Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಭಾಗಮಂಡಲದಲ್ಲಿ ಆ.22 ರಂದು ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ*
  • *ಮಡಿಕೇರಿಯಲ್ಲಿ ಬಿಜೆಪಿ ಪ್ರತಿಭಟನೆ : ಬಿ.ನಾಗೇಂದ್ರ ವಜಾಕ್ಕೆ ಆಗ್ರಹ*
  • *ಮಡಿಕೇರಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ : ಗ್ರಾ.ಪಂ ನೌಕರರ ಪ್ರತಿಭಟನೆ*
  • *ಕಾಡಾನೆ ಕಾರ್ಯಾಚರಣೆ ಕಣ್ಣೊರೆಸುವ ತಂತ್ರವಾಗಬಾರದು : ಶಾಶ್ವತ ಪರಿಹಾರ ಬೇಕು : ಸೋಮವಾರಪೇಟೆ ಬಿಜೆಪಿ ಒತ್ತಾಯ*
  • *ನಾಪಂಡ ಮುದ್ದಪ್ಪ ಹಾಗೂ ಮುತ್ತಪ್ಪ ಸಹೋದರರಿಂದ ಹೆಬ್ಬಾಲೆ ಶಾಲೆಗೆ ಕಾಯಕಲ್ಪ : ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಬಗ್ಗೆ ವಿಸ್ತೃತವಾಗಿ ಅರಿತುಕೊಳ್ಳಲು ಕರೆ*
  • *ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ಶುದ್ಧೀಕರಣ : ಕಾನೂನು ಕ್ರಮಕ್ಕೆ ಮಾನವ ಬಂಧುತ್ವ ವೇದಿಕೆ ಮತ್ತು ದಲಿತ ಸಂಘರ್ಷ ಸಮಿತಿ ಒತ್ತಾಯ*
  • *ಮಡಿಕೇರಿ ನಗರ ಯುವ ಕಾಂಗ್ರೆಸ್ ನಿಂದ ಸ್ವಾತಂತ್ರ್ಯೋತ್ಸವದ ಅರ್ಥಪೂರ್ಣ ಆಚರಣೆ : ವಿದ್ಯಾರ್ಥಿಗಳಿಗೆ ಛತ್ರಿ ವಿತರಣೆ*
  • **ಮಡಿಕೇರಿ ನಗರ ಯುವ ಕಾಂಗ್ರೆಸ್ ನಿಂದ ಸ್ವಾತಂತ್ರ್ಯೋತ್ಸವದ ಅರ್ಥಪೂರ್ಣ ಆಚರಣೆ : ವಿದ್ಯಾರ್ಥಿಗಳಿಗೆ ಛತ್ರಿ ವಿತರಣೆ**
  • *ಮಡಿಕೇರಿ ನಗರ ಯುವ ಕಾಂಗ್ರೆಸ್ ನಿಂದ ಸ್ವಾತಂತ್ರ್ಯೋತ್ಸವದ ಅರ್ಥಪೂರ್ಣ ಆಚರಣೆ : ವಿದ್ಯಾರ್ಥಿಗಳಿಗೆ ಛತ್ರಿ ವಿತರಣೆ*
  • *ದಶಮಂಟಪ ಸಮಿತಿ ಅಧಿಕಾರ ಹಸ್ತಾಂತರ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ವೀರ ಸೇನಾನಿಗಳಿಗೆ ಅಗೌರವ : ಕೊಡವ ಮಕ್ಕಡ ಕೂಟ ಖಂಡನೆ : ಕಿಡಿಗೇಡಿಯ ಬಂಧನಕ್ಕೆ ಆಗ್ರಹ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ವೀರ ಸೇನಾನಿಗಳಿಗೆ ಅಗೌರವ : ಕೊಡವ ಮಕ್ಕಡ ಕೂಟ ಖಂಡನೆ : ಕಿಡಿಗೇಡಿಯ ಬಂಧನಕ್ಕೆ ಆಗ್ರಹ*

