
ನಾಪೋಕ್ಲು ಫೆ.4 NEWS DESK : ಜಿಲ್ಲೆಯಲ್ಲಿ ಎರಡು ಪ್ರಬಲ ಜನಾಂಗಗಳ ನಡುವೆ ಶಕ್ತಿ ಪ್ರದರ್ಶನ ಹಾಗೂ ಬಲಾಬಲ ಕಾರ್ಯ ನಡೆಲಿದ್ದು, ಇದನ್ನು ತಡೆಗಟ್ಟುವ ಹಾಗೂ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ನಾಪೋಕ್ಲುವಿನಲ್ಲಿ ಪಥ ಸಂಚಲನದ ಮೂಲಕ ಜಾಗೃತಿ ಮೂಡಿಸಲಾಯಿತು. ನಾಪೋಕ್ಲು ಪೊಲೀಸ್ ಮೈದಾನದಿಂದ ಪಟ್ಟಣದ ಮುಖ್ಯ ಬೀದಿಯ ಮೂಲಕ ಹಳೆತಾಲೂಕು ವರೆಗೆ ಸಿಆರ್‍ಪಿಎಫ್ ಕ್ಷಿಪ್ರ ಕಾರ್ಯಾಚರಣೆ ಪಡೆಯ ಕಮಾಂಡೊ ಯೋಧರು ಪಥ ಸಂಚಲನ ನಡೆಸಿ ಸಾರ್ವಜನಿಕರಲ್ಲಿ ಆತ್ಮಸ್ಥೈರ್ಯ ತುಂಬಿದರು. ಈ ಸಂದರ್ಭ ಪೊಲೀಸ್ ಠಾಣೆಯ ಠಾಣಾಧಿಕಾರಿ ಮಂಜುನಾಥ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.









