Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಶಾಸಕ ಎ.ಎಸ್.ಪೊನ್ನಣ್ಣ ಅವರ ಜನ್ಮದಿನಾಚರಣೆ : ತಲಕಾವೇರಿಯಲ್ಲಿ ವಿಶೇಷ ಪೂಜೆ : ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ* 
  • *ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5792 ಪ್ರಕರಣಗಳು ಇತ್ಯರ್ಥ*
  • *ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಡೆಂಗ್ಯೂ ಕುರಿತು ಮಾಹಿತಿ ಕಾರ್ಯಾಗಾರ*
  • *ಅಂತರ ಜಿಲ್ಲಾ ಫುಟ್‌ಬಾಲ್ ಪಂದ್ಯಾವಳಿ : ಕೊಡಗು ತಂಡಕ್ಕೆ ಸತತ ಎರಡು ಭರ್ಜರಿ ಜಯ*
  • *ಶಕ್ತಿ ವೃದ್ಧಾಶ್ರಮದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಅವರ ಹುಟ್ಟುಹಬ್ಬ ಆಚರಣೆ : ಕಂಬಳಿ ವಿತರಣೆ*
  • ಜು.11 ಮತ್ತು 12ರಂದು ನಾಪೋಕ್ಲುವಿನಲ್ಲಿ “ಸಾಹಿತ್ಯೋತ್ಸವ-2026”
  • *ಜಲಾಶಯದ ನೀರನ್ನು ಅವಲಂಬಿಸಿ ಬೆಳೆ ಬೆಳೆಯದಂತೆ ರೈತರಿಗೆ ಕೊಡಗು ಜಿಲ್ಲಾಧಿಕಾರಿ ಮನವಿ*
  • *ಬಾಡಗರಕೇರಿ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಸಂಪನ್ನ*
  • *ಚೆಟ್ಟಿಮಾನಿ, ಕುಂದಚೇರಿ, ಕಾನಕಂಡಿ ರಸ್ತೆ ಉದ್ಘಾಟನೆ : ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಬದ್ಧ : ಶಾಸಕ ಎ.ಎಸ್.ಪೊನ್ನಣ್ಣ ಭರವಸೆ*
  • *ಬಿ.ಆರ್.ಭವಿಷ್‍ಗೆ ಸನ್ಮಾನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*‘ಸ್ಮಶಾನ’ ಜಾಗದ ಕೊರತೆ : ಮೃತರ ಗೌರವಯುತ ಸಂಸ್ಕಾರ ಅಸಾಧ್ಯ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*‘ಸ್ಮಶಾನ’ ಜಾಗದ ಕೊರತೆ : ಮೃತರ ಗೌರವಯುತ ಸಂಸ್ಕಾರ ಅಸಾಧ್ಯ*

ಫೆಬ್ರವರಿ 12, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಫೆ.12 NEWS DESK : ಕಾವೇರಿ ನದಿ ಪಾತ್ರದ ನೆಲ್ಯಹುದಿಕೇರಿಯಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ಬಡವರು, ಕೂಲಿ ಕಾರ್ಮಿಕರಿಗೆ ‘ಸ್ಮಶಾನ’ ಜಾಗವಿಲ್ಲದೆ, ಮೃತರ ಗೌರವಯುತ ಸಂಸ್ಕಾರ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಮಶಾನ ಹೋರಾಟ ಸಮಿತಿಯ ಪ್ರಮುಖರಾದ ಪಿ.