
ಮಡಿಕೇರಿ ಸೆ.13 NEWS DESK : ಜಿಲ್ಲಾ ಪಂಚಾಯಿತಿ, ಕೊಡಗು ಪಶು ಪಲನಾ ಹಾಗೂ ಪಶು ವೈದ್ಯಕೀಯ ಇಲಾಖೆ, ಮಡಿಕೇರಿ ನೆಹರು ಯುವ ಕೇಂದ್ರ, ಮಡಿಕೇರಿ ತಾಲೂಕು ಯುವ ಒಕ್ಕೂಟ, ತಾಳತ್ತಮನೆ ನೇತಾಜಿ ಯುವತಿ ಮಂಡಳಿ ಹಾಗೂ ನೇತಾಜಿ ಯುವಕ ಮಂಡಲದ ಸಂಯುಕ್ತಶ್ರಾಯದಲ್ಲಿ ತಾಳತ್ತಮನೆಯಲ್ಲಿ ಉಚಿತ ರೇಬಿಸ್ ಲಸಿಕಾ ಶಿಬಿರ ನಡೆಯಿತು. ತಾಳತ್ತಮನೆ ಆಟದ ಮೈದಾನದಲ್ಲಿ ನಡೆದ ಶಿಬಿರದಲ್ಲಿ ಪಶುವೈದ್ಯಾಧಿಕಾರಿಗಳಾದ ಡಾ. ಎಂ.ಸಿ.ಲತಾ , ಡಾ. ಸಿ. ಎಸ್.ಶಿಲ್ಪಶ್ರೀ, ಎನ್.ಕೆ.ಮೋಹನ್ ಕುಮಾರ್, ಜಾನುವಾರು ಅಭಿವೃದ್ಧಿ ಅಧಿಕಾರಿ ಎಸ್.ನವೀನ್ ಕುಮಾರ್ ಸಾಕು ಪ್ರಾಣಿಗಳಿಗೆ ಲಸಿಕೆ ನೀಡಿ ಸಮಾಲೋಚನೆ ನೀಡಿದರು. ಮಡಿಕೇರಿ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಕೆ.ಎ.ಪ್ರಸನ್ನ ರೇಬಿಸ್ ಕುರಿತು ಮಾಹಿತಿ ನೀಡಿದರು. ಶಿಬಿರದಲ್ಲಿ 99 ನಾಯಿ ಹಾಗೂ 11 ಬೆಕ್ಕು ಗಳಿಗೆ ಲಸಿಕೆ ಹಾಕಲಾಯಿತು.








