Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಕ್ಕಳ ಸುರಕ್ಷತೆಗಾಗಿ ವಿವಿಧೆಡೆ ಜಾಗೃತಿ ಅಭಿಯಾನ*
  • *ಡಾ. ಕೆ.ಪಿ. ಲಲಿತ ಅವರ ‘ಕೊಡಗಿನ ಜಾನಪದ ಕಥೆಗಳು’ ಕೃತಿಗೆ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ*
  • *ಮಕ್ಕಂದೂರು-ಮುಕ್ಕೋಡ್ಲು ಗೌಡ ಸಮಾಜದಿಂದ ಕೈಲ್ ಮುಹೂರ್ತ ಸಂತೋಷಕೂಟ*
  • *ನಶಾ ಮುಕ್ತ ಭಾರತ ಜಾಗೃತಿ ಕಾರ್ಯಕ್ರಮ*
  • *ಕರ್ನಾಟಕದಲ್ಲಿ ಹಿಂಗಾರು ಮಳೆ ಕೊರತೆ ಸಾಧ್ಯತೆ: ರೈತರಿಗೆ ಎಚ್ಚರಿಕೆ*
  • *ಸುಂಟಿಕೊಪ್ಪದಲ್ಲಿ ಪ್ರಜಾ ಸೇವೆ ಅಭಿಯಾನ: 70ಕ್ಕೂ ಅಧಿಕ ಅಹವಾಲು ಸ್ವೀಕಾರ*
  • *ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ : ಮಡಿಕೇರಿಯಲ್ಲಿ ಎಸ್‌ಡಿಪಿಐ ಪ್ರತಿಭಟನೆ : ಉನ್ನತ ಮಟ್ಟದ ತನಿಖೆಗೆ ಆಗ್ರಹ*
  • *ಅ.6 ರಂದು ಚೇರಂಬಾಣೆಯಲ್ಲಿ ಸಿಎನ್‌ಸಿ ಮಾನವ ಸರಪಳಿ ಕಾರ್ಯಕ್ರಮ*
  • *ವಿರಾಜಪೇಟೆ ತಾಲ್ಲೂಕು ಮಟ್ಟದ ಪ್ರಜಾಸೇವಾ ಆಂದೋಲನ : ಎರಡು-ಮೂರು ತಿಂಗಳ ನಂತರ ಅತ್ಯಂತ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ : ಎಲ್-ನಿನೋ ಪರಿಣಾಮದಿಂದ ಇಡೀ ಪ್ರಪಂಚ ಹವಾಮಾನ ವೈಪರೀತ್ಯ ಎದುರಿಸುತ್ತಿದೆ : ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ*
  • *ಕ್ಲೀನ್ ಕೊಡಗು : ಮಾಜಿ ಸೈನಿಕರು, ನಿವೃತ್ತ ನೌಕರರಿಂದ ಸ್ವಚ್ಛತಾ ಅಭಿಯಾನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಡಿ.13ರಂದು ಕುಶಾಲನಗರದಲ್ಲಿ 6ನೇ ವರ್ಷದ ಅದ್ದೂರಿ ಹನುಮ ಜಯಂತಿ ಮಹೋತ್ಸವ : ಮಂಟಪಗಳ ಶೋಭಾಯಾತ್ರೆಗೆ ಸಿದ್ಧತೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಡಿ.13ರಂದು ಕುಶಾಲನಗರದಲ್ಲಿ 6ನೇ ವರ್ಷದ ಅದ್ದೂರಿ ಹನುಮ ಜಯಂತಿ ಮಹೋತ್ಸವ : ಮಂಟಪಗಳ ಶೋಭಾಯಾತ್ರೆಗೆ ಸಿದ್ಧತೆ*

