Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸಮಾಜ ವಿಜ್ಞಾನ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ*
  • *ಕಾಡಾನೆ ಹಾವಳಿ ತಡೆಗೆ ಒತ್ತಾಯ : ಸುಂಟಿಕೊಪ್ಪ ರೈತ ಸಂಘದಿಂದ ಪ್ರತಿಭಟನೆ*
  • *ಪೊನ್ನಂಪೇಟೆಯಲ್ಲಿ ಮಿನಿ ಉದ್ಯೋಗ ಮೇಳ : ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ದುಡಿಮೆಯ ದಾರಿ : ಸಿ.ಎಸ್.ಸಂಜನಾ*
  • *ಮಾನವ–ಪ್ರಾಣಿ ಸಂಘರ್ಷ, ಜಮ್ಮಾಮಲೆ ಸಮಸ್ಯೆ : ಅರಣ್ಯ ಸಚಿವರೊಂದಿಗೆ ಶಾಸಕ ಎ.ಎಸ್.ಪೊನ್ನಣ್ಣ ಚರ್ಚೆ*
  • *ಅಪ್ರಾಪ್ತ ಮಕ್ಕಳನ್ನು ದುಡಿಮೆಗೆ ಕಳುಹಿಸುವುದು ಶಿಕ್ಷಾರ್ಹ ಅಪರಾಧ : ಮಧು*
  • *ಆ.22 ರಂದು “ಗದ್ದೆಹಳ್ಳ ಗದ್ದೆ ಆಟ”(ಜಿಜಿಎ) ವಿಶಿಷ್ಟ ಕಾರ್ಯಕ್ರಮ*
  • *ಭಾಗಮಂಡಲದಲ್ಲಿ ಆ.22 ರಂದು ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ*
  • *ಮಡಿಕೇರಿಯಲ್ಲಿ ಬಿಜೆಪಿ ಪ್ರತಿಭಟನೆ : ಬಿ.ನಾಗೇಂದ್ರ ವಜಾಕ್ಕೆ ಆಗ್ರಹ*
  • *ಮಡಿಕೇರಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ : ಗ್ರಾ.ಪಂ ನೌಕರರ ಪ್ರತಿಭಟನೆ*
  • *ಕಾಡಾನೆ ಕಾರ್ಯಾಚರಣೆ ಕಣ್ಣೊರೆಸುವ ತಂತ್ರವಾಗಬಾರದು : ಶಾಶ್ವತ ಪರಿಹಾರ ಬೇಕು : ಸೋಮವಾರಪೇಟೆ ಬಿಜೆಪಿ ಒತ್ತಾಯ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ರಾಜ್ಯ ಸರ್ಕಾರದ ವಿರುದ್ಧ ಜನ ಜಾಗೃತರಾಗಬೇಕು : ಕೊಡಗು ಬಿಜೆಪಿ ಎಸ್‍ಟಿ ಮೋರ್ಚಾ ಕರೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ರಾಜ್ಯ ಸರ್ಕಾರದ ವಿರುದ್ಧ ಜನ ಜಾಗೃತರಾಗಬೇಕು : ಕೊಡಗು ಬಿಜೆಪಿ ಎಸ್‍ಟಿ ಮೋರ್ಚಾ ಕರೆ*

