ಮಡಿಕೇರಿ ಏ.26 NEWS DESK : ಮತದಾನ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಮತಗಟ್ಟೆ ಆವರಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ದಕ್ಷಿಣ ಕೊಡಗಿನ ಬಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ.
ಪೊನ್ನಂಪೇಟೆ ತಾಲ್ಲೂಕಿನ ಕೊಂಗಣ ಗ್ರಾಮದ ಪದಾರ್ಥಿ ಮನೋಹರ್(58) ಎಂಬುವವರೇ ಮೃತಪಟ್ಟವರು.
ಜಿಲ್ಲೆಯ ಖ್ಯಾತ ಚೆಂಡೆ ವಾದಕರಲ್ಲಿ ಒಬ್ಬರಾಗಿದ್ದ ಮನೋಹರ್, ಮಧ್ಯಾಹ್ನ 11.45ರ ವೇಳೆಗೆ ಬಿ.ಶೆಟ್ಟಿಗೇರಿ ಗ್ರಾಮದ ಮತಗಟ್ಟೆ ಸಂಖ್ಯೆ 179ರಲ್ಲಿ ಮತ ಚಲಾಯಿಸಿ ಹೊರ ಬಂದಿದರು. 11.55ರ ಸುಮಾರಿಗೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ.
ತಕ್ಷಣ ಅವರನ್ನು ಖಾಸಗಿ ವಾಹನದಲ್ಲಿ ಗೋಣಿಕೊಪ್ಪದ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.








