ಸುಂಟಿಕೊಪ್ಪ ಏ.22 NEWS DESK : ಸುಂಟಿಕೊಪ್ಪ ಹೋಬಳಿ ಕಾಂಗ್ರೆಸ್ ಅಧ್ಯಕ್ಷರಾಗಿ ರಜಾಕ್, ನಗರ ಅಧ್ಯಕ್ಷರಾಗಿ ರಫೀಕ್‍ಖಾನ್, ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅನೂಪ್ ಹಾಗೂ ಸುಂಟಿಕೊಪ್ಪ ಪಂಚಾಯಿತಿ ವಲಯ ಅಲ್ಪಸಂಖ್ಯಾತ ಘಟಕಕ್ಕೆ ಅಬ್ಧುಲ್ ಅಜೀಜ್ ಆಯ್ಕೆಯಾಗಿದ್ದಾರೆ.ಗದ್ದೆಹಳ್ಳದ ಎಸ್.ಎಸ್. ಇಂಟನ್ರ್ಯಾಷನಲ್ ಸಭಾಂಗಣದಲ್ಲಿ ಶಾಸಕ ಡಾ.ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜಾ ಉತ್ತಪ್ಪ ಹಾಗೂ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಕಾಂಗ್ರೆಸ್‍ನ ವಿವಿಧ ಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದರು.
ಸಭೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಎ.ಉಸ್ಮಾನ್, ಸುಂಟಿಕೊಪ್ಪ ಗ್ರಾ.ಪಂ ಉಪಾಧ್ಯಕ್ಷೆ ಶಿವಮ್ಮ, ಸದಸ್ಯರಾದ ಸಬಾಸ್ಟೀನ್, ಮಾಜಿ ಸದಸ್ಯರಾದ ರೋಸ್‍ಮೇರಿ ರಾಡ್ರಿಗಸ್, ನಿರ್ಮಲಾ ಶೇಷಪ್ಪ, ರತ್ನ, ರಜಾಕ್, ಬೂತ್ ಅಧ್ಯಕ್ಷ ಷರೀಪ್, ಕುಶಾಲನಗರ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್, ಸುಂಟಿಕೊಪ್ಪ ನಗರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಅಜೀಜ್, ಎನ್‍ಎಸ್‍ಯುಐ ಘಟಕದ ಜಿಲ್ಲಾ ಉಪಾದ್ಯಕ್ಷ ಹಾರಿಸ್, ಕಾಂಗ್ರೆಸ್ ಮುಂಖಡರಾದ ಇಸಾಖ್ ಖಾನ್, ಆರ್.ಎಚ್.ಷರೀಪ್, ರಮೀಜ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.