ನವೆಂಬರ್ 20, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ನ.20 NEWS DESK : ರಾಜ್ಯದ ವಿವಿಧೆಡೆ ರೈತರ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪ್ರತಿಬಿಂಬಿಸಲ್ಪಟ್ಟಿರುವ ವಕ್ಫ್ ನೋಟೀಸ್ ನಿಂದಾಗಿ ಕೃಷಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಪ್ರಕರಣದಿಂದಲಾದರೂ ಕೊಡಗಿನ ಬೆಳೆಗಾರರು ಎಚ್ಚೆತ್ತುಕೊಂಡು ಜಮ್ಮಾ ಜಾಗದ ಮೇಲಿನ ತಮ್ಮ ಹಕ್ಕನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದು ಕೊಡಗು ಜಿಲ್ಲಾ ಬಿಜೆಪಿಯ ಎಸ್‍ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಕ್ಫ್ ಆಸ್ತಿ ಎಂಬ ನೋಟೀಸ್ ಎಚ್ಚರಿಕೆಯ ಗಂಟೆಯಾಗಿದ್ದು, ಉತ್ತರ ಕರ್ನಾಟಕದ ಹಲವು ಭಾಗಗಳ ರೈತರು ಆತಂಕದಲ್ಲಿದ್ದಾರೆ. ಇನ್ನಾದರೂ ಕೊಡಗಿನ ಬೆಳೆಗಾರರು ಜಾಗೃತರಾಗಲೇಬೇಕಾಗಿದೆ. ಭೂಮಿಯ ಹಕ್ಕಿನ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಮುಂದೊಂದು ದಿನ ಜಮ್ಮಾ ಜಾಗದ ಮೇಲೆ ಮತ್ಯಾರೋ ಅಧಿಕಾರ ಚಲಾಯಿಸಬಹುದಾದ ಸಾಧ್ಯತೆಗಳಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ತಲೆತಲಾಂತರಗಳಿಂದ ಕೊಡಗು ಜಿಲ್ಲೆಯ ಎಲ್ಲಾ ಜಾತಿ, ಜನಾಂಗ, ಧರ್ಮದವರು ಜಮ್ಮಾಭೂಮಿಯನ್ನು ಅನುಭವಿಸಿಕೊಂಡು ಬರುತ್ತಿದ್ದಾರೆ. ಕೃಷಿ ಕಾರ್ಯ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಆದರೆ ಜಮ್ಮಾಭೂಮಿಯ ಕುರಿತು ಇರುವ ಗೊಂದಲಗಳು ಇಲ್ಲಿಯವರೆಗೆ ಸರ್ಕಾರದ ಮಟ್ಟದಲ್ಲಿ ಬಗೆಹರಿದಿಲ್ಲ. ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಿ ಜಮ್ಮಾಭೂಮಿಯ ಗೊಂದಲ ನಿವಾರಣೆಯಾಗಲೇಬೇಕಾಗಿದೆ. ಈ ಭೂಮಿಯ ಮೇಲೆ ಅಧಿಕೃತ ಹಕ್ಕುದಾರರು ಯಾರು ಎನ್ನುವುದು ದಾಖಲೆಗಳ ಮೂಲಕ ಸಾಬೀತಾಗಬೇಕಾಗಿದೆ. ಇದು ಅಧಿಕೃತಗೊಳ್ಳದಿದ್ದಲ್ಲಿ ಮುಂದೊಂದು ದಿನ ಯಾರದ್ದೋ ಆಸ್ತಿ ಎಂಬ ನೋಟೀಸ್ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ.
