
ಮಡಿಕೇರಿ ಆ.22 NEWS DESK : ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಶ್ರೀಕೃಷ್ಣ ಗೌಂಡರ್ ಮಂಟಪದಲ್ಲಿ ನಡೆದ 17ನೇ ಐಎಂಜಿಕೆಎ ರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಕೊಡಗಿನ ವಿ.ವೈ.ಮಿಲನ್ ಕುಮಾರ್ ಭಾಗವಹಿಸಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾನೆ. ಟೀಮ್ ಕಥಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನ, ಕಥಾ ವಿಭಾಗದಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಹಾಗೂ ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾನೆ. ಮಡಿಕೇರಿಯ ಶಾಸ್ತ್ರೀ ನಗರದ ನಿವಾಸಿ ವಿ.ಆರ್.ಯೋಗೇಶ್ ಕುಮಾರ್ ಹಾಗೂ ರೇಖಾ ದಂಪತಿಯ ಪುತ್ರ ವಿ.ವೈ.ಮಿಲನ್ ಕುಮಾರ್ ಮಡಿಕೇರಿಯ ಸಂತಮೈಕಲರ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಈತ ವಿರಾಜಪೇಟೆಯ ಕರಾಟೆ ಶಿಕ್ಷಕ ಸೆನ್ಸಾಯಿ ಎಂ.ಬಿ.ಚಂದ್ರನ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾನೆ.









