನ ಸಲಹೆಗಾರ ಅಭಿಷೇಕ್ ಮಾತನಾಡಿ, “ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸುವುದು ಕೇವಲ ವ್ಯಾಪಾರವನ್ನು ಸೃಷ್ಟಿಸುವುದಕ್ಕಾಗಿಯಲ್ಲ ಇದು ನಾವೀನ್ಯತೆ ಮತ್ತು ಬೆಳವಣಿಗೆಯ ಪರಿಸರ ವ್ಯವಸ್ಥೆಗಳನ್ನು ಉತ್ತೇಜಿಸುವ ಕುರಿತಾಗಿದೆ. ಈ ಉಪಕ್ರಮಗಳ ಮೂಲಕ ಇಂದಿನ ಚಲನಶೀಲ ಮಾರುಕಟ್ಟೆಯಲ್ಲಿ ಅಭಿವೃದ್ಧಿ ಹೊಂದಲು ಮಹಿಳೆಯರಿಗೆ ಅಗತ್ಯವಾದ ಪರಿಕರಗಳು ಮತ್ತು ಜಾಲಗಳನ್ನು ನೀಡಿ, ಹಿಂದೆಂದೂ ಕಂಡಿರಿದ ಉದ್ಯಮಶೀಲತೆಯ ಸಂಸ್ಕೃತಿಯನ್ನು ಪೋಷಿಸಲಾಗುವುದು’ ಎಂದರು. ನಾಲ್ಕು ಜಿಲ್ಲೆಗಳ ಕೃಷಿ ವಲಯದ ವಿಶೇಷ ತಾಂತ್ರಿಕ ಅಧಿಕಾರಿ ಶುಭಾ ಪುಟ್ಟಸ್ವಾಮಿ ಮಾತನಾಡಿ, “ಈ ಕಾರ್ಯಕ್ರಮವು ಕೇವಲ ಜ್ಞಾನವನ್ನು ನೀಡುವುದಕ್ಕಾಗಿಲ್ಲ. ಇದು ಕೃಷಿಯಲ್ಲಿ ತೊಡಗಿಕೊಂಡ ಮಹಿಳೆಯರಲ್ಲಿ ಕ್ಷಮತೆ ಮತ್ತು ಚಾತುರ್ಯವನ್ನು ಬೆಳೆಸುವ ಕುರಿತಾಗಿದೆ. ಅವರಿಗೆ ಸರ್ಕಾರದ ಯೋಜನೆಗಳನ್ನು ಪರಿಚಯಿಸುವ ಮೂಲಕ ನಾವು ಅವರನ್ನು ಹವಾಮಾನ ವೈಪರೀತ್ಯದ ಸವಾಲುಗಳಿಗೆ ಸಶಕ್ತಗೊಳಿಸುತ್ತೇವೆ. ತನ್ಮೂಲಕ ಅವರು ಅವಕಾಶಗಳನ್ನು ಪಡೆದುಕೊಂಡು, ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಲಿದ್ದಾರೆ” ಎಂದರು. ಹೆಸರಾಂತ ಸಾಮಾಜಿಕ ಉದ್ಯಮಿ ಮತ್ತು ನೆಕ್ಟರ್ ಫ್ರೆಶ್ ಮತ್ತು ನಮನ್ ಸಂಸ್ಥಾಪಕರಾದ ಛಾಯಾ ನಂಜಪ್ಪ ಅವರು ಮಾತನಾಡಿ “ನಮ್ಮ ಸಾಮೂಹಿಕ ದೃಷ್ಟಿಕೋನವು ಎಲ್ಲರ ಒಳಗೊಳ್ಳುವಿಕೆ ಮತ್ತು ಸಬಲೀಕರಣದಲ್ಲಿ ಬೇರೂರಿದೆ. ಈ ಉಪಕ್ರಮದ ಮೂಲಕ, ನಾವು ಮಹಿಳೆಯರು ಮತ್ತು ಸರ್ಕಾರದ ಯೋಜನೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದಲ್ಲದೆ, ಸಂಸ್ಕೃತಿಯನ್ನು ಬೆಳೆಸುತ್ತಿದ್ದೇವೆ. ಸಹಭಾಗಿತ್ವ ಮತ್ತು ಒಗ್ಗಟ್ಟಿನಿಂದ ಅಂಚಿನಲ್ಲಿರುವ ಸಮುದಾಯಗಳ ಧ್ವನಿಯನ್ನು ಆಲಿಸುವ ಮೂಲಕ, ನಾವು ಎಲ್ಲರಿಗೂ ಹೆಚ್ಚು ಸಮಾನ ಮತ್ತು ಸಮೃದ್ದ ಭವಿಷ್ಯಕ್ಕಾಗಿ ದಾರಿ ಮಾಡಿಕೊಡೋಣ” ಎಂದರು. “ಮಹಿಳಾ ಸಬಲೀಕರಣ ಮತ್ತು ಉದ್ಯಮಶೀಲತೆ” ಕಾರ್ಯಕ್ರಮದ ಈ ಅದ್ಭುತ ಯಶಸ್ಸು, ಮಹಿಳೆಯರು ಅಭಿವೃದ್ಧಿ ಹೊಂದಿ, ಘನತೆ ಮತ್ತು ಉದ್ದೇಶದಿಂದ ಮುನ್ನಡೆಯುವ ವಾತಾವರಣವನ್ನು ಬೆಳೆಸುವ ಮೈಸೂರಿನ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ಆಯೋಜಕರು ಅಭಿಪ್ರಾಯಪಟ್ಟರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಶಾಸಕ ಎ.ಎಸ್.ಪೊನ್ನಣ್ಣ ಅವರ ಜನ್ಮದಿನಾಚರಣೆ : ತಲಕಾವೇರಿಯಲ್ಲಿ ವಿಶೇಷ ಪೂಜೆ : ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ* 

