Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೆದಮುಳ್ಳುರು–ತೋರ–ಪಾಲಂಗಾಲ ರಸ್ತೆ ಅವ್ಯವಸ್ಥೆ : ಗ್ರಾಮಸ್ಥರ ಅಸಮಾಧಾನ* 
  • *ಭತ್ತದ ಬೆಳೆಗೆ ಬೆಂಕಿ ರೋಗ : ತುರ್ತು ನಿರ್ವಹಣೆಗೆ ಕೃಷಿ ಇಲಾಖೆ ಮನವಿ*
  • *ಕೊಡ್ಲಿಪೇಟೆಯಲ್ಲಿ ಕರವೇ ನೂತನ ಸದಸ್ಯರ ಸೇರ್ಪಡೆ : ಪದಗ್ರಹಣ*
  • *ಆರ್ಥಿಕ ವಂಚನೆ ಮತ್ತು ಸೈಬರ್ ಬೆದರಿಕೆಗಳಿಂದ ಎಚ್ಚರ ವಹಿಸಿ: ಠಾಣಾಧಿಕಾರಿ ಕಾಳೇಗೌಡ; ತಿತಿಮತಿಯಲ್ಲಿ ಆರ್ಥಿಕ ಜಾಗೃತಿ ಸಾಕ್ಷರತಾ ಸಂವಾದ ಕಾರ್ಯಕ್ರಮ*
  • *ಕೊಡಗಿನ ಶಮಾ ಅಪ್ಪಣ್ಣ ‘ಮಿಸೆಸ್ ಇಂಡಿಯಾ ವುಮೆನ್ ಆಫ್ ಸಬ್‌ಸ್ಟೆನ್ಸ್’ ಜಯಭೇರಿ*
  • *ವಿರಾಜಪೇಟೆಯಲ್ಲಿ ಅಕ್ಷರ ದಾಸೋಹ ನೌಕರರ ತಾಲೂಕು ಸಮ್ಮೇಳನ ಯಶಸ್ವಿ; ಮಹಿಳಾ ಕಾರ್ಮಿಕರ ಹಕ್ಕುಗಳಿಗಾಗಿ ಧ್ವನಿ, ನೂತನ ಪದಾಧಿಕಾರಿಗಳ ಆಯ್ಕೆ*
  • *ಸ್ವಉದ್ಯೋಗ ಮಾಹಿತಿ ಕಾರ್ಯಕ್ರಮ: ಗ್ರಾಮೀಣ ಭಾಗದ ಜನರಿಗೆ ಉದ್ಯೋಗದ ಹಲವು ಅವಕಾಶಗಳ ಪರಿಚಯ*
  • *ಕ್ರಿಶ್ಚಿಯನ್ ಮುಖಂಡರಿಂದ ಸಚಿವ ಯು.ಟಿ. ಖಾದರ್ ಭೇಟಿ*
  • *ಕೊಡಗು ಜೆಡಿಎಸ್ ಸಂಘಟನೆ ಬಲವರ್ಧನೆಗೆ ಒತ್ತು: ಕುಮಾರಸ್ವಾಮಿಗೆ ಮನವಿ*
  • *ಕಸ್ತೂರಿ ರಂಗನ್ ವರದಿ ತಿರಸ್ಕಾರಕ್ಕೆ ಶಾಸಕ ಡಾ. ಮಂತರ್ ಗೌಡ ಸ್ವಾಗತ: ರೈತರ ಪರ ಇರುವ ಭರವಸೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಡಿಕೇರಿಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ : ಜಾಗೃತಿ ಜಾಥಾ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಡಿಕೇರಿಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ : ಜಾಗೃತಿ ಜಾಥಾ*

