
ಮಡಿಕೇರಿ ಫೆ.11 NEWS DESK : ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಹೆಗ್ಗಳ ಶಾಲಾ ಮೈದಾನದಲ್ಲಿ ಪ್ರೋ ಮ್ಯಾಟ್ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಏ.12 ಮತ್ತು 13 ರಂದು ಆಯೋಜಿಸಲಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ವಿರಾಜಪೇಟೆ ತಾಲೂಕು ಬೇಟೋಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಾಮನಗರ ಫ್ರೆಂಡ್ಸ್ ಪ್ರಮುಖರಾದ ಧನುಷ್, ಹೆಗ್ಗಳ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾವಳಿ ಲೀಗ್ ಮಾದರಿಯಲ್ಲಿ ನಡೆಯಲಿದೆ. ಪಂದ್ಯಾವಳಿಯನ್ನು ಆಯೋಜಿಸಲು ಪ್ರಾಯೋಜಕತ್ವವನ್ನು ಆಹ್ವಾನಿಸಲಾಗಿದೆ ಎಂದರು.
ರಾಮನಗರದ ಪ್ರೋ ಮ್ಯಾಟ್ ಕಬಡ್ಡಿ ಪ್ರೀಮಿಯರ್ ಲೀಗ್‌ನ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಪ್ರಭಾಕರ್ (ಪ್ರಭು), ಪ್ರಂದ್ಯಾವಳಿಗೆ ತಂಡಗಳನ್ನು ಆಹ್ವಾನಿಸಲಾಗುತ್ತಿದ್ದು. ಕ್ರೀಡಾಪಟುಗಳು ವಿರಾಜಪೇಟೆ ತಾಲೂಕಿಗೆ ಸೀಮಿತವಾಗಿರಬೇಕು. ಕ್ರೀಡಾ ಪಟುಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಂಸ್ಥೆಯು ನಿಗದಿಗೊಳಿಸಿರುವ ಹಣವನ್ನು ಮುಂಗಡವಾಗಿ ನೀಡಬೇಕು. ತಂಡದ ನೋಂದಾಣಿಗಾಗಿ ಮಾ.20 ಅಂತಿಮ ದಿನವಾಗಿದೆ. ಕ್ರೀಡಾ ಪಟುಗಳನ್ನು ಬಿಡ್ ಮೂಲಕ ತಂಡಕ್ಕೆ ಆಯ್ಕೆಗೊಳಿಸಲಾಗುತ್ತದೆ. ಬಿಡ್ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ 7204374304,6362551276 9731473304 ಸಂಪರ್ಕಿಸಬಹುದಾಗಿದೆ ಎಂದು ಪ್ರಿಮಿಯರ್ ಲೀಗ್ ಬಗ್ಗೆ ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ರಾಮನಗರ ಫ್ರೆಂಡ್ಸ್ ಅಯೋಜಕ ಸಂಸ್ಥೆಯ ಪದಾಧಿಕಾರಿಗಳಾದ ವಿಜು ಪಿ.ಎಂ., ಸಂತೋಷ್, ಲವೀಶ್ ಜಿಷ್ಣು ಕುಮಾರ್, ಲತೀಶ್, ಜಿನೇಶ್, ಸಂತೋಷ್ ಕೆ. ಉಪಸ್ಥಿತರಿದ್ದರು.









