
ಮಡಿಕೇರಿ ಏ.22 NEWS DESK : ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಡಿಕೇರಿ ನಗರದ ಬೂತ್ 214 ಹಾಗೂ 215 ರಲ್ಲಿ ಮೈಸೂರು-ಕೊಡಗು ಲೋಕಸಭಾ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರ ಪರ ಬಿರುಸಿನ ಮತ ಪ್ರಚಾರ ನಡೆಯಿತು.
ಕೊಡಗು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಡಿಸಿಸಿ ಸದಸ್ಯರಾದ ರಜಾಕ್, ಖಲೀಲ್ ಭಾಷ, ಲಿಯಾಕತ್ ಅಲಿ, ಅಲ್ಪಸಂಖ್ಯಾತ ಮಡಿಕೇರಿ ಬ್ಲಾಕ್ ಅಧ್ಯಕ್ಷ ಕೆ.ಜಿ.ಪೀಟರ್ ಅವರ ನೇತೃತ್ವದಲ್ಲಿ ನಗರದ ಮಾರುಕಟ್ಟೆ, ಹಿಲ್ ರಸ್ತೆ, ಮಹದೇವಪೇಟೆ, ಮಖಾನ್ ಗಲ್ಲಿ, ಹಿಂದುಸ್ತಾನಿ ಶಾಲೆ ವಠಾರ, ಕಾಲೇಜು ರಸ್ತೆ ಹಾಗೂ ಪೇಟೆರಾಮ ಮಂದಿರ ರಸ್ತೆಗಳ ವಿವಿಧ ಅಂಗಡಿ, ಮುಂಗಟ್ಟು ಹಾಗೂ ಸಾರ್ವಜನಿಕರಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಮತ ಯಾಚನೆ ಮಾಡಲಾಯಿತು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ 214 ಅಧ್ಯಕ್ಷ ಎಂ.ಎನ್.ರಾವೂಫ್, ಮಡಿಕೇರಿ ನಗರದ ನಾಮನಿರ್ದೇಶಿತ ಸದಸ್ಯ ಯಾಕೂಬ್, ವಕ್ಫ್ ಸದಸ್ಯ ಇಮ್ರಾನ್, ಗ್ಯಾರೆಂಟಿ ತಾಲೂಕು ಅನುಷ್ಠಾನದ ಸಮಿತಿಯ ಇಬ್ರಾಹಿಂ, ಮಡಿಕೇರಿ ನಗರ ಕಾಂಗ್ರೆಸ್ ಬೂತ್ ಅಧ್ಯಕ್ಷರುಗಳಾದ ಕೌಸರ್, ರಿಯಾಜುದ್ದೀನ್, ಹಫೀಸ್ ರೆಹಮಾನ್, ಹುಸೈನ್ ಹಾಗೂ ಸ್ಥಳೀಯ ಮುಖಂಡರಾದ ಸಲೀಂ, ಅಬ್ದುಲ್, ನುಸಾಯಿ ನ ಅಹ್ಮದ್, ಖಲೀಲ್, 214 ಬೂತ್ ಉಪಾಧ್ಯಕ್ಷ ಮತ್ತು ಸೇವಾದಳದ ಕಾರ್ಯದರ್ಶಿ ಹಬೀಬ್, ಬೂತ್ ಸದಸ್ಯರಾದ ಅಜೀಜ್, ಅಯ್ಯುಬ್, ನಜಿರ್ ಹಾಗೂ ಕಾರ್ಯಕರ್ತರು ಹಾಜರಿದ್ದರು.








