
ಮಡಿಕೇರಿ ಏ.26 NEWS DESK : ಕೊಡಗರಹಳ್ಳಿಯ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದ ವಾರ್ಷಿಕ ಉತ್ಸವವು ಏ.29 ರಂದು ನಡೆಯಲಿದೆ.
ದೇವಾಲಯದಲ್ಲಿ ಮುಂಜಾನೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದ್ದು, ಪೂರ್ವಾಹ್ನ 7 ಗಂಟೆಗೆ ಮಹಾಗಣಪತಿ ಹೋಮ, 12 ಗಂಟೆಗೆ ಮಹಾಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.
ಮಧ್ಯಾಹ್ನ 1 ಗಂಟೆಗೆ ತಕ್ಕಾರ ಮನೆಯಿಂದ ಭಂಡಾರ ತರುವುದು, 1.30 ರಿಂದ ಹಬ್ಬಾಚರಣೆ, 1.45 ರಿಂದ ಅನ್ನ ಸಂತರ್ಪಣೆ ನೆರವೇರಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯ ಟ್ರಸ್ಟ್‍ನ ಪ್ರಮುಖರು ಕೋರಿದ್ದಾರೆ.








