
ವಿರಾಜಪೇಟೆ ಫೆ.11 NEWS DESK : ಕೆದಮುಳ್ಳೂರು ತೆರ್ಮೆಮೊಟ್ಟೆ ಶ್ರೀ ಆಧಿಶಕ್ತಿ ಮತ್ತು ಧರ್ಮದೈವ ಹಾಗೂ ಪಾಷಣ ಮೂರ್ತಿ ಪರಿವಾರ ದೈವಗಳ ಪುನರ್ ಪ್ರತಿಷ್ಠಾಪನೆ ಮತ್ತು ಧರ್ಮ ದೈವಗಳ ನೇಮೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಕಾವಾಡಿಯ ಗೋ ಶಾಲೆಯ ತಂತ್ರಿಗಳಾದ ರಾಮಚಂದ್ರ ಭಟ್ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ದೈವದ ಭಂಡಾರ ಇಳಿಯುವುದು, ಕಲ್ಲಾಲ್ದ ಗುಳಿಗ, ಪೊಸ ಭೂತ, ದೈವ ವರ್ನರ, ಪಂಜುರ್ಲಿ, ಕುಪ್ಪೆ, ಕಲ್ಲುರ್ಟಿ ಮತ್ತು ಕಲ್ಕೂಡ, ಗೂಡು ಪಂಜುರ್ಲಿ, ಅಣ್ಣಪ್ಪ ಪಂಜುರ್ಲಿ ಮಂತ್ರ ದೇವತೆ, ಮಂತ್ರವಾದಿ ಗುಳಿಗ, ಕೊರಗಜ್ಜ ದೈವದ ನೇಮೋತ್ಸವ ನಡೆಯಿತು. ಪ್ರತಿದಿನ ಆಗಮಿಸಿದ ಭಕ್ತಾದಿಗಳಿಗೆ ದೇವಾಲಯದ ವತಿಯಿಂದ ಅನ್ನ ಸಂತರ್ಪಣೆ ನೆರವೇರಿತು. ಈ ಸಂದರ್ಭ ದೈವ ದೇವರ ಆರಾಧಕರಾದ ಬಿ.ಜೆ.ಹರೀಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.









