
ಮಡಿಕೇರಿ NEWS DESK ಸೆ.13 : ಶ್ರೀ ಕೆಂಗಲ್ ಹನುಮಂತಯ್ಯ ಸದ್ಭಾವನಾ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ದೈಹಿಕ ಶಿಕ್ಷಕ ಶಿವಣ್ಣ ಎಸ್. ಅವರನ್ನು ಮೈಸೂರಿನ ಗೋಕುಲಂ ವಿನಾಯಕ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಚಿತ್ರನಟ ವಿನಯ್ ರಾಜ್ ಕುಮಾರ್ ಹಾಗೂ ಸಂಘದ ಪ್ರಮುಖರು ಶಿವಣ್ಣ ಅವರನ್ನು ಸನ್ಮಾನಿಸಿದರು. ಶಿವಣ್ಣ ಅವರು ವಿರಾಜಪೇಟೆಯ ಕುಟ್ಟಂದಿಯ ಕೆ.ಬಿ ಪ್ರೌಢಶಾಲೆಯಲ್ಲಿ ಕಳೆದ 30 ವರ್ಷಗಳಿಂದ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಹವ್ಯಾಸಿ ರಂಗಭೂಮಿ ಕಲಾವಿದರು, ಹಾಡುಗಾರರೂ ಆಗಿರುವ ಶಿವಣ್ಣ ಅವರು ಭಾರತ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲೂ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೇ ನಿವೃತ್ತಿ ಹೊಂದಿರುವ ಇವರು ಕಿರುತೆರೆಯ ಧಾರಾವಾಹಿಯೊಂದರಲ್ಲಿ ಅಭಿನಯಿಸುತ್ತಿದ್ದಾರೆ.










