Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸರಕಾರಿ ಶಾಲೆಗಳು ಮುಚ್ಚುವ ಭೀತಿ : ಕೊಡಗಿನಲ್ಲಿ ಕೆಪಿಎಸ್ ಮ್ಯಾಗ್ನೇಟ್ ಯೋಜನೆಗೆ ವಿರೋಧ*
  • *ಕೂಡಿಗೆ ಸೈನಿಕ ಶಾಲೆಯಲ್ಲಿ ಸಾಂಸ್ಕೃತಿಕ ವೈಭವದ ಅನಾವರಣ : 12ನೇ ತರಗತಿ ಕೆಡೆಟ್‌ಗಳಿಗೆ ಬೀಳ್ಕೊಡುಗೆ*
  • *ಅಶುಭ ಭಾನುವಾರ : ಈಜಲು ಹೋದ ನಾಲ್ವರು ಮಕ್ಕಳ ದುರಂತ ಅಂತ್ಯ*
  • *ಕರ್ನಾಟಕ ರಾಜ್ಯದಲ್ಲಿ ಆಟೋ ಎಲ್‌ಪಿಜಿ ಸರಬರಾಜು ಸ್ಥಿತಿಗತಿ : ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆಯಿಲ್ಲದೆ ಎಲ್‌ಪಿಜಿ ಸರಬರಾಜು*
  • *ಸುಂಟಿಕೊಪ್ಪದಲ್ಲಿ ಕೈಸ್ತ ಬಾಂಧವರಿಂದ ಪವಿತ್ರ ವಾರದ ಸಂಕೇತ ಗರಿಗಳ ಭಾನುವಾರ ಆಚರಣೆ : 40 ದಿನಗಳ ಉಪವಾಸ*
  • *ಕೊಡಗಿನ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ*
  • *ಕೊಡಗಿನ ವಿವಿಧೆಡೆ ಗುಡುಗು, ಸಿಡಿಲು ಸಹಿತ ಮಳೆ : ಮರ ಬಿದ್ದು ಸಂಚಾರ ವ್ಯತ್ಯಯ : ಹೊತ್ತಿ ಉರಿದ ತೆಂಗಿನ ಮರ*
  • *ಸಹಾಯ ಧನ ಮತ್ತು ವಸತಿಗಾಗಿ ಒತ್ತಾಯಿಸಿ ಎಸ್‌ಡಿಟಿಯು ಮನವಿ*
  • *ಮಂದಗತಿಯಲ್ಲಿ ಸಾಗುತ್ತಿರುವ ಅಮೃತ್ ಕಾಮಗಾರಿ : ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀವ್ರ ಅಸಮಾಧಾನ*
  • *ಪೊಲೀಸ್ ವಸತಿ ಗೃಹ, ಸಮುದಾಯ ಭವನಗಳಿಗೆ ಕೊಡಗು ಎಸ್‌ಪಿ ಬಿಂದುಮಣಿ ಭೇಟಿ : ಪರಿಶೀಲನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪ್ರದಾನ : ಕಾರ್ಯಾಂಗದ ಕಿವಿ ಹಿಂಡುವ ಕೆಲಸವನ್ನು ಪತ್ರಿಕಾರಂಗ ಮಾಡಬೇಕು*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪ್ರದಾನ : ಕಾರ್ಯಾಂಗದ ಕಿವಿ ಹಿಂಡುವ ಕೆಲಸವನ್ನು ಪತ್ರಿಕಾರಂಗ ಮಾಡಬೇಕು*