ಜುಲೈ 9, 2026

*ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5792 ಪ್ರಕರಣಗಳು ಇತ್ಯರ್ಥ*

ಜುಲೈ 9, 2026

*ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಡೆಂಗ್ಯೂ ಕುರಿತು ಮಾಹಿತಿ ಕಾರ್ಯಾಗಾರ*

ಜುಲೈ 9, 2026

*ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5792 ಪ್ರಕರಣಗಳು ಇತ್ಯರ್ಥ*

ಜುಲೈ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

ಮಡಿಕೇರಿ ಜು.9 NEWS DESK : ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 2002ರ ನ.4…

*ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಡೆಂಗ್ಯೂ ಕುರಿತು ಮಾಹಿತಿ ಕಾರ್ಯಾಗಾರ*

ಜುಲೈ 9, 2026

*ಅಂತರ ಜಿಲ್ಲಾ ಫುಟ್‌ಬಾಲ್ ಪಂದ್ಯಾವಳಿ : ಕೊಡಗು ತಂಡಕ್ಕೆ ಸತತ ಎರಡು ಭರ್ಜರಿ ಜಯ*

ಜುಲೈ 9, 2026

*ಶಕ್ತಿ ವೃದ್ಧಾಶ್ರಮದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಅವರ ಹುಟ್ಟುಹಬ್ಬ ಆಚರಣೆ : ಕಂಬಳಿ ವಿತರಣೆ*

ಜುಲೈ 9, 2026

ಜು.11 ಮತ್ತು 12ರಂದು ನಾಪೋಕ್ಲುವಿನಲ್ಲಿ “ಸಾಹಿತ್ಯೋತ್ಸವ-2026”

ಜುಲೈ 9, 2026

*ಜಲಾಶಯದ ನೀರನ್ನು ಅವಲಂಬಿಸಿ ಬೆಳೆ ಬೆಳೆಯದಂತೆ ರೈತರಿಗೆ ಕೊಡಗು ಜಿಲ್ಲಾಧಿಕಾರಿ ಮನವಿ*

ಜುಲೈ 9, 2026

*ಬಾಡಗರಕೇರಿ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಸಂಪನ್ನ*

ಜುಲೈ 9, 2026

*ಚೆಟ್ಟಿಮಾನಿ, ಕುಂದಚೇರಿ, ಕಾನಕಂಡಿ ರಸ್ತೆ ಉದ್ಘಾಟನೆ : ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಬದ್ಧ : ಶಾಸಕ ಎ.ಎಸ್.ಪೊನ್ನಣ್ಣ ಭರವಸೆ*

ಜುಲೈ 9, 2026

*ಬಿ.ಆರ್.ಭವಿಷ್‍ಗೆ ಸನ್ಮಾನ*

ಜುಲೈ 8, 2026

*ವಿದ್ಯಾರ್ಥಿಗಳಿಗೆ ಪರಿಕರಗಳ ವಿತರಣೆ : ವಿದ್ಯಾರ್ಥಿಗಳು ಶಿಕ್ಷಣಕ್ಕೆ ಒತ್ತು ನೀಡಿ : ಪಿ.ಯು.ರಾಬಿನ್ ದೇವಯ್ಯ*

ಜುಲೈ 8, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.