
ಮಡಿಕೇರಿ ಡಿ.3 NEWS DESK : ಉಡೋತ್‍ಮೊಟ್ಟೆಯ ಶ್ರೀ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯದಲ್ಲಿ ಡಿ.6 ಮತ್ತು 7 ರಂದು ನಾಲ್ಕನೇ ವರ್ಷದ ನೇಮೋತ್ಸವ ನಡೆಯಲಿದೆ. ಡಿ.6 ರಂದು ಬೆಳಿಗ್ಗೆ 7.30 ಗಂಟೆಗೆ ಗಣಪತಿ ಹೋಮ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5 ಗಂಟೆಗೆ ದೈವದ ಭಂಡಾರ ಇಳಿಯುವುದು, ರಾತ್ರಿ 10.30 ಗಂಟೆಯಿಂದ ಡಿ.7 ರಂದು ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮವು ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೈವಸ್ಥಾನದ ಪ್ರಮುಖರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ 9900931278, 9591304757, 9483399077 ಸಂಪರ್ಕಿಸಬಹುದಾಗಿದೆ.