ಜುಲೈ 27, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
ಕುಶಾಲನಗರ ಜು.27 NEWS DESK : ಪತ್ರಿಕಾರಂಗ ನೈಜ ಸಮಸ್ಯೆಗಳ ವಸ್ತು ಸ್ಥಿತಿ ವಿಚಾರಗಳನ್ನು ಪ್ರಕಟಿಸುವ  ಮೂಲಕ ಕಾರ್ಯಾಂಗದ ಕಿವಿ ಹಿಂಡುವ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಸಮಗ್ರ ಪಾತ್ರ ವಹಿಸುತ್ತಿವೆ  ಎಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಅಭಿಪ್ರಾಯಪಟ್ಟಿದ್ದಾರೆ.  ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಸ್ಯೆಗಳನ್ನು ಮತ್ತು ವಸ್ತುಸ್ಥಿತಿ ವಿಚಾರಗಳನ್ನು ಅರಿತು ನೈಜ ಸುದ್ಧಿಯಾಗಿ ಪ್ರಕಟಿಸಿದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಾಣುವ ಮೂಲಕ  ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಅನುವು ಮಾಡಿದಂತಾಗುತ್ತದೆ ಎಂದರು. ಈ ಸಂದರ್ಭ ಮಾತನಾಡಿದ ಅವರು ಕುಶಾಲನಗರ ತಾಲೂಕು  ಪತ್ರಕರ್ತರ ಕಾರ್ಯವೈಖರಿ ಬಗ್ಗೆ  ಶ್ಲಾಘನೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಕೃಷ್ಣಪ್ರಸಾದ್ ಮಾತನಾಡಿ ನಾಲ್ಕನೇ ಅಂಗವಾದ ಪತ್ರಿಕಾ ರಂಗ ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸುದ್ದಿ ಮಾಡುವ ಭರಾಟೆಯ ನಡುವೆ ಸತ್ಯಾಸತ್ಯತೆ  ಬಗ್ಗೆ ಕೂಡ ಅವಲೋಕನ ಮಾಡಬೇಕಾಗಿದೆ ಎಂದರು. ಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಪತ್ರಿಕಾ ದಿನಾಚರಣೆಯ ಮಹತ್ವ ಮತ್ತು ಇತಿಹಾಸದ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು. ಪ್ರತಿಯೊಬ್ಬರೂ ಪತ್ರಿಕೆ ಓದುವ ಹವ್ಯಾಸ ಇಟ್ಟುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳ ನಿಖರತೆ ಬಗ್ಗೆ ಎಚ್ಚರವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿಗಳ ಭರಾಟೆ ಏರಿಕೆಯಾಗುತ್ತಿದೆ. ನಕಾರಾತ್ಮಕ ವಿಚಾರದ ವೇಗ ತಡೆಯಬೇಕಾಗಿದೆ ಎಂದರು. ಪತ್ರಕರ್ತರು ಪರಿಣಾಮಕಾರಿ ವರದಿಗಳನ್ನು ಬರೆಯುವ ದೃಷ್ಟಿಕೋನ ಇಟ್ಟುಕೊಳ್ಳಬೇಕು. ಧ್ವನಿ ಇಲ್ಲದವರಿಗೆ ಧ್ವನಿ ಆಗಬೇಕು ಎಂದರು. ಸಂಘದ ಕೊಡಗು ಜಿಲ್ಲಾಧ್ಯಕ್ಷೆ ಬಿ. ಆರ್ ಸವಿತಾ ರೈ ಅವರು ಮಾತನಾಡಿ ಯಾವುದೇ ಸುದ್ದಿಗಳು ಅಭಾಸ ಉಂಟು ಮಾಡಬಾರದು. ಬ್ರೇಕಿಂಗ್ ಸುದ್ದಿಯ ಧಾವಂತದಲ್ಲಿ ಸಮಾಜದ ಸ್ವಾಸ್ಥ್ಯ ಕೆಡುವಂತಾಗಿದೆ. ಸುದ್ದಿ ಮಾಡುವ ಸಂದರ್ಭ ವಿಮರ್ಶೆ ಮಾಡುವ ಕೆಲಸ ಪತ್ರಕರ್ತನದಲ್ಲ ಎಂದು ಕಿವಿಮಾತು ಹೇಳಿದರು. ಸುದ್ದಿಗೋಷ್ಠಿ ನಡೆಯುವ ಸಂದರ್ಭ ಪತ್ರಕರ್ತರು ಸ್ಥಳದಲ್ಲೇ ಹಾಜರಾಗಿ ಸುದ್ದಿ ಪ್ರಕಟಿಸಬೇಕೆ ಹೊರತು ನಕಲು ಸುದ್ದಿ ಮಾಡುವುದು ಒಳಿತಲ್ಲ ಎಂದರು. ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ ಎನ್ ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ಸಮಿತಿ  ಸದಸ್ಯ ಸುನಿಲ್ ಪೊನ್ನೇಟಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಅತ್ಯುತ್ತಮ ವರದಿ ಆಯ್ಕೆ  ಹಿನ್ನಲೆಯಲ್ಲಿ ತಾಲೂಕಿನ  ಎಂಟು ಮಂದಿ ಪತ್ರಕರ್ತರಾದ  ಎಂ ಎನ್ ಚಂದ್ರಮೋಹನ್ , ಹೆಚ್ ವಿ ವಿನೋದ್, ರಘು ಹೆಬ್ಬಾಲೆ, ವನಿತಾ ಚಂದ್ರಮೋಹನ್, ನಾಗರಾಜ ಶೆಟ್ಟಿ, ಕೆ ಜೆ ಶಿವರಾಜ್, ಇಸ್ಮಾಯಿಲ್ ಕಂಡಕೆರೆ, ಸಂಶುದ್ದೀನ್ ,  ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕುಶಾಲನಗರ ಸಂಘದ ಕಚೇರಿಯಲ್ಲಿ ಕಳೆದ ಸಾಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅತಿ ಹೆಚ್ಚಿನ  ಹಾಜರಾತಿ ಪಡೆದ ಪತ್ರಕರ್ತರಾದ ಎಂ ಎನ್ ಚಂದ್ರಮೋಹನ್, ವಿನೋದ್ ,ನಾಗರಾಜ ಶೆಟ್ಟಿ ಅವರುಗಳನ್ನು ನಗದು ಬಹುಮಾನ ನೀಡುವ ಮೂಲಕ ಗುರುತಿಸಲಾಯಿತು. ಸಂಘದ ವತಿಯಿಂದ ತಾಲೂಕು ತಹಸಿಲ್ದಾರ್ ಕಿರಣ್ ಗೌರಯ್ಯ ಮತ್ತು ಪುರಸಭೆ ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್ ಅವರುಗಳನ್ನು ಸನ್ಮಾನಿಸಲಾಯಿತು. ಸಂಘದ ಖಜಾಂಚಿ ಕುಡೆಕಲ್ ಗಣೇಶ್ ಪ್ರಾರ್ಥಿಸಿದರು. ಜಿಲ್ಲಾ ನಿರ್ದೇಶಕರುಗಳಾದ ಸಂಶುದ್ದೀನ್  ಸ್ವಾಗತ, ಟಿ ಆರ್ ಪ್ರಭುದೇವ್ ನಿರೂಪಣೆ, ರಘು ಹೆಬ್ಬಾಲೆ ವಂದಿಸಿದರು. ಪತ್ರಿಕಾ ದಿನಾಚರಣೆ ಸಮಾರಂಭಕ್ಕೆ ಮುನ್ನ ತಾಲೂಕು ಸಂಘದ ವಾರ್ಷಿಕ ಮಹಾಸಭೆ ನಡೆಯಿತು.
Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸರಕಾರಿ ಶಾಲೆಗಳು ಮುಚ್ಚುವ ಭೀತಿ : ಕೊಡಗಿನಲ್ಲಿ ಕೆಪಿಎಸ್ ಮ್ಯಾಗ್ನೇಟ್ ಯೋಜನೆಗೆ ವಿರೋಧ*

