Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮುಂಗಾರು ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರ ವಹಿಸಿ : ಡಾ.ಎನ್.ವಿ.ಪ್ರಸಾದ್ ಸೂಚನೆ*
  • *ಮರಗೋಡು ಗ್ರಾಮದಲ್ಲಿ ಅರೆಭಾಷೆ ಗ್ರಾಮೋತ್ಸವ : ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಿ: ಶಾಸಕ ಡಾ.ಮಂತರ್ ಗೌಡ*
  • *AI ಎನ್ನುವುದು ಕೇವಲ ತಂತ್ರಜ್ಞಾನದ ಚರ್ಚೆಯಲ್ಲ — ಇದು ಮೂಲಭೂತವಾಗಿ ನಂಬಿಕೆ, ಜವಾಬ್ದಾರಿ, ಪಾರದರ್ಶಕತೆ ಮತ್ತು ನಾಗರಿಕರ ಮೇಲಿನ ಪ್ರಭಾವ : ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್*
  • *ಪ್ರವಾಸೋದ್ಯಮ  ಸಂಘ-ಸಂಸ್ಥೆಗಳ ಸಭೆ : ಕೊಡಗಿನ ಆತಿಥ್ಯ ಪ್ರವಾಸೋದ್ಯಮದ ಬಗ್ಗೆ ಆದಾರರಹಿತ ಟೀಕೆಗಳಿಗೆ ಕಡಿವಾಣ ಅಗತ್ಯ : ದಿನೇಶ್ ಕಾಯ೯ಪ್ಪ*
  • *ಫೀ.ಮಾ.ಕಾರ್ಯಪ್ಪ ಕಾಲೇಜಿನ ವಾರ್ಷಿಕೋತ್ಸವ : 77 ವರ್ಷಗಳ ಸುದೀರ್ಘ ಸೇವೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ನೀಡಿದೆ : ಪ್ರೊ. ಅಶೋಕ್ ಸಂಗಪ್ಪ ಆಲೂರ ಮೆಚ್ಚುಗೆ*
  • *ಮೇ 29 ಮತ್ತು 30 ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ*
  • *ಮಡಿಕೇರಿ ನಗರಸಭೆಯ ಬಿಜೆಪಿ ಆಡಳಿತ ಮಂಡಳಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ* 
  • *ನಮ್ಮೂರ ಶಾಲೆ ನಮ್ಮದು, ನಮ್ಮೂರಲ್ಲೆ ಉಳಿಯಲಿ : ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆ ಹಾಗೂ ಗ್ರಾಮಸ್ಥರ ಆಗ್ರಹ*
  • *ನಿವೇಶನಕ್ಕಾಗಿ ಆಗ್ರಹಿಸಿ ಮೇ 29 ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ*
  • *ದೇವಟ್ ಪರಂಬ್ ನಲ್ಲಿ ಹಿರಿಯರಿಗೆ ಗೌರವ ಅರ್ಪಿಸಿದ ಸಿಎನ್‌ಸಿ : ಅಂತರಾಷ್ಟ್ರೀಯ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಹಿಂದೂ ಮಲಯಾಳಿ ಸಂಘದಿಂದ ಸಂಭ್ರಮದ ಕ್ರೀಡಾಕೂಟ : ಸಮಾಜ ಬಾಂಧವರನ್ನು ಬೆಸೆಯುವ ಶಕ್ತಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗಿದೆ : ಅನಿಲ್.ಹೆಚ್.ಟಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಹಿಂದೂ ಮಲಯಾಳಿ ಸಂಘದಿಂದ ಸಂಭ್ರಮದ ಕ್ರೀಡಾಕೂಟ : ಸಮಾಜ ಬಾಂಧವರನ್ನು ಬೆಸೆಯುವ ಶಕ್ತಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗಿದೆ : ಅನಿಲ್.ಹೆಚ್.ಟಿ*

