
ಮಡಿಕೇರಿ ಆ.22 NEWS DESK : ಕೊಡವಾಮೆರ ಕೊಂಡಾಟ ಸಂಘಟನೆಗೆ ಐದನೇ ವಾರ್ಷಿಕೋತ್ಸವದ ಅಂಗವಾಗಿ ಆ.23 ರಂದು ಕವಿವೊರ್ಮೆ ನಡೆಯಲಿದೆ. ಸಂಜೆ 7 ಗಂಟೆಗೆ ಗೂಗಲ್ ಮೀಟ್ ವೆಬಿನಾರ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಘಟನೆಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅಥಿತಿಗಳಾಗಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಪೂಮಾಲೆ ಪತ್ರಿಕೆ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಭೂಸೇನಾಧಿಕಾರಿ ಹಾಗೂ ಕೊಡವಾಮೆರ ಕೊಂಡಾಟ ಸಂಘಟನೆಯ ಸದಸ್ಯ ಕ್ಯಾಟ್ಪನ್ ಬಿದ್ದಂಡ ನಾಣಿ ದೇವಯ್ಯ, ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಮತ್ತು ಕೊಡವಾಮೆರ ಕೊಂಡಾಟ ಸಂಘಟನೆಯ ಸದಸ್ಯೆ, ಕೂಪದಿರ ಶಾರದನಂಜಪ್ಪ ಅವರುಗಳು ಪಾಲ್ಗೊಳ್ಳಲಿದ್ದಾರೆ. ಕವಿಗೋಷ್ಠಿಯಲ್ಲಿ ಹಿರಿಯ ಕವಿಗಳಾದ, ನೆರವಂಡ ಉಮೇಶ್, ಉಳುವಂಗಡ ಕಾವೇರಿ ಉದಯ, ಬಿ.ಜಿ.ಅನಂತಶಯನ, ಡಾ. ಮೇಚಿರ ಶುಭಾಶ್ ನಾಣಯ್ಯ, ಮಹದೇವಸ್ವಾಮಿ ಮೈಸೂರು, ಪುಟ್ಟಿಚಂಡ ಡಾನ್ ದೇವಯ್ಯ, ಚಂಗಚಂಡ ರಶ್ಮಿ ನಿತಿನ್, ಕರವಂಡ ಸೀಮಾ ಗಣಪತಿ, ಕುಂಞಿರ ಗಿರೀಶ್ ಭೀಮಯ್ಯ, ಚಾಮೆರ ನಕ್ಷಾದೇಚಮ್ಮ, ಉಳುವಂಗಡ ಲೋಹಿತ್ ಭೀಮಯ್ಯ, ಮಾಚಪಂಡ ತುಳಸಿ ಕುಶಾಲಪ್ಪ, ಅಮ್ಮಂಡ ಅನುಪಮ ತಿಮ್ಮಯ್ಯ, ಚೆಟ್ಟಿರ ಗ್ರಂಥ ಕಾರ್ಯಪ್ಪ, ಪೇರಿಯಂಡ ಯಶೋಧ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಭಾಷೇ ಮತ್ತು ಸಾಹಿತ್ಯಾಭಿಮಾನಿಗಳು ಈ ಕೆಳಗಿನ ಲಿಂಕ್ ಬಳಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೊಡವಾಮೆರ ಕೊಂಡಾಟ ಸಂಘಟನೆ ಕೇಳಿಕೊಂಡಿದೆ. ಗೂಗಲ್ ಲಿಂಕ್:
To join the meeting on Google Meet, click this link:
https://meet.google.com/gix-giry-usp









