

ನಾಪೋಕ್ಲು ಫೆ.7 NEWS DESK : ಅಖಿಲ ಕೊಡವ ಸಮಾಜ ನೇತೃತ್ವದಲ್ಲಿ ವಿವಿಧ ಕೊಡವ ಸಮಾಜ ಹಾಗೂ ಸಂಘ ಸಮಸ್ಯೆಗಳು ಸೇರಿದಂತೆ ಕೊಡವ ಭಾಷೆಕ ಸಮುದಾಯಗಳು ಕುಟ್ಟದಿಂದ ಮಡಿಕೇರಿಯ ವರೆಗೆ ಕೈಗೊಂಡ ಕೊಡವಾಮೆ ಬಾಳೋ ಪಾದಯಾತ್ರೆಯಲ್ಲಿ ಕಲಿಯಂಡ ಕುಟುಂಬಸ್ಥರು ಎಲ್ಲಾ ರೀತಿಯಲ್ಲಿ ಸಂಪೂರ್ಣ ಸಹಕಾರದೊಂದಿಗೆ ಭಾಗವಹಿಸುತ್ತಿದ್ದೇವೆ ಎಂದು ಕಲಿಯಂಡ ವಿಜಯ ತಿಳಿಸಿದ್ದಾರೆ. ಕೊಳಕೇರಿ ಗ್ರಾಮದ ಕಲಿಯಂಡ ಐನ್ ಮನೆಯಲ್ಲಿ ಕುಟುಂಬ ಅಭಿವೃದ್ಧಿ ಸಂಘದ ಅಧ್ಯಕ್ಷ ಕಲಿಯಂಡ ವಿಜಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಮಡಿಕೇರಿಯಲ್ಲಿ ಜರುಗುವ ಸಮಾವೇಶದಲ್ಲಿಯೂ ಕುಟುಂಬ ಸದಸ್ಯರೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಲು ಸಹಕರಿಸುವ ನಿಟ್ಟಿನಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಜಯ ಹಾಗೂ ಕುಟುಂಬದ ಪ್ರಮುಖ ಪ್ರಕಾಶ್ ತಿಳಿಸಿದರು. ನಾಪೋಕ್ಲು ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ ಪ್ರತಿಕ್ರಿಯಿಸಿ ಪಾದಯಾತ್ರೆಯ ಪ್ರಯುಕ್ತ ನಮ್ಮ ಶಾಲೆಗೆ ಒಂದು ದಿನದ ರಜೆಯನ್ನು ಘೋಷಿಸಲಾಗಿದೆ ಎಂದರು. ಈ ಸಂದರ್ಭ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ವರದಿ – ದುಗ್ಗಳ ಸದಾನಂದ.