ಫೆಬ್ರವರಿ 12, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಫೆ.12 : ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ–2025 ರ ಅಂಗವಾಗಿ ಬುಧವಾರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ ಮಡಿಕೇರಿ ನಗರದ ಗಾಂಧಿ ಮೈದಾನದಿಂದ ಮುಖ್ಯ ರಸ್ತೆಯಲ್ಲಿ ಜಾಥಾ ಕಾರ್ಯಕ್ರಮ ನಡೆಯಿತು. ಜಿಲ್ಲಾಧಿಕಾರಿ ವೆಂಕಟ್ ರಾಜಾವರು ಜಾಥಾಗೆ ಚಾಲನೆ ನೀಡಿದರು. ಜಾಥವು ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು, ಚಾಲನಾ ತರಬೇತಿ ಶಾಲೆಗಳು, ಆಟೋರಿಕ್ಷಾ/ ಟ್ಯಾಕ್ಸಿ/ ಚಾಲಕ ಮಾಲೀಕರ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜರುಗಿತು. ರಾಜು ಕಲಾವಿದರ ತಂಡದ ವತಿಯಿಂದ ರಸ್ತೆ ನಾಟಕಗಳ ಮುಖೇನ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು. ಪ್ರಮುಖ ಪಟ್ಟಣಗಳಲ್ಲಿ ಕರಪತ್ರ ಹಂಚಿಕೆ, ಬ್ಯಾನರ್ ಮತ್ತು ಫ್ಲೆಕ್ಸ್ ಅಳವಡಿಕೆ ಕಾರ್ಯಕ್ರಮಗಳು, ಶಾಲಾ-ಕಾಲೇಜುಗಳಲ್ಲಿ ಚಿತ್ರಕಲೆ, ರಸಪ್ರಶ್ನೆ ಸ್ಪರ್ಧೆಗಳನ್ನು ಜರುಗಿಸಿದ್ದು, ಮಕ್ಕಳಲ್ಲಿ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಯಿತು. ಜಾಥಗೆ ಚಾಲನೆ ನೀಡಿದ ಮಾತನಾಡಿದ ಜಿಲ್ಲಾಧಿಕಾರಿ ಅವರು ಸಾರ್ವಜನಿಕರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ ರಸ್ತೆ ಅಪಘಾತಗಳನ್ನು ತಡೆಯುವುದರಲ್ಲಿ ಯಶಸ್ವಿಯಾಗುವಂತೆ ಹಾಗೂ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವಂತೆ, ಹೆಲ್ಮೆಟ್, ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸುವಂತೆ ತಿಳಿಸಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ವಿ.ನಾಗರಾಜಾಚಾರ್, ಮೋಟಾರು ವಾಹನ ನಿರೀಕ್ಷಕರಾದ ಶಿವಕುಮಾರ್, ಪ್ರದೀಪ್ ಕುಮಾರ್, ಅಧೀಕ್ಷಕರುಗಳಾದ ಕೆ.ಎ.ಸಲೀಮಾ, ಎನ್.ಮೋಹನ ಕುಮಾರ್, ಡಿ.ಕೆ.ರೀಟಾ ಇತರರು ಇದ್ದರು.