ನವೆಂಬರ್ 22, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ನ.22 NEWS DESK : ಭಾರತ ದೇಶ ಕಂಡ ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕೆಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶ್ರೀವತ್ಸ ಭಟ್ ಎಂಬ ಹೆಸರಿನ ಖಾತೆ ಮೂಲಕ ಭಾರತೀಯ ಸೇನೆಯ ಪಿತಾಮಹ ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ಗಳ ಜನರಲ್ ಖ್ಯಾತಿಯ ಜನರಲ್ ತಿಮ್ಮಯ್ಯ ಅವರನ್ನು ಅವಮಾನಿಸಲಾಗಿದೆ. ಇದು ಕೊಡಗು ಮಾತ್ರವಲ್ಲದೆ ಇಡೀ ದೇಶದ ಜನರಿಗೆ ನೋವನ್ನುಂಟು ಮಾಡಿದೆ. ಭಾರತೀಯ ಸೇನೆಯ ಬಗ್ಗೆ ಗೌರವವಿಲ್ಲದ ದೇಶದ್ರೋಹಿ ವೀರ ಸೇನಾನಿಗಳ ಬಗ್ಗೆ ಕೇವಲವಾಗಿ ಪ್ರತಿಕ್ರಿಯೆ ನೀಡಿದ್ದಾನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತೀಯ ಸೇನೆಯಲ್ಲಿ ಅಮೋಘ ಸೇವೆ ಸಲ್ಲಿಸಿ ವಿಶ್ವದ ಗಮನ ಸೆಳೆದಿದ್ದ ಇಬ್ಬರು ವೀರ ಸೇನಾಧಿಕಾರಿಗಳ ಬಗ್ಗೆ ಅವಹೇಳನ ಮಾಡಿರುವುದನ್ನು ಸಹಿಸಿಕೊಂಡು ಇರಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕಿಡಿಗೇಡಿಯನ್ನು ಕೊಡಗು ಜಿಲ್ಲಾ ಪೊಲೀಸರು ತಕ್ಷಣ ಪತ್ತೆ ಹಚ್ಚಿ ಬಂಧಿಸಬೇಕು ಮತ್ತು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೊಳ್ಳಜಿರ ಅಯ್ಯಪ್ಪ ಒತ್ತಾಯಿಸಿದ್ದಾರೆ. ಭಾರತೀಯ ಸೇನೆಯಲ್ಲಿ ಫೀಲ್ಡ್ ಮಾರ್ಷಲ್ ಹುದ್ದೆಗೆ ಏರಿದ ಕೇವಲ ಇಬ್ಬರು ಸೇನಾಧಿಕಾರಿಗಳಲ್ಲಿ ಕಾರ್ಯಪ್ಪನವರು ಒಬ್ಬರಾಗಿದ್ದಾರೆ. ಸೇನಾಪಡೆಯ ಹೀರೋ ಎಂದೇ ಖ್ಯಾತರಾಗಿರುವ ಕಾರ್ಯಪ್ಪನವರು, ವಸಾಹತುಶಾಹಿ ಆಡಳಿತದಡಿಯಲ್ಲಿದ್ದ ಭಾರತೀಯ ಸೇನೆಯನ್ನು ಸ್ವತಂತ್ರ ಭಾರತದ ಸೇನೆಯಾಗಿ ಮಾರ್ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾರ್ಯಪ್ಪ ಮಿಲಿಟರಿ ವೃತ್ತಿಜೀವನದ ಹುದ್ದೆಗಳಲ್ಲಿ ಮೇಲೇರುತ್ತಾ, 1923ರಲ್ಲಿ ಲೆಫ್ಟಿನೆಂಟ್ ಆದರು. 1927ರಲ್ಲಿ ಕ್ಯಾಪ್ಟನ್ ಆದರು, 1942ರಲ್ಲಿ ಲೆಫ್ಟಿನೆಂಟ್ ಕೊಲೊನೆಲ್ ಆಗಿ, 1946ರಲ್ಲಿ ಬ್ರಿಗೇಡಿಯರ್ ಹುದ್ದೆಗೇರಿದರು.  ಬ್ರಿಟಿಷ್ ಆಡಳಿತದಡಿ ಕಾರ್ಯನಿರ್ವಹಿಸುವಾಗ, ಕಾರ್ಯಪ್ಪನವರು ಮಧ್ಯ ಪೂರ್ವ (1941-1942), ಬರ್ಮಾ (ಇಂದಿನ ಮಯನ್ಮಾರ್, 1943-1944) ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಿದರು. 