ಆರ್.ಭರತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಹಿಂದೂ ಧರ್ಮಕ್ಕೆ ಸೇರಿದ ಮಲೆಯಾಳಿ, ತಮಿಳು ಬಾಂಧವರು, ವಿವಿಧ ಜಾತಿ ಜನಾಂಗದ ಬಡ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಸುಮಾರು ಹದಿನೈದು ಸಾವಿರ ಮಂದಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇವರ ಕುಟುಂಬದಲ್ಲಿ ಸಂಭವಿಸುವ ಯಾವುದೇ ‘ಸಾವು’ ತೀವ್ರ ಆತಂಕವನ್ನು ಹುಟ್ಟು ಹಾಕುತ್ತದೆ. ಕಾರಣ, ಮೃತ ವ್ಯಕ್ತಿಗೆ ಗೌರವಯುತವಾಗಿ ಸಂಸ್ಕಾರಗಳನ್ನು ಮಾಡುವ ವ್ಯವಸ್ಥೆ ಗ್ರಾಮದಲ್ಲಿ ಇಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಕಾವೇರಿ ನದಿ ಪಾತ್ರದಲ್ಲಿ ಸುಮಾರು ಅರ್ಧ ಏಕರೆ ಜಾಗ ಸ್ಮಶಾನವಾಗಿ ಪ್ರಸ್ತುತ ಬಳಕೆಯಾಗುತ್ತಿದೆ. ವರ್ಷಂಪ್ರತಿ ಮಳೆಗಾಲದಲ್ಲಿ ಸ್ಮಶಾನದ ಜಾಗದ ಮಣ್ಣು ಕೊಚ್ಚಿ ಹೋಗುವುದರೊಂದಿಗೆ, ಅಲ್ಲಿ ದಫನ ಮಾಡಿದವರ ಅಸ್ಥಿಗಳು ನದಿಯಲ್ಲಿ ಕೊಚ್ಚಿ ಹೋಗುವ ಭೀಕರ ಸ್ಥಿತಿ ಇದೆ. ಲಭ್ಯ ಸಣ್ಣ ಜಾಗದಲ್ಲಿ ಮೃತ ವ್ಯಕ್ತಿಯನ್ನು ದಫನ ಮಾಡುವ ಹಂತದಲ್ಲಿ ಹಲವಾರು ಬಾರಿ, ಅದಾಗಲೆ ದಫನ ಮಾಡಲ್ಪಟ್ಟವರ ಅಸ್ಥಿಗಳು ಸಿಗುತ್ತವೆ ಮತ್ತು ಅದರ ಮೇಲೆಯೇ ಮತ್ತೆ ಸಂಸ್ಕಾರಾದಿಗಳನ್ನು ಮಾಡುವ ಶೋಚನೀಯ ಪರಿಸ್ಥಿತಿ ಇರುವುದಾಗಿ ಹೇಳಿದರು. ದಾಖಲೆಗಳನ್ನು ಈ ಹಿಂದೆ ಪರಿಶೀಲಿಸಿದಾಗ ಗ್ರಾಮ ವ್ಯಾಪ್ತಿಯಲ್ಲಿ ಸ್ಮಶಾನಕ್ಕೆಂದು ಕಾಯ್ದಿರಿಸಿದ 1.08 ಏಕರೆ ಜಾಗ ಕಂಡು ಬಂದಿತ್ತು. ಆದರೆ, ಈ ಜಾಗವನ್ನು ಸ್ಮಶಾನವಾಗಿ ಪರಿವರ್ತಿಸಬಾರದು ಎಂದು ಪಂಚಾಯ್ತಿಯಾದಿಯಾಗಿ ಗ್ರಾಮದ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಬದಲಿ ಜಾಗವನ್ನು ಗುರುತಿಸಿ ಸ್ಮಶಾನಕ್ಕೆ ಒದಗಿಸಲು ನಾವು 3 ತಿಂಗಳ ಗಡುವನ್ನು ನೀಡಿದ್ದೆವು. ಅದರಂತೆ ಕಂದಾಯ ಇಲಾಖೆ ಬೆಟ್ಟದಕಾಡು ಎಂಬಲ್ಲಿ 1 ಏಕರೆ ಜಾಗವನ್ನು ಗುರುತಿಸಿದ್ದು, ಈ ಜಾಗ ಕೂಡ ಒತ್ತುವರಿಯಾಗಿದೆ ಎಂದು ಆರೋಪಿಸಿದರು. ನೆಲ್ಯಹುದಿಕೇರಿ ಗ್ರಾಮಸ್ಥರಿಗೆ