
ಮಡಿಕೇರಿ NEWS DESK ಜು.20 : ಹಾರಂಗಿ ಅಣೆಕಟ್ಟಿನ ನಿರ್ಮಾಣದ ಹಂತದಲ್ಲಿ ಜಾಗ ಕಳೆದುಕೊಂಡವರಿಗೆ ಯಡವನಾಡಿನಲ್ಲಿ ಪರ್ಯಾಯವಾಗಿ ನೀಡಿದ ಜಾಗವೊಂದಕ್ಕೆ ಸಂಬ0ಧಿಸಿದ0ತೆ “ಸಾಗುವಳಿ ಪತ್ರ” ದಾಖಲೆಯನ್ನು ನೀಡದ ಕಂದಾಯ ಇಲಾಖೆ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಲಾನುಭವಿ ಕುಟುಂಬದ ಸದಸ್ಯ ಉಮೇಶ್ ಜಿ.ಪಿ. ಜಿಲ್ಲಾಡಳಿವನ್ನು ಒತ್ತಾಯಿಸಿದ್ದಾರೆ. ನಗದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಹಾರಂಗಿ ಹಿನ್ನೀರು ಪ್ರದೇಶದಲ್ಲಿ ತಮ್ಮ ಕುಟುಂಬ ವಾಸವಿತ್ತು. ಅಣೆಕಟ್ಟು ನಿರ್ಮಾಣದ ಬಳಿಕ ತಾನು ಗಾಳಿಬೀಡು ಪಂಚಾಯ್ತಿಯ ಒಂದನೇ ಮೊಣ್ಣಂಗೇರಿಯಲ್ಲಿ ನೆಲೆಸಿದ್ದೇನೆ. ನಮ್ಮ ಕುಟುಂಬಕ್ಕೆ ಯಡವನಾಡು ಗ್ರಾಮದಲ್ಲಿ ಮುಳುಗಡೆಯಾದ ಜಾಗಕ್ಕೆ ಬದಲಾಗಿ 3.74 ಎಕರೆ ಜಾಗವನ್ನು ಒದಗಿಸಲಾಗಿದೆ ಎಂದರು. ಯಡವನಾಡು ಗ್ರಾಮದಲ್ಲಿ ನಮ್ಮ ಕುಟುಂಬಕ್ಕೆ ನೀಡಿರುವ ಜಾಗಕ್ಕೆ ಸಂಬ0ಧಿಸಿದ ಸಾಗುವಳಿ ಪತ್ರದ ದಾಖಲೆಯ ಪ್ರತಿಯನ್ನು ನೀಡುವಂತೆ ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರ್ ಕಛೇರಿಯಲ್ಲಿ ಕೋರಿದ್ದೆ. ವಿಷಯಕ್ಕೆ ಸಂಬ0ಧಿಸಿದ0ತೆ ಉಪ ವಿಭಾಗಾಧಿಕಾರಿಯವರು ವಿಚಾರಣೆ ನಡೆಸಿ, ದಾಖಲೆ ಒದಗಿಸುವಂತೆ ಸೂಚಿಸಿದ್ದರು. ಆದರೆ ಪ್ರಸ್ತುತ ಮೂಲ ದಾಖಲಾಗಿ ಲಭ್ಯತೆ ಇಲ್ಲವೆಂದು ಅಧಿಕಾರಿಗಳು ತಿಳೀಸಿರುವುದಾಗಿ ಆರೋಪಿಸಿದರು. ವಿಷಯಕ್ಕೆ ಸಂಬ0ಧಿಸಿದ0ತೆ ಜಿಲ್ಲಾಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಉಮೇಶ್ ಆಗ್ರಹಿಸಿದರು.









