
ಮಡಿಕೇರಿ ಏ.22 NEWS DESK : ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಸಲ್ಪಡುತ್ತಿರುವ ಕಾರ್ಕಳದ ಪ್ರಸಿದ್ಧ ಪುಸ್ತಕ ಮಳಿಗೆಯಾದ `ಪುಸ್ತಕ ಮನೆ’ಯಲ್ಲಿ ಏ.23 ರಿಂದ ಏ.29 ರವರೆಗೆ ವಿಶ್ವ ಪುಸ್ತಕ ದಿನಾಚರಣೆಯ ಪ್ರಯುಕ್ತ `ಪುಸ್ತಕ ಸಂತೆ’ ಕಾರ್ಯಕ್ರಮ ನಡೆಯಲಿದೆ.
ಏ.23ರ ಬೆಳಿಗ್ಗೆ 11 ಗಂಟೆಗೆ ಖ್ಯಾತ ವಾಗ್ಮಿ, ಸಾಹಿತಿ ಪ್ರಭಾಕರ ಕೊಂಡಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಈ ಸಂದರ್ಭ ಎಲ್ಲಾ ಪುಸ್ತಕಗಳಿಗೂ ಶೇ.10 ರಿಂದ 50 ವಿಶೇಷ ರಿಯಾಯಿತಿಯನ್ನು ನೀಡಲಾಗುವುದು. ಜೊತೆಗೆ ಪ್ರತೀ ಖರೀದಿಯೊಂದಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತದೆ. ಪುಸ್ತಕ ಪ್ರೇಮಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.









