
ನಾಪೋಕ್ಲು ಫೆ.10 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಂಪಾಜೆ ವಲಯ ಚೆಂಬು ಗ್ರಾಮದ ಫಲಾನುಭವಿ ಕುಟುಂಬಕ್ಕೆ ನಿಧಿಯನ್ನು ಹಸ್ತಾಂತರ ಮಾಡಲಾಯಿತು. ಮಡಿಕೇರಿ ತಾಲ್ಲೂಕು ಚೆಂಬು ಗ್ರಾಮದ ಉಂಬಳೆ ಭಾಸ್ಕರ ಮತ್ತು ಜಯಂತಿ ದಂಪತಿಗಳ ಮನೆಯು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಪರಿಹಾರ ಧನವಾಗಿ ದೊರಕಿದ 25,000 ರೂಪಾಯಿಗಳನ್ನು ಯೋಜನಾಧಿಕಾರಿ ಪುರುಷೋತ್ತ ಹಸ್ತಾಂತರಿಸಿದರು. ಈ ಸಂದರ್ಭ ವಲಯ ಮೇಲ್ವಿಚಾರಕರಾದ ಸಂತೋಷ್, ಸೇವಾ ಪ್ರತಿನಿಧಿ ಚಿದಾನಂದ, ಎಂ.ಚೆಂಬು ಒಕ್ಕೂಟದ ನಿಕಟ ಪೂರ್ವ ಕಾರ್ಯದರ್ಶಿ ವಿಜಯಕುಮಾರ್, ಎಂ.ಟಿ.ರಾಮಮೂರ್ತಿ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.