1942ರಲ್ಲಿ, ಕಾರ್ಯಪ್ಪನವರು ಸೇನಾಪಡೆಯ ನೇತೃತ್ವ ವಹಿಸಿದ ಮೊದಲ ಭಾರತೀಯ ಅಧಿಕಾರಿ ಎನಿಸಿದರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅವರು ನೀಡಿದ ಕೊಡುಗೆಗಳನ್ನು ಗುರುತಿಸಿ, ಅವರನ್ನು ಆರ್ಡರ್ ಆಫ್ ದ ಬ್ರಿಟಿಷ್ ಎಂಪೈರ್ ಸದಸ್ಯನನ್ನಾಗಿ ನೇಮಿಸಿ, ಗೌರವಿಸಲಾಯಿತು. 1947ರಲ್ಲಿ ಭಾರತ ಸ್ವತಂತ್ರಗೊಳ್ಳುವ ಮೊದಲು ನಡೆದ ಭಾರತ – ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ, ಎರಡು ಹೊಸ ದೇಶಗಳಿಗೆ ಸೇನಾಪಡೆಗಳನ್ನು ವಿಭಜಿಸುವ ಸವಾಲಿನ ಜವಾಬ್ದಾರಿಯೂ ಕಾರ್ಯಪ್ಪನವರದಾಗಿತ್ತು. ಜನರಲ್ ಕೆ.ಎಸ್.ತಿಮ್ಮಯ್ಯ ಅವರು ಡೆಹ್ರಾ ಡೂನ್‍ನ ಪ್ರತಿಷ್ಠಿತ ಇಂಡಿಯನ್ ಮಿಲಿಟರಿ ಅಕಾಡೆಮಿಯ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದರು. ನಂತರ ಅವರು ಕೊರಿಯಾದಲ್ಲಿ ತಟಸ್ಥ ರಾಷ್ಟ್ರಗಳ ವಾಪಸಾತಿ ಆಯೋಗದಲ್ಲಿ ಭಾಗವಹಿಸಲು ವಿಶ್ವಸಂಸ್ಥೆಯಿಂದ ಆಯ್ಕೆಯಾದರು. ತಟಸ್ಥ ರಾಷ್ಟ್ರಗಳ ವಾಪಸಾತಿ ಆಯೋಗದ ಕಾರ್ಯದ ಯಶಸ್ಸಿನ ನಂತರ, ಅವರು ಭಾರತಕ್ಕೆ ಹಿಂದಿರುಗಿದರು. 1953 ರಲ್ಲಿ ಲೆಫ್ಟಿನೆಂಟ್-ಜನರಲ್ ಶ್ರೇಣಿಯೊಂದಿಗೆ ದಕ್ಷಿಣ ಕಮಾಂಡ್‍ನ ಜನರಲ್ ಆಫೀಸರ್ ಕಮಾಂಡಿಂಗ್ ಆಗಿ ಬಡ್ತಿ ಪಡೆದರು. 1 ನೇ ಜನವರಿ 1949 ರಿಂದ ಮೇ 8 1961 ರವರೆಗೆ ಕುಮಾನ್ ರೆಜಿಮೆಂಟ್‍ನ ಮೊದಲ ಭಾರತೀಯ ಕರ್ನಲ್ ಆದರು. 1957 ರಂದು ಆರ್ಮಿ ಸ್ಟಾಫ್‍ನ 6 ನೇ ಮುಖ್ಯಸ್ಥರಾಗಿ ಭಾರತೀಯ ಸೇನೆಯ ಉಸ್ತುವಾರಿ ವಹಿಸಿಕೊಂಡರು. 35 ವರ್ಷಗಳ ವಿಶಿಷ್ಟ ಮಿಲಿಟರಿ ಸೇವೆಯನ್ನು ಪೂರ್ಣಗೊಳಿಸಿದ ಅವರು 1961 ರಲ್ಲಿ ಸೈನ್ಯದಿಂದ ನಿವೃತ್ತರಾದರು. ಸೈನಿಕರ ಸೇನಾನಿ, ಜನರಲ್ ಗಳ ಜನರಲ್ ಎಂದೇ ಖ್ಯಾತಿ ಗಳಿಸಿದ್ದ ಅಸಾಮಾನ್ಯ ಸೇನಾನಿ ಜನರಲ್ ತಿಮ್ಮಯ್ಯ ಅವರು ರಾಷ್ಟ್ರಕ್ಕೆ ನೀಡಿದ ಅತ್ಯುತ್ತಮ ಸೇವೆಗಾಗಿ 1954 ರಲ್ಲಿ “ಪದ್ಮ ಭೂಷಣ” ಪ್ರಶಸ್ತಿಯನ್ನು ಪಡೆದರು. ಈ ಇಬ್ಬರು ಮಹಾನ್ ಸೇನಾನಿಗಳ ಮಹಾ ಸಾಧನೆಯ ಬಗ್ಗೆ ಅರಿವಿಲ್ಲದೆ ಕಿಡಿಗೇಡಿಗಳು ಅವಹೇಳನ ಮಾಡಿರುವುದನ್ನು ಕೊಡವ ಮಕ್ಕಡ ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಬೊಳ್ಳಜಿರ ಅಯ್ಯಪ್ಪ ತಿಳಿಸಿದ್ದಾರೆ.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಭಾಗಮಂಡಲದಲ್ಲಿ ಆ.22 ರಂದು ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ*

