ಮಡಿಕೇರಿ ಏ.25 NEWS DESK : ಕುಂಡ್ಯೋಳಂಡ ಹಾಕಿ ಕಾರ್ನಿವಲ್ ಕೊಡವ ಕೌಟುಂಬಿಕ ಹಾಕಿ ಹಬ್ಬದ ಸೆಮಿಫೈನಲ್ ಪಂದ್ಯಾವಳಿ ಏ.27 ರಂದು ಶನಿವಾರ ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ ಹಾಗೂ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಪಾಲ್ಗೊಳ್ಳಲಿದ್ದಾರೆ. ಏ.27 ರ ಶನಿವಾರ ಬೆಳಗ್ಗೆ 7 ಗಂಟೆಗೆ ಕಕ್ಕಬ್ಬೆಯಿಂದ ನಾಪೋಕ್ಲುವರೆಗೆ ಕೊಡವ ಕುಟುಂಬಗಳ ನಡುವೆ 2.50 * 4 ಕಿ.ಮೀ ದೂರದ ಓಟದ ಸ್ಪರ್ಧೆ “ಫ್ಯಾಮಿಲಿ ರಿಲೇ” ನಡೆಯಲಿದೆ. ಒಂದು ಕುಟುಂಬ ತಂಡದಲ್ಲಿ ಓರ್ವ ಮಹಿಳೆ ಸೇರಿ ನಾಲ್ವರು ಪಾಲ್ಗೊಳ್ಳಬಹುದಾಗಿದೆ. ವಿಜೇತರಿಗೆ ಮೊದಲ ಬಹುಮಾನ ರೂ.50 ಸಾವಿರ, ದ್ವಿತೀಯ ಬಹುಮಾನ 30 ಸಾವಿರ ಹಾಗೂ ತೃತೀಯ 20 ಸಾವಿರ ರೂ. ನೀಡಲಾಗುವುದು. ಸ್ಪರ್ಧಿಗಳು ಅಂದು ಬೆಳಗ್ಗೆ 6 ಗಂಟೆಗೆ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಹಾಜರಿರಬೇಕು. ನೋಂದಣಿಗೆ ಏ.26 ಬೆಳಗ್ಗೆ 11 ಗಂಟೆಯವರೆಗೆ ಕಾಲಾವಕಾಶವಿದ್ದು, ಸ್ಪರ್ಧಿಗಳು ಮೊ.ಸಂಖ್ಯೆ 91489 30760 ನ್ನು ಸಂಪರ್ಕಿಸಬಹುದಾಗಿದೆ ಎಂದರು.
“ದೊಡ್ಡ ಮೀಸೆ ಮತ್ತು ಉದ್ದ ಜಡೆಯ ಪ್ರದರ್ಶನ”ದ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗಿದ್ದು, ಸ್ಪರ್ಧಿಗಳು ಮೊ.ಸಂಖ್ಯೆ 94488 39988 ನ್ನು ಸಂಪರ್ಕಿಸಬಹುದಾಗಿದೆ ಎಂದು ಹಾಕಿ ಹಬ್ಬದ ಸಂಚಾಲಕ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ತಿಳಿಸಿದ್ದಾರೆ.