ಆದ್ದರಿಂದ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದೆ ಜಾತಿ, ಮತ, ಪಕ್ಷ ಬೇಧ ಮರೆತು ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕಾಗಿದೆ. ವಕ್ಫ್ ಆಸ್ತಿ ಎಂಬ ನೋಟೀಸ್ ನಂತೆ ನೋಟೀಸ್ ಗಳು ಬರುವ ಮೊದಲೇ ಜಿಲ್ಲೆಯ ಜನ ಜಾಗೃತರಾಗಬೇಕಾಗಿದೆ. ಪ್ರಸ್ತುತ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಅಮಾಯಕರಿಗೆ ಹಾಗೂ ರೈತರಿಗೆ ವಕ್ಫ್ ಆಸ್ತಿ ಎಂಬ ನೋಟೀಸ್ ನೀಡಿರುವುದು ಖಂಡನೀಯ. ನೋಟೀಸ್ ವಾಪಾಸ್ಸು ಪಡೆದಿರುವುದಾಗಿ ಜನ ಆಕ್ರೋಶಗೊಂಡ ನಂತರ ಸರ್ಕಾರ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎಂಬಂತೆ ರೈತರ ಜೀವನದಲ್ಲಿ ಸರ್ಕಾರ ಚೆಲ್ಲಾಟವಾಡುತ್ತಿರುವುದು ಸರಿಯಲ್ಲ.
ಮುಂದೊಂದು ದಿನ ಕೊಡಗಿನ ಜಮ್ಮಾಭೂಮಿ ಮೇಲೂ ಆಡಳಿತಶಾಹಿಗಳ ದೃಷ್ಟಿ ಬೀಳುವ ಮೊದಲು ಗೊಂದಲ ನಿವಾರಣೆಯಾಗಬೇಕಾಗಿದೆ. ಕೊಡಗಿನಲ್ಲಿ ಜಾಗದ ಹಕ್ಕು ಇತರ ಜಿಲ್ಲೆಗಳಿಂದ ವಿಭಿನ್ನವಾಗಿದ್ದು, ಚುನಾಯಿತ ಪ್ರತಿನಿಧಿಗಳು ಸರ್ಕಾರದ ಪರ ಇರದೆ ಜನರ ಪರ ಇರುವುದು ಉತ್ತಮ ಎಂದು ಎಂ.ಎಂ.ಪರಮೇಶ್ವರ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯ ಸರ್ಕಾರ ಒಂದು ವರ್ಗವನ್ನು ಓಲೈಸಿಕೊಳ್ಳುವ ನಿಟ್ಟಿನಲ್ಲಿ ಇತರರಿಗೆ ತೊಂದರೆ ನೀಡುತ್ತಿದೆ. ವಕ್ಫ್ ಆಸ್ತಿ ಹೆಸರಿನಲ್ಲಿ ನೋಟೀಸ್ ನೀಡಿದಂತೆ ಈ ಹಿಂದೆ ಅರಣ್ಯ ಇಲಾಖೆ ಮೂಲಕವೂ ಜಿಲ್ಲೆಯ ಬೆಳೆಗಾರರಲ್ಲಿ ಸರ್ಕಾರ ಗೊಂದಲ ಸೃಷ್ಟಿಸಿತ್ತು. ಅಲ್ಲದೆ ವಾಲ್ಮೀಕಿ ಅಭಿವೃದ್ಧಿ ನಿಗಮ, ಪರಿಶಿಷ್ಟರ ಅನುದಾನ ದುರುಪಯೋಗ, ಮೂಡ ಹಗರಣ ಸೇರಿದಂತೆ ಇನ್ನೂ ಕೆಲವು ಆರೋಪಗಳು ಸರ್ಕಾರದ ಮೇಲಿದೆ. ಕೊಡಗಿನ ಜನ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೆ ಈ ಸರ್ಕಾರದಿಂದ ಮತ್ತಷ್ಟು ಆತಂಕದ ಸನ್ನಿವೇಶಗಳು ಎದುರಾಗಬಹುದು ಎಂದು  ಆರೋಪಿಸಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸಮಾಜ ವಿಜ್ಞಾನ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ*