ಇನ್ನಷ್ಟು ಮಾಹಿತಿ ::  ರಸ್ತೆಯಲ್ಲಿರುವಾಗ ತಾವು ತಮ್ಮ ಜೀವ ಮತ್ತು ಕುಟುಂಬ ಮೊದಲು ಎಂಬುದನ್ನು ಅರಿತು ವಾಹನ ಚಲಾಯಿಸಬೇಕು. ಸಂಚಾರಿ ನಿಯಮವನ್ನು ಚಾಚು ತಪ್ಪದೆ ಪಾಲಿಸಬೇಕು. ಸಾರ್ವಜನಿಕ ರಸ್ತೆ ಹಾಗೂ ಪ್ರದೇಶಗಳಲ್ಲಿ ಜಾನುವಾರುಗಳನ್ನು ಅಡ್ದಾಡಲು ಬಿಡಬಾರದು. ಅವೈಜ್ಞಾನಿಕವಾಗಿ ಸ್ವಯಂ ಪ್ರೇರಿತವಾಗಿ ರಸ್ತೆಗಳಲ್ಲಿ ಹಂಪ್ಸ್‍ಗಳನ್ನು ನಿರ್ಮಿಸಬಾರದು. ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಧವಸ ಧಾನ್ಯದ ಸುಗ್ಗಿ ಕಣಜವನ್ನಾಗಿಸಬಾರದು. ಸರಕು ಸಾಗಾಣಿಕಾ ವಾಹನಗಳಲ್ಲಿ ಅಧಿಕ ಭಾರದ ಸರಕು ಸಾಗಿಸಬಾರದು. ಸುಸ್ಥಿತಿಯಲ್ಲಿಲ್ಲದ ವಾಹನವನ್ನು ಸಾರ್ವಜನಿಕ ಪ್ರದೇಶದಲ್ಲಿ ಉಪಯೋಗಿಸಬಾರದು. ಪ್ರಯಾಣಿಕ ವಾಹನಗಳಲ್ಲಿ ನಿಗದಿಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸಬಾರದು. ಪುಟ್‍ಬೋರ್ಡ್ ಮೇಲೆ ನಿಲ್ಲಲು ಅವಕಾಶ ನೀಡಬಾರದು. ಪಾದಚಾರಿಗಳು ಪಾದಚಾರಿ ರಸ್ತೆಯನ್ನೇ ಬಳಸಿ, ರಸ್ತೆಯ ಮಧ್ಯದಲ್ಲಿ ಗುಂಪು ಗುಂಪಾಗಿ ಪಾದಾಚಾರಿಗಳು ಸಂಚರಿಸಬೇಡಿ. ರಾತ್ರಿ ವೇಳೆ ವಾಹನದ ಚಾಲನೆಯಲ್ಲಿ ವಾಹನದ ಹೆಡ್‍ಲೈಟ್ ಪ್ರಖರತೆಯನ್ನು ಎದುರಿಗೆ ವಾಹನ ಬರುವಾಗ ಕುಗ್ಗಿಸಿ, ಹೆಲ್ಮೆಟ್ ಮತ್ತು ಸೇಪ್ಟಿ ಬೆಲ್ಟ್‍ಗಳನ್ನು ಧರಿಸಿ ವಾಹನ ಚಲಾಯಿಸಿ, ಅಜಾಗರುಕತೆಯಿಂದ ಅತೀ ವೇಗದಲ್ಲಿ ವಾಹನ ಓಡಿಸಬಾರದು. ಮೋಜಿಗಾಗಿ ಇತರರನ್ನು ರಂಜಿಸಲು ವಾಹನ ಓಡಿಸಬಾರದು. ಸಂಗೀತ ಕೇಳುತ್ತಾ ವೀಡಿಯೋ ದೃಶ್ಯಾವಳಿಗಳನ್ನು ನೋಡುತ್ತಾ ವಾಹನ ಚಲಾಯಿಸಬಾರದು. ವಾಹನ ಚಲಾಯಿಸುವಾಗ ಮೊಬೈಲ್ ಬಳಸಬಾರದು. ಮಧ್ಯದ ಅಮಲಿನಲ್ಲಿ ವಾಹನ ಓಡಿಸಬಾರದು. ಹಿಂದಿನ ವಾಹನ ಓವರ್‍ಟೇಕ್ ಮಾಡುತ್ತಿರುವಾಗ ವಾಹನದ ವೇಗ ಹೆಚ್ಚಿಸಬೇಡಿ. ಲೈಸನ್ಸ್ ಹೊಂದಿಕೊಳ್ಳದೆ ವಾಹನ ಚಲಾಯಿಸುವ ಪ್ರಯತ್ನ ಮಾಡಬೇಡಿ, ನಿದ್ರೆ ಗುಂಗಿನಲ್ಲಿರುವಾಗ ವಾಹನ ಚಲಾಯಿಸುವ ಪ್ರಯತ್ನ ಮಾಡಬೇಡಿ, ಚಾಲಕರಿಗೆ ಅಗತ್ಯ ವಿಶ್ರಾಂತಿ ನೀಡದೆ ವಾಹನ ಓಡಿಸಲು ಅವಕಾಶ ನೀಡಬಾರದು. ಸೈಕಲ್ ಸವಾರರು ಅವರಿಗೆ ಮೀಸಲಾದ ರಸ್ತೆಯಲ್ಲಿ ಸೈಕಲ್ ಓಡಿಸಬೇಕು. ದೊಡ್ಡ ವಾಹನ ಚಾಲಕರು ಸಣ್ಣ ವಾಹನ ಚಾಲಕರಿಗೆ ಮೊದಲ ಆದ್ಯತೆ ನೀಡಿ, ಶಾಲೆಗಳ ಸಮೀಪ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು.

Follow us Follow us
Share. WhatsApp Facebook Twitter Email Telegram Copy Link

Related Posts

*ಕೆದಮುಳ್ಳುರು–ತೋರ–ಪಾಲಂಗಾಲ ರಸ್ತೆ ಅವ್ಯವಸ್ಥೆ : ಗ್ರಾಮಸ್ಥರ ಅಸಮಾಧಾನ* 

ಸೆಪ್ಟೆಂಬರ್ 30, 2026

*ಭತ್ತದ ಬೆಳೆಗೆ ಬೆಂಕಿ ರೋಗ : ತುರ್ತು ನಿರ್ವಹಣೆಗೆ ಕೃಷಿ ಇಲಾಖೆ ಮನವಿ*

ಸೆಪ್ಟೆಂಬರ್ 30, 2026

*ಕೊಡ್ಲಿಪೇಟೆಯಲ್ಲಿ ಕರವೇ ನೂತನ ಸದಸ್ಯರ ಸೇರ್ಪಡೆ : ಪದಗ್ರಹಣ*

ಸೆಪ್ಟೆಂಬರ್ 30, 2026

*ಭತ್ತದ ಬೆಳೆಗೆ ಬೆಂಕಿ ರೋಗ : ತುರ್ತು ನಿರ್ವಹಣೆಗೆ ಕೃಷಿ ಇಲಾಖೆ ಮನವಿ*

ಸೆಪ್ಟೆಂಬರ್ 30, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಸೆ.30 NEWS DESK : ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತದ ಬೆಳೆಗೆ ಅಲ್ಲಲ್ಲಿ ಬೆಂಕಿ ರೋಗದ ಬಾಧೆ ಕಂಡುಬಂದಿದ್ದು,…

*ಕೊಡ್ಲಿಪೇಟೆಯಲ್ಲಿ ಕರವೇ ನೂತನ ಸದಸ್ಯರ ಸೇರ್ಪಡೆ : ಪದಗ್ರಹಣ*

ಸೆಪ್ಟೆಂಬರ್ 30, 2026

*ಆರ್ಥಿಕ ವಂಚನೆ ಮತ್ತು ಸೈಬರ್ ಬೆದರಿಕೆಗಳಿಂದ ಎಚ್ಚರ ವಹಿಸಿ: ಠಾಣಾಧಿಕಾರಿ ಕಾಳೇಗೌಡ; ತಿತಿಮತಿಯಲ್ಲಿ ಆರ್ಥಿಕ ಜಾಗೃತಿ ಸಾಕ್ಷರತಾ ಸಂವಾದ ಕಾರ್ಯಕ್ರಮ*

ಸೆಪ್ಟೆಂಬರ್ 30, 2026

*ಕೊಡಗಿನ ಶಮಾ ಅಪ್ಪಣ್ಣ ‘ಮಿಸೆಸ್ ಇಂಡಿಯಾ ವುಮೆನ್ ಆಫ್ ಸಬ್‌ಸ್ಟೆನ್ಸ್’ ಜಯಭೇರಿ*

ಸೆಪ್ಟೆಂಬರ್ 30, 2026

*ವಿರಾಜಪೇಟೆಯಲ್ಲಿ ಅಕ್ಷರ ದಾಸೋಹ ನೌಕರರ ತಾಲೂಕು ಸಮ್ಮೇಳನ ಯಶಸ್ವಿ; ಮಹಿಳಾ ಕಾರ್ಮಿಕರ ಹಕ್ಕುಗಳಿಗಾಗಿ ಧ್ವನಿ, ನೂತನ ಪದಾಧಿಕಾರಿಗಳ ಆಯ್ಕೆ*

ಸೆಪ್ಟೆಂಬರ್ 30, 2026

*ಸ್ವಉದ್ಯೋಗ ಮಾಹಿತಿ ಕಾರ್ಯಕ್ರಮ: ಗ್ರಾಮೀಣ ಭಾಗದ ಜನರಿಗೆ ಉದ್ಯೋಗದ ಹಲವು ಅವಕಾಶಗಳ ಪರಿಚಯ*

ಸೆಪ್ಟೆಂಬರ್ 30, 2026

*ಕ್ರಿಶ್ಚಿಯನ್ ಮುಖಂಡರಿಂದ ಸಚಿವ ಯು.ಟಿ. ಖಾದರ್ ಭೇಟಿ*

ಸೆಪ್ಟೆಂಬರ್ 30, 2026

*ಕೊಡಗು ಜೆಡಿಎಸ್ ಸಂಘಟನೆ ಬಲವರ್ಧನೆಗೆ ಒತ್ತು: ಕುಮಾರಸ್ವಾಮಿಗೆ ಮನವಿ*

ಸೆಪ್ಟೆಂಬರ್ 30, 2026

*ಕಸ್ತೂರಿ ರಂಗನ್ ವರದಿ ತಿರಸ್ಕಾರಕ್ಕೆ ಶಾಸಕ ಡಾ. ಮಂತರ್ ಗೌಡ ಸ್ವಾಗತ: ರೈತರ ಪರ ಇರುವ ಭರವಸೆ*

ಸೆಪ್ಟೆಂಬರ್ 30, 2026

*ಗ್ರಾಮೀಣಾಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ*

ಸೆಪ್ಟೆಂಬರ್ 30, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.