ಅಕ್ಟೋಬರ್ 21, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಅ.20 NEWS DESK : ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮಾಜ ಬಾಂಧವರನ್ನು ಬೆಸೆಯುವ ಬಹಳ ದೊಡ್ಡ ಶಕ್ತಿಯಿದೆ. ಈ ಸಾಮಥ್ಯ೯ವನ್ನು ಮಲಯಾಳಿ ಸಮಾಜದವರು ಸೂಕ್ತ ರೀತಿಯಲ್ಲಿ ಬಳಸಿಕೊಂಡಿದ್ದಾರೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ.ಶ್ಲಾಘಿಸಿದ್ದಾರೆ.  ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಿಂದೂ ಮಲಯಾಳಿ ಸಂಘದ ವತಿಯಿಂದ ಓಣಂಂ ಘೋಷಂ ಮತ್ತು ಓಣಂ ಸಧ್ಯ ಅಂಗವಾಗಿ ನಡೆದ ಕ್ರೀಡಾಸ್ಪಧೆ೯ಗಳನ್ನು ಕ್ರಿಕೆಟ್ ಆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಕೊಡಗಿನಲ್ಲಿ ನೆಲಸಿರುವ ಹಿಂದೂ ಮಲಯಾಳಿ ಸಮುದಾಯದವರು ವ್ಯಾಪಾರ ವಿಸ್ತರಣೆಯ ಜತೆಗೇ  ಸ್ಥಳೀಯರ ಜತೆ ಗೆಳೆತನ, ಮಾನವೀಯತೆ ಗುಣದ ವಿಸ್ತರಣೆಗೂ ಕಾರಣರಾಗಿದ್ದಾರೆ, ಹೀಗಾಗಿಯೇ ಮಲಯಾಳಿ ಸಮಾಜಬಾಂಧವರು ಸ್ಥಳೀಯರೊಂದಿಗೆ ಅನ್ಯೋನ್ಯತೆಯಿಂದ ಬದುಕು ಕಂಡುಕೊಳ್ಳುವಂತಾಗಿದೆ ಎಂದರು. ಸಮುದಾಯದ ಒಗ್ಗಟ್ಟಿನಲ್ಲಿ ಮುಖ್ಯ ಪಾತ್ರ ವಹಿಸುವ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹಿಂದೂ ಮಲಯಾಳಿ ಸಮಾಜದ ಪ್ರಮುಖರು ಆದ್ಯತೆ ನೀಡುವ ಮೂಲಕ ತಮ್ಮ ಸಂಘವನ್ನು ಬಲಿಷ್ಟವಾಗಿಸಿರುವುದು ಮೆಚ್ಚುವಂಥ ಕಾಯ೯ ಎಂದು ಶ್ಲಾಘಿಸಿದ ಅನಿಲ್, ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಸಂದಭ೯, ಕೋವಿಡ್ ಲಾಕ್ ಡೌನ್ ಸಂದಭ೯ ಮಲಯಾಳಿ ಸಂಘದ ಸದಸ್ಯರ ನೆರವಿನ ಕಾಯ೯ ಸದಾ ಸ್ಮರಣೀಯ ಎಂದೂ  ಹೇಳಿದರು. ಕೇರಳದ ಯುವಕನೋವ೯ ಕುಶಾಲನಗರದಲ್ಲಿ ಮೖತಪಟ್ಟ ಸಂದಭ೯ ಆತನ ತಾಯಿ ಕೇರಳದಲ್ಲಿ ಅಂತ್ಯಕ್ರಿಯೆ ಅಸಾಧ್ಯ ಎಂದು ತನ್ನ ದಯಾನೀಯತೆ ತೋಡಿಕೊಂಡಾಗ ಹಿಂದೂ ಮಲಯಾಳಿ ಸಂಘದವರೇ ಮನೆಯ ಸದಸ್ಯರಂತೆ ಅಂತ್ಯಕ್ರಿಯೆ ನಡೆಸುವ ಮೂಲಕ ಮಾನವೀಯತೆಯನ್ನು ಜೀವಂತವಾಗಿಸಿದ ಘಟನೆ ಎಲ್ಲಾ ಸಮಾಜದವರಿಗೂ ಮಾದರಿಯಾಗುವಂಥದ್ದು ಎಂದು ಹೆಮ್ಮೆಯಿಂದ  ಅನಿಲ್ ನುಡಿದರು.  ಶಕ್ತಿ ಪತ್ರಿಕೆಯ ಉಪಸಂಪಾದಕ ಕುಡೆಕಲ್ ಸಂತೋಷ್ ಮಾತನಾಡಿ, ವಿವಿಧತೆಯಲ್ಲಿ ಏಕತೆಗೆ ನಿದಶ೯ನದಂತೆ ಕೊಡಗಿನಲ್ಲಿ ಎಲ್ಲಾ ಸಮಾಜ ಬಾಂಧವರು ಒಗ್ಗಟ್ಟಿನಿಂದ ಜೀವಿಸಿದ್ದಾರೆ, ಹಿಂದೂ ಮಲಯಾಳಿ ಸಂಘದ 11 ಶಾಖೆಗಳು ಕೊಡಗಿನಲ್ಲಿರುವುದು ಕೂಡ ಸಂಘದ ಬಲವಧ೯ನೆಗೆ ಕಾರಣವಾಗಿದೆ ಎಂದರು,  ದ್ವೇಷಾಸೂಯೆಗಳಿಲ್ಲದೇ ಸಮಾಜದಲ್ಲಿ ಎಲ್ಲರೂ ಮಾದರಿಯಾಗಿ ಜೀವಿಸೋಣ ಎಂದೂ ಸಂತೋಷ್ ಹಾರೈಸಿದರು.  ಹಿಂದೂ ಮಲಯಾಳಿ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ.ವಿಜಯ ಮಾತನಾಡಿ, ಕ್ರೀಡಾಕೂಟಗಳ ಮೂಲಕ ಸಮಾಜಭಾಂದವರು ಒಟ್ಟಿಗೆ ಸೇರಲು ಸೂಕ್ತ ವೇದಿಕೆಯಾಗಿದೆ ಎಂದರಲ್ಲದೇ ವೈನಾಡಿನಲ್ಲಿ ಸಂಭವಿಸಿದ ಪ್ರಕೖತ್ತಿ ವಿಕೋಪದ ಹಿನ್ನಲೆ ಈ ಬಾರಿ ಜಿಲ್ಲೆಯ ಅನೇಕ ಕಡೆ ಓಣಂ ಸಂಭ್ರಮವನ್ನು ಪ್ರತೀ ವಷ೯ದಂತೆ ಮಾಡಲಾಗಿಲ್ಲ ಎಂದು ಹೇಳಿದರು, ಮೊಬೈಲ್ ನಂದಾಗಿ ಇಂದಿನ ಸಮಾಜದಲ್ಲಿ ಸಂಬಂಧಗಳೇ ನಶಿಸುತ್ತಿದೆ, ಬಂಧುಬಾಂಧವರು ಮನೆಗಳಿಗೆ ತೆರಳುವ ಕ್ರಮವೇ ಮರೆಯಾಗುತ್ತಿದೆ, ಒಂದೇ ಮನೆಯಲ್ಲಿದ್ದುಕೊಂಡು ದೂರದೂರದಲ್ಲಿ ಕುಳಿತುಕೊಂಡು ಮೊಬೈಲ್ ಮೂಲಕ ಸಂವಹನ ಮಾಡುವ ವಿಚಿತ್ರ ಪರಿಸ್ಥಿತಿ ತಲೆದೋರಿದೆ, ಪರಸ್ಪರ ಕಷ್ಟ ಸುಖ ಕೇಳುವ ಪರಿಸ್ಥಿತಿಯಲ್ಲಿಯೂ ಬಂಧು ಬಳಗದವರಿಲ್ಲದಂಥ ಪರಿಸ್ಥಿತಿಯನ್ನು ನಾವೆಲ್ಲಾ ನಿಮಿ೯ಸಿಕೊಂಡಿದ್ದೇವೆ, ಇಂಥ ಸ್ಥಿತಿ ಮರೆಯಾಗಿ ಸಂಭಂಧಗಳ ಬೆಸುಗೆಗೆ ಕ್ರೀಡಾ, ಸಾಂಸ್ಕೖತಿಕ ಚಟುವಟಿಕಗಳಿಂದ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.  ಓಣಂ ಆಚರಣಾ  ಸಮಿತಿ  ಅಧ್ಯಕ್ಷ ಟಿ.ಆರ್.ಸಂಚಾಲಕ ವಾಸುದೇವ್ ಮಾತನಾಡಿ ,  ಓಣಂ ಘೋಷಂ, ಓಣಂ ಸಧ್ಯದ ಮೂಲಕ ಹಿಂದೂ ಮಲಯಾಳಿ ಸಮಾಜದವರನ್ನು ಒಗ್ಗೂಡಿಸುವ ಕಾಯ೯ ಈ ವಷ೯ವೂ ಸದಸ್ಯರ ಸಹಕಾರದೊಂದಿಗೆ ಯಶಸ್ವಿಯಾಗಿದೆ ಎಂದು ಹಷ೯ ವ್ಯಕ್ತಪಡಿಸಿದರು. ಜಿಲ್ಲಾ ಸಮಿತಿ ಉಪಾಧ್ಯಕ್ಷ ಟಿ.ಕೆ ಸುಧೀರ್ ಮಾತನಾಡಿ,   ಉದ್ದೇಶಿತ ಗುರಿಯತ್ತ ಛಲ ಮತ್ತು ಆಸಕ್ತಿಯನ್ನು ಪ್ರತೀಯೋವ೯ರೂ ರೂಡಿಸಿಕೊಂಡರೆ ಯಶಸ್ಸು ಸುಲಭಸಾಧ್ಯ ಎಂದರು. ಹಿಂದೂ ಮಲಯಾಳಿ ಸಂಘದ ಮಡಿಕೇರಿ   ಅಧ್ಯಕ್ಷ  ಕೆ.ವಿ.  ಧಮೇ೯ಂದ್ರ, ನಿದೇ೯ಶಕ ವಿನೋದ್ ನಾಯರ್   ಉಪಸ್ಥಿತರಿದ್ದ ಕಾಯ೯ಕ್ರಮದಲ್ಲಿ ಸಂಘದ ಗೌರವಾಧ್ಯಕ್ಷರಾದ  ಕೆ.ಎಸ್ .ರಮೇಶ್ ನಿರೂಪಿಸಿ ಹಿಮಾನಿ ವಿಜಯಕುಮಾರ್  ಪ್ರಾಥಿ೯ಸಿ,  ಅಂಜಲಿ ಅಶೋಕ್ ಸ್ವಾಗತಿಸಿ, ಹೆಚ್. ಪಿ.ಅಶೋಕ್ ವಂದಿಸಿದರು.  ಹಿಂದೂ ಮಲಯಾಳಿ ಸಂಘದ ಸದಸ್ಯರು, ಕುಟುಂಬಸ್ಥರಿಗೆ ಹಗ್ಗಜಗ್ಗಾಟ, ಕ್ರಿಕೆಟ್, ಆಟೋಟಗಳು  ಸೇರಿದಂತೆ ವೈವಿಧ್ಯಮಯ ಸ್ಪಧೆ೯ ಆಯೋಜಿಸಲಾಗಿತ್ತು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮುಂಗಾರು ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರ ವಹಿಸಿ : ಡಾ.ಎನ್.ವಿ.ಪ್ರಸಾದ್ ಸೂಚನೆ*