ಮಾರ್ಚ್ 29, 2026

*ಕೂಡಿಗೆ ಸೈನಿಕ ಶಾಲೆಯಲ್ಲಿ ಸಾಂಸ್ಕೃತಿಕ ವೈಭವದ ಅನಾವರಣ : 12ನೇ ತರಗತಿ ಕೆಡೆಟ್‌ಗಳಿಗೆ ಬೀಳ್ಕೊಡುಗೆ*

ಮಾರ್ಚ್ 29, 2026

*ಅಶುಭ ಭಾನುವಾರ : ಈಜಲು ಹೋದ ನಾಲ್ವರು ಮಕ್ಕಳ ದುರಂತ ಅಂತ್ಯ*

ಮಾರ್ಚ್ 29, 2026

*ಕೂಡಿಗೆ ಸೈನಿಕ ಶಾಲೆಯಲ್ಲಿ ಸಾಂಸ್ಕೃತಿಕ ವೈಭವದ ಅನಾವರಣ : 12ನೇ ತರಗತಿ ಕೆಡೆಟ್‌ಗಳಿಗೆ ಬೀಳ್ಕೊಡುಗೆ*

ಮಾರ್ಚ್ 29, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಮಡಿಕೇರಿ NEWS DESK ಮಾ.29 : ಕೂಡಿಗೆಯ ಸೈನಿಕ ಶಾಲೆ ಕೊಡಗು ತನ್ನ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ 2025–26ನೇ ಶೈಕ್ಷಣಿಕ…

*ಅಶುಭ ಭಾನುವಾರ : ಈಜಲು ಹೋದ ನಾಲ್ವರು ಮಕ್ಕಳ ದುರಂತ ಅಂತ್ಯ*

ಮಾರ್ಚ್ 29, 2026

*ಕರ್ನಾಟಕ ರಾಜ್ಯದಲ್ಲಿ ಆಟೋ ಎಲ್‌ಪಿಜಿ ಸರಬರಾಜು ಸ್ಥಿತಿಗತಿ : ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆಯಿಲ್ಲದೆ ಎಲ್‌ಪಿಜಿ ಸರಬರಾಜು*

ಮಾರ್ಚ್ 29, 2026

*ಸುಂಟಿಕೊಪ್ಪದಲ್ಲಿ ಕೈಸ್ತ ಬಾಂಧವರಿಂದ ಪವಿತ್ರ ವಾರದ ಸಂಕೇತ ಗರಿಗಳ ಭಾನುವಾರ ಆಚರಣೆ : 40 ದಿನಗಳ ಉಪವಾಸ*

ಮಾರ್ಚ್ 29, 2026

*ಕೊಡಗಿನ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ*

ಮಾರ್ಚ್ 28, 2026

*ಕೊಡಗಿನ ವಿವಿಧೆಡೆ ಗುಡುಗು, ಸಿಡಿಲು ಸಹಿತ ಮಳೆ : ಮರ ಬಿದ್ದು ಸಂಚಾರ ವ್ಯತ್ಯಯ : ಹೊತ್ತಿ ಉರಿದ ತೆಂಗಿನ ಮರ*

ಮಾರ್ಚ್ 28, 2026

*ಸಹಾಯ ಧನ ಮತ್ತು ವಸತಿಗಾಗಿ ಒತ್ತಾಯಿಸಿ ಎಸ್‌ಡಿಟಿಯು ಮನವಿ*

ಮಾರ್ಚ್ 28, 2026

*ಮಂದಗತಿಯಲ್ಲಿ ಸಾಗುತ್ತಿರುವ ಅಮೃತ್ ಕಾಮಗಾರಿ : ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀವ್ರ ಅಸಮಾಧಾನ*

ಮಾರ್ಚ್ 28, 2026

*ಪೊಲೀಸ್ ವಸತಿ ಗೃಹ, ಸಮುದಾಯ ಭವನಗಳಿಗೆ ಕೊಡಗು ಎಸ್‌ಪಿ ಬಿಂದುಮಣಿ ಭೇಟಿ : ಪರಿಶೀಲನೆ*

ಮಾರ್ಚ್ 28, 2026

*ಏ.1 ರಂದು ನಾಪೋಕ್ಲುವಿನಲ್ಲಿ ಹಿಂದೂ ಜನಜಾಗೃತಿ ಸಮಾವೇಶ*

ಮಾರ್ಚ್ 28, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.