
ಮಡಿಕೇರಿ NEWS DESK ಅ.19 : ಪವರ್ ಟಿವಿಯ 7ನೇ ವಾರ್ಷಿಕೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕೊಡಗಿನ ಸಿದ್ದಲಿಂಗಪುರದ ಉದ್ಯಮಿ, ಸಮಾಜ ಸೇವಕ ಹಾಗೂ ದಾನಿಗಳೂ ಆದ ನಾಪಂಡ ಮುತ್ತಪ್ಪ ಅವರಿಗೆ ಸಮಾಜ ಸೇವಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಪವರ್ ಟಿವಿಯ ಮುಖ್ಯಸ್ಥರು ನಾಪಂಡ ಮುತ್ತಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು. ಕಾರ್ಮಿಕ ಮುಖಂಡರಾಗಿ ದುಡಿಯುವ ವರ್ಗಕ್ಕೆ ಹೋರಾಟದ ಮೂಲಕ ನ್ಯಾಯ ದೊರಕಿಸಿಕೊಡುತ್ತಿರುವ ನಾಪಂಡ ಮುತ್ತಪ್ಪ ಅವರು, ರಾಜ್ಯವ್ಯಾಪಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಯಾವುದೇ ಪ್ರಚಾರವನ್ನು ಬಯಸದೆ ಕೊಡುಗೈ ದಾನಿಯಾಗಿ ನೊಂದವರ ನೋವಿಗೆ ಸ್ಪಂದಿಸುತ್ತಿರುವ ಮುತ್ತಪ್ಪ ಅವರ ಸೇವೆಯನ್ನು ಗುರುತಿಸಿ ಪವರ್ ಟಿವಿ ಪ್ರಶಸ್ತಿ ನೀಡಿ ಗೌರವಿಸಿದೆ.








