
ಶ್ರೀಮಂಗಲ ಆ.22 NEWS DESK : ಪೊನ್ನಂಪೇಟೆ ತಾಲ್ಲೂಕು ಬಾಡಗರಕೇರಿ ಮೃತ್ಯುಂಜಯ ದೇವಾಲಯದ ಹೊಸ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಚೋನಿರ ಸುಬ್ರಮಣಿ, ಕಾರ್ಯದರ್ಶಿಯಾಗಿ ಬಲ್ಯಮೀದೇರಿರ ಸಂಪತ್ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಆಡಳಿತ ಮಂಡಳಿ ಪತ್ರಿಕೆ ಪ್ರಕಟಣೆ ನೀಡಿದ್ದು, ಉಪಾಧ್ಯಕ್ಷರಾಗಿ ಕಾಯಪಂಡ ಸ್ಟಾಲಿನ್ ಗಣಪತಿ, ಖಜಾಂಚಿಯಾಗಿ ಬಲ್ಯಮೀದೇರಿರ ಚೇತನ್ ಸೋಮಣ್ಣ, ಸದಸ್ಯರಾಗಿ ಬಲ್ಯಮೀದೇರಿರ ರನ್ನು, ಕಾಯಪಂಡ ಸುನಿಲ್ ಚಂಗಪ್ಪ, ಕಾಯಪಂಡ, ಸುರೇಂದ್ರ, ಕಾಯಪಂಡ ಕಾವೇರಪ್ಪ, ಅಮ್ಮತ್ತಿರ ಪರಮೇಶ್ವರ್, ಮಲ್ಲೇಂಗಡ ನರೇಂದ್ರ, ಅಣ್ಣೀರ ಮಂಜುನಾಥ್, ಮೀದೇರಿರ ಗಣಪತಿ, ಅಣ್ಣೀರ ಲೋಕೇಶ್ ನೇಮಕಗೊಂಡಿದ್ದಾರೆ.