ಆಗಷ್ಟ್ 18, 2026

*ಮಡಿಕೇರಿಯಲ್ಲಿ ಬಿಜೆಪಿ ಪ್ರತಿಭಟನೆ : ಬಿ.ನಾಗೇಂದ್ರ ವಜಾಕ್ಕೆ ಆಗ್ರಹ*

ಆಗಷ್ಟ್ 18, 2026

*ಮಡಿಕೇರಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ : ಗ್ರಾ.ಪಂ ನೌಕರರ ಪ್ರತಿಭಟನೆ*

ಆಗಷ್ಟ್ 18, 2026

*ಮಡಿಕೇರಿಯಲ್ಲಿ ಬಿಜೆಪಿ ಪ್ರತಿಭಟನೆ : ಬಿ.ನಾಗೇಂದ್ರ ವಜಾಕ್ಕೆ ಆಗ್ರಹ*

ಆಗಷ್ಟ್ 18, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಆ.18 NEWS DESK : ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಹಗರಣದ ಆರೋಪಿ ಸ್ಥಾನದಲ್ಲಿರುವ ಬಿ.ನಾಗೇಂದ್ರರವರನ್ನು ಸಂಪುಟದಿಂದ ಕೈಬಿಡಲು…

*ಮಡಿಕೇರಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ : ಗ್ರಾ.ಪಂ ನೌಕರರ ಪ್ರತಿಭಟನೆ*

ಆಗಷ್ಟ್ 18, 2026

*ಕಾಡಾನೆ ಕಾರ್ಯಾಚರಣೆ ಕಣ್ಣೊರೆಸುವ ತಂತ್ರವಾಗಬಾರದು : ಶಾಶ್ವತ ಪರಿಹಾರ ಬೇಕು : ಸೋಮವಾರಪೇಟೆ ಬಿಜೆಪಿ ಒತ್ತಾಯ*

ಆಗಷ್ಟ್ 18, 2026

*ನಾಪಂಡ ಮುದ್ದಪ್ಪ ಹಾಗೂ ಮುತ್ತಪ್ಪ ಸಹೋದರರಿಂದ ಹೆಬ್ಬಾಲೆ ಶಾಲೆಗೆ ಕಾಯಕಲ್ಪ : ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಬಗ್ಗೆ ವಿಸ್ತೃತವಾಗಿ ಅರಿತುಕೊಳ್ಳಲು ಕರೆ*

ಆಗಷ್ಟ್ 18, 2026

*ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ಶುದ್ಧೀಕರಣ : ಕಾನೂನು ಕ್ರಮಕ್ಕೆ ಮಾನವ ಬಂಧುತ್ವ ವೇದಿಕೆ ಮತ್ತು ದಲಿತ ಸಂಘರ್ಷ ಸಮಿತಿ ಒತ್ತಾಯ*

ಆಗಷ್ಟ್ 18, 2026

*ಮಡಿಕೇರಿ ನಗರ ಯುವ ಕಾಂಗ್ರೆಸ್ ನಿಂದ ಸ್ವಾತಂತ್ರ್ಯೋತ್ಸವದ ಅರ್ಥಪೂರ್ಣ ಆಚರಣೆ : ವಿದ್ಯಾರ್ಥಿಗಳಿಗೆ ಛತ್ರಿ ವಿತರಣೆ*

ಆಗಷ್ಟ್ 18, 2026

**ಮಡಿಕೇರಿ ನಗರ ಯುವ ಕಾಂಗ್ರೆಸ್ ನಿಂದ ಸ್ವಾತಂತ್ರ್ಯೋತ್ಸವದ ಅರ್ಥಪೂರ್ಣ ಆಚರಣೆ : ವಿದ್ಯಾರ್ಥಿಗಳಿಗೆ ಛತ್ರಿ ವಿತರಣೆ**

ಆಗಷ್ಟ್ 18, 2026

*ಮಡಿಕೇರಿ ನಗರ ಯುವ ಕಾಂಗ್ರೆಸ್ ನಿಂದ ಸ್ವಾತಂತ್ರ್ಯೋತ್ಸವದ ಅರ್ಥಪೂರ್ಣ ಆಚರಣೆ : ವಿದ್ಯಾರ್ಥಿಗಳಿಗೆ ಛತ್ರಿ ವಿತರಣೆ*

ಆಗಷ್ಟ್ 18, 2026

*ದಶಮಂಟಪ ಸಮಿತಿ ಅಧಿಕಾರ ಹಸ್ತಾಂತರ*

ಆಗಷ್ಟ್ 17, 2026

*ಅರಮೇರಿ ಕಳಂಚೇರಿ ಮಠದಲ್ಲಿ ‘ಕೊಡವ ಪುಸ್ತಕ ಪತ್ತಾಯ’ ಕಾರ್ಯಕ್ರಮ* 

ಆಗಷ್ಟ್ 17, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.