ಡಿಸೆಂಬರ್ 10, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಕುಶಾಲನಗರ NEWS DESK ಡಿ 10 : ಕುಶಾಲನಗರದಲ್ಲಿ ಡಿಸೆಂಬರ್ 13 ರಂದು 6ನೇ ವರ್ಷದ ಅದ್ದೂರಿ ಹನುಮ ಜಯಂತಿ ಮಹೋತ್ಸವ ನಡೆಯಲಿದ್ದು, ಈ ಸಂಬಂಧ ಕುಶಾಲನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸುವ ಮಂಟಪಗಳ ಅದ್ದೂರಿ ಶೋಭಾಯಾತ್ರೆ ನಡೆಯಲಿದೆ ಎಂದು ಹನುಮ ಜಯಂತಿ ದಶ ಮಂಟಪಗಳ ಸಮಿತಿ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ತಿಳಿಸಿದ್ದಾರೆ. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಥಬೀದಿಯಲ್ಲಿರುವ ಆಂಜನೇಯ ದೇವಾಲಯ ‌ಸಮಿತಿಯಿಂದ ಕಳೆದ 38 ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಹನುಮ ಜಯಂತಿ ಕಳೆದೈದು ವರ್ಷಗಳಿಂದ ತನ್ನ ಸ್ವರೂಪವನ್ನು ‌ವಿಸ್ತರಿಸಿಕೊಂಡಿದೆ. ಕುಶಾಲನಗರ ಸುತ್ತಮುತ್ತಲಿನ ಗ್ರಾಮಗಳನ್ನು ಒಳಗೊಂಡಂತೆ  ಹನುಮ ಜಯಂತಿ ಆಚರಣೆಗೆ ಮುಂದಾದ ನಂತರ ಮಡಿಕೇರಿ, ಗೋಣಿಕೊಪ್ಪಲಿನಲ್ಲಿ ನಡೆಯುವ ದಸರಾ ರೀತಿಯ  ವೈಭವ ಪಡೆದುಕೊಂಡಿದೆ ಎಂದು ಹೇಳಿದರು. ಆಂಜನೇಯ ದೇವಾಲಯದ ಮೂಲ ಮಂಟಪದೊಂದಿಗೆ ವಿವಿಧ ಗ್ರಾಮಗಳಿಂದ ಪ್ರತ್ಯೇಕ ಸಮಿತಿಗಳ  ಮಂಟಪಗಳು ಕೂಡ ಕಾರ್ಯಕ್ರಮದಲ್ಲಿ ತಮ್ಮ ಛಾಪು ಮೂಡಿಸಲು ಆರಂಭಿಸಿದೆ.   ಕುಶಾಲನಗರ ರಥಬೀದಿಯ ಆಂಜನೇಯ ದೇವಾಲಯದ ಶ್ರೀ ರಾಮಾಂಜನೇಯ ಉತ್ಸವ ಸಮಿತಿ ಮಂಟಪ, ಕುಶಾಲನಗರದ ಗೋಪಾಲ್ ಸರ್ಕಲ್ ನ ಗಜಾನನ ಗೆಳೆಯರ ಬಳಗದ ಮಂಟಪ, ಮಾದಾಪಟ್ಟಣದ ರಾಮದೂತ ಜಯಂತಿ ಆಚರಣಾ ಸಮಿತಿ, ಕುಶಾಲನಗರ ಹೆಚ್.ಆರ್.ಪಿ.