ಮೇ 26, 2026

*ಮರಗೋಡು ಗ್ರಾಮದಲ್ಲಿ ಅರೆಭಾಷೆ ಗ್ರಾಮೋತ್ಸವ : ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಿ: ಶಾಸಕ ಡಾ.ಮಂತರ್ ಗೌಡ*

ಮೇ 26, 2026

*AI ಎನ್ನುವುದು ಕೇವಲ ತಂತ್ರಜ್ಞಾನದ ಚರ್ಚೆಯಲ್ಲ — ಇದು ಮೂಲಭೂತವಾಗಿ ನಂಬಿಕೆ, ಜವಾಬ್ದಾರಿ, ಪಾರದರ್ಶಕತೆ ಮತ್ತು ನಾಗರಿಕರ ಮೇಲಿನ ಪ್ರಭಾವ : ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್*

ಮೇ 26, 2026

*ಮರಗೋಡು ಗ್ರಾಮದಲ್ಲಿ ಅರೆಭಾಷೆ ಗ್ರಾಮೋತ್ಸವ : ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಿ: ಶಾಸಕ ಡಾ.ಮಂತರ್ ಗೌಡ*

ಮೇ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮೇ 26 NEWS DESK : ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳು ಗ್ರಾಮ ಮಟ್ಟಕ್ಕೂ ತಲುಪುತ್ತಿದ್ದು,…

*AI ಎನ್ನುವುದು ಕೇವಲ ತಂತ್ರಜ್ಞಾನದ ಚರ್ಚೆಯಲ್ಲ — ಇದು ಮೂಲಭೂತವಾಗಿ ನಂಬಿಕೆ, ಜವಾಬ್ದಾರಿ, ಪಾರದರ್ಶಕತೆ ಮತ್ತು ನಾಗರಿಕರ ಮೇಲಿನ ಪ್ರಭಾವ : ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್*

ಮೇ 26, 2026

*ಪ್ರವಾಸೋದ್ಯಮ  ಸಂಘ-ಸಂಸ್ಥೆಗಳ ಸಭೆ : ಕೊಡಗಿನ ಆತಿಥ್ಯ ಪ್ರವಾಸೋದ್ಯಮದ ಬಗ್ಗೆ ಆದಾರರಹಿತ ಟೀಕೆಗಳಿಗೆ ಕಡಿವಾಣ ಅಗತ್ಯ : ದಿನೇಶ್ ಕಾಯ೯ಪ್ಪ*

ಮೇ 26, 2026

*ಫೀ.ಮಾ.ಕಾರ್ಯಪ್ಪ ಕಾಲೇಜಿನ ವಾರ್ಷಿಕೋತ್ಸವ : 77 ವರ್ಷಗಳ ಸುದೀರ್ಘ ಸೇವೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ನೀಡಿದೆ : ಪ್ರೊ. ಅಶೋಕ್ ಸಂಗಪ್ಪ ಆಲೂರ ಮೆಚ್ಚುಗೆ*

ಮೇ 26, 2026

*ಮೇ 29 ಮತ್ತು 30 ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ*

ಮೇ 26, 2026

*ಮಡಿಕೇರಿ ನಗರಸಭೆಯ ಬಿಜೆಪಿ ಆಡಳಿತ ಮಂಡಳಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ* 

ಮೇ 26, 2026

*ನಮ್ಮೂರ ಶಾಲೆ ನಮ್ಮದು, ನಮ್ಮೂರಲ್ಲೆ ಉಳಿಯಲಿ : ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆ ಹಾಗೂ ಗ್ರಾಮಸ್ಥರ ಆಗ್ರಹ*

ಮೇ 26, 2026

*ನಿವೇಶನಕ್ಕಾಗಿ ಆಗ್ರಹಿಸಿ ಮೇ 29 ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ*

ಮೇ 26, 2026

*ದೇವಟ್ ಪರಂಬ್ ನಲ್ಲಿ ಹಿರಿಯರಿಗೆ ಗೌರವ ಅರ್ಪಿಸಿದ ಸಿಎನ್‌ಸಿ : ಅಂತರಾಷ್ಟ್ರೀಯ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ*

ಮೇ 26, 2026

*ಸುಂಟಿಕೊಪ್ಪ : ಹಿರಿಯ ಪತ್ರಕರ್ತ ಬಿ.ಸಿ.ದಿನೇಶ್ ಅವರಿಗೆ ಸನ್ಮಾನ*

ಮೇ 25, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.