ಆಗಷ್ಟ್ 18, 2026

*ಕಾಡಾನೆ ಹಾವಳಿ ತಡೆಗೆ ಒತ್ತಾಯ : ಸುಂಟಿಕೊಪ್ಪ ರೈತ ಸಂಘದಿಂದ ಪ್ರತಿಭಟನೆ*

ಆಗಷ್ಟ್ 18, 2026

*ಪೊನ್ನಂಪೇಟೆಯಲ್ಲಿ ಮಿನಿ ಉದ್ಯೋಗ ಮೇಳ : ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ದುಡಿಮೆಯ ದಾರಿ : ಸಿ.ಎಸ್.ಸಂಜನಾ*

ಆಗಷ್ಟ್ 18, 2026

*ಕಾಡಾನೆ ಹಾವಳಿ ತಡೆಗೆ ಒತ್ತಾಯ : ಸುಂಟಿಕೊಪ್ಪ ರೈತ ಸಂಘದಿಂದ ಪ್ರತಿಭಟನೆ*

ಆಗಷ್ಟ್ 18, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಶಾಲನಗರ ಆ.18 NEWS DESK : ಕಾಡಾನೆಗಳ ಹಾವಳಿ ತಡೆಗಟ್ಟಿ ರೈತರ ಆಸ್ತಿ ಹಾಗೂ ಬೆಳೆಗಳನ್ನು ರಕ್ಷಿಸಲು ಶಾಶ್ವತ ಕ್ರಮ…

*ಪೊನ್ನಂಪೇಟೆಯಲ್ಲಿ ಮಿನಿ ಉದ್ಯೋಗ ಮೇಳ : ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ದುಡಿಮೆಯ ದಾರಿ : ಸಿ.ಎಸ್.ಸಂಜನಾ*

ಆಗಷ್ಟ್ 18, 2026

*ಮಾನವ–ಪ್ರಾಣಿ ಸಂಘರ್ಷ, ಜಮ್ಮಾಮಲೆ ಸಮಸ್ಯೆ : ಅರಣ್ಯ ಸಚಿವರೊಂದಿಗೆ ಶಾಸಕ ಎ.ಎಸ್.ಪೊನ್ನಣ್ಣ ಚರ್ಚೆ*

ಆಗಷ್ಟ್ 18, 2026

*ಅಪ್ರಾಪ್ತ ಮಕ್ಕಳನ್ನು ದುಡಿಮೆಗೆ ಕಳುಹಿಸುವುದು ಶಿಕ್ಷಾರ್ಹ ಅಪರಾಧ : ಮಧು*

ಆಗಷ್ಟ್ 18, 2026

*ಆ.22 ರಂದು “ಗದ್ದೆಹಳ್ಳ ಗದ್ದೆ ಆಟ”(ಜಿಜಿಎ) ವಿಶಿಷ್ಟ ಕಾರ್ಯಕ್ರಮ*

ಆಗಷ್ಟ್ 18, 2026

*ಭಾಗಮಂಡಲದಲ್ಲಿ ಆ.22 ರಂದು ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ*

ಆಗಷ್ಟ್ 18, 2026

*ಮಡಿಕೇರಿಯಲ್ಲಿ ಬಿಜೆಪಿ ಪ್ರತಿಭಟನೆ : ಬಿ.ನಾಗೇಂದ್ರ ವಜಾಕ್ಕೆ ಆಗ್ರಹ*

ಆಗಷ್ಟ್ 18, 2026

*ಮಡಿಕೇರಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ : ಗ್ರಾ.ಪಂ ನೌಕರರ ಪ್ರತಿಭಟನೆ*

ಆಗಷ್ಟ್ 18, 2026

*ಕಾಡಾನೆ ಕಾರ್ಯಾಚರಣೆ ಕಣ್ಣೊರೆಸುವ ತಂತ್ರವಾಗಬಾರದು : ಶಾಶ್ವತ ಪರಿಹಾರ ಬೇಕು : ಸೋಮವಾರಪೇಟೆ ಬಿಜೆಪಿ ಒತ್ತಾಯ*

ಆಗಷ್ಟ್ 18, 2026

*ನಾಪಂಡ ಮುದ್ದಪ್ಪ ಹಾಗೂ ಮುತ್ತಪ್ಪ ಸಹೋದರರಿಂದ ಹೆಬ್ಬಾಲೆ ಶಾಲೆಗೆ ಕಾಯಕಲ್ಪ : ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಬಗ್ಗೆ ವಿಸ್ತೃತವಾಗಿ ಅರಿತುಕೊಳ್ಳಲು ಕರೆ*

ಆಗಷ್ಟ್ 18, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.