ಕಾಲನಿಯ ಅಂಜನಿಪುತ್ರ ಜಯಂತ್ಯೋತ್ಸವ ಆಚರಣಾ ಸಮಿತಿ, ಶ್ರೀರಾಮಮಂದಿರ ಮಂಟಪ, ಹಾರಂಗಿ-ಚಿಕ್ಕತ್ತೂರಿನ ವೀರ ಹನುಮ ಸೇವಾ ಸಮಿತಿ, ಮುಳ್ಳುಸೋಗೆಯ ಚಾಮುಂಡೇಶ್ವರಿ ಉತ್ಸವ ಸಮಿತಿ ಮಂಟಪ, ಕೂಡಿಗೆ ಹನುಮ ಸೇವಾ ಸಮಿತಿ, ಬೈಚನಹಳ್ಳಿಯ ಗೆಳೆಯರ ಬಳಗದ ಮಂಟಪ, ಗುಡ್ಡೆಹೊಸೂರು ವೀರಾಂಜನೇಯ ಸೇವಾ ಸಮಿತಿ ಮಂಟಪಗಳು ಪ್ರದರ್ಶನ ಗೊಳ್ಳಲಿದೆ. ಈ ಬಾರಿಯ ಹನುಮ ಜಯಂತಿಯ ಒಟ್ಟು ಬಜೆಟ್ ಅಂದಾಜು ರೂ 1.5  ಕೋಟಿಯಷ್ಟಿದೆ. ಪ್ರತಿ ಸಮಿತಿಗಳು  ಕೂಡ ಆಕರ್ಷಕ ಮಂಟಪಗಳನ್ನು ಸಿದ್ದಗೊಳಿಸುತ್ತಿವೆ. ಎಲ್ಲವೂ ಗ್ರಾಮಸ್ಥರು, ದಾನಿಗಳ ಆರ್ಥಿಕ ಸಹಕಾರದಿಂದ ನಡೆಸಲಾಗುತ್ತಿದ್ದು, ಕ್ಷೇತ್ರ ಶಾಸಕರ ಮೂಲಕ ಸರಕಾರದಿಂದ ಅನುದಾನಕ್ಕೆ ಕೋರಿಕೆ ಇಡಲಾಗಿದೆ. ಈ ಬಾರಿ ಹನುಮ ಜಯಂತಿಗೆ ಅಂದಾಜು 30 ಸಾವಿರ ಮಂದಿ ಸೇರುವ ನಿರೀಕ್ಷೆಯಿದೆ. ಎಲ್ಲಾ ಮಂಟಪಗಳು ತಮ್ಮ ಕಥಾವಸ್ತು ಪ್ರದರ್ಶಿಸಲು ಕುಶಾಲನಗರ ಗಣಪತಿ ದೇವಾಲಯ ಮುಂಭಾಗ ಸಮಯಾವಕಾಶ ನಿಗದಿಪಡಿಸಲಾಗಿದೆ. ಮಂಟಪಗಳು ಬರುವ ಮಾರ್ಗಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು. ನಂತರ ವಿಜೇತರಿಗೆ ಬಹುಮಾನ‌ ವಿತರಣೆ ನಡೆಯಲಿದೆ ಎಂದು ತಿಳಿಸಿದರು. ಸಮಿತಿಯ ನಿರ್ದೇಶಕ ಬಿ.ಅಮೃತ್ ರಾಜ್ ಮಾತನಾಡಿ, ಇತಿಹಾಸ ಪ್ರಸಿದ್ದ ಗಣಪತಿ ರಥೋತ್ಸವ ನಂತರ ಕುಶಾಲನಗರದಲ್ಲಿ ಹನುಮ ಜಯಂತಿ ಆಚರಣೆ ಹೆಚ್ಚು ಗಮನ ಸೆಳೆಯುತ್ತಿದೆ. ಜಾತ್ರೋತ್ಸವದಂತೆ ಹನುಮ ಜಯಂತಿಯಲ್ಲಿ ಕೂಡ ಹೆಚ್ಚಿನ ಮಂದಿ ಪಾಲ್ಗೊಳ್ಳುವ ಮೂಲಕ ರಾಜ್ಯ‌ಮಟ್ಟದಲ್ಲಿ‌ ಖ್ಯಾತಿ ಗಳಿಸುವಂತಾಗಬೇಕಿದೆ ಎಂದರು. ಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಕಿಶೋರ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಮನಾಥನ್, ಖಜಾಂಚಿ ಗಿರೀಶ್, ಸಹ ಕಾರ್ಯದರ್ಶಿ ಸುನಿಲ್, ನಿರ್ದೇಶಕ ಕೆ.ಎಸ್.ನಾಗೇಶ್ ಇದ್ದರು.

Follow us Follow us
Share. WhatsApp Facebook Twitter Email Telegram Copy Link

Related Posts

*ಮಕ್ಕಳ ಸುರಕ್ಷತೆಗಾಗಿ ವಿವಿಧೆಡೆ ಜಾಗೃತಿ ಅಭಿಯಾನ*

ಅಕ್ಟೋಬರ್ 3, 2026

*ಡಾ. ಕೆ.ಪಿ. ಲಲಿತ ಅವರ ‘ಕೊಡಗಿನ ಜಾನಪದ ಕಥೆಗಳು’ ಕೃತಿಗೆ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ*

ಅಕ್ಟೋಬರ್ 3, 2026

*ಮಕ್ಕಂದೂರು-ಮುಕ್ಕೋಡ್ಲು ಗೌಡ ಸಮಾಜದಿಂದ ಕೈಲ್ ಮುಹೂರ್ತ ಸಂತೋಷಕೂಟ*

ಅಕ್ಟೋಬರ್ 3, 2026

*ಡಾ. ಕೆ.ಪಿ. ಲಲಿತ ಅವರ ‘ಕೊಡಗಿನ ಜಾನಪದ ಕಥೆಗಳು’ ಕೃತಿಗೆ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ*

ಅಕ್ಟೋಬರ್ 3, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ.3: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ದತ್ತಿನಿಧಿ ಪ್ರಶಸ್ತಿಗಳಲ್ಲಿ ಒಂದಾದ ಕೊಡಗಿನ ಗೌರಮ್ಮ…

*ಮಕ್ಕಂದೂರು-ಮುಕ್ಕೋಡ್ಲು ಗೌಡ ಸಮಾಜದಿಂದ ಕೈಲ್ ಮುಹೂರ್ತ ಸಂತೋಷಕೂಟ*

ಅಕ್ಟೋಬರ್ 3, 2026

*ನಶಾ ಮುಕ್ತ ಭಾರತ ಜಾಗೃತಿ ಕಾರ್ಯಕ್ರಮ*

ಅಕ್ಟೋಬರ್ 3, 2026

*ಕರ್ನಾಟಕದಲ್ಲಿ ಹಿಂಗಾರು ಮಳೆ ಕೊರತೆ ಸಾಧ್ಯತೆ: ರೈತರಿಗೆ ಎಚ್ಚರಿಕೆ*

ಅಕ್ಟೋಬರ್ 3, 2026

*ಸುಂಟಿಕೊಪ್ಪದಲ್ಲಿ ಪ್ರಜಾ ಸೇವೆ ಅಭಿಯಾನ: 70ಕ್ಕೂ ಅಧಿಕ ಅಹವಾಲು ಸ್ವೀಕಾರ*

ಅಕ್ಟೋಬರ್ 3, 2026

*ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ : ಮಡಿಕೇರಿಯಲ್ಲಿ ಎಸ್‌ಡಿಪಿಐ ಪ್ರತಿಭಟನೆ : ಉನ್ನತ ಮಟ್ಟದ ತನಿಖೆಗೆ ಆಗ್ರಹ*

ಅಕ್ಟೋಬರ್ 3, 2026

*ಅ.6 ರಂದು ಚೇರಂಬಾಣೆಯಲ್ಲಿ ಸಿಎನ್‌ಸಿ ಮಾನವ ಸರಪಳಿ ಕಾರ್ಯಕ್ರಮ*

ಅಕ್ಟೋಬರ್ 3, 2026

*ವಿರಾಜಪೇಟೆ ತಾಲ್ಲೂಕು ಮಟ್ಟದ ಪ್ರಜಾಸೇವಾ ಆಂದೋಲನ : ಎರಡು-ಮೂರು ತಿಂಗಳ ನಂತರ ಅತ್ಯಂತ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ : ಎಲ್-ನಿನೋ ಪರಿಣಾಮದಿಂದ ಇಡೀ ಪ್ರಪಂಚ ಹವಾಮಾನ ವೈಪರೀತ್ಯ ಎದುರಿಸುತ್ತಿದೆ : ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ*

ಅಕ್ಟೋಬರ್ 3, 2026

*ಕ್ಲೀನ್ ಕೊಡಗು : ಮಾಜಿ ಸೈನಿಕರು, ನಿವೃತ್ತ ನೌಕರರಿಂದ ಸ್ವಚ್ಛತಾ ಅಭಿಯಾನ*

ಅಕ್ಟೋಬರ್ 3, 2026

*ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ*

ಅಕ್ಟೋಬರ್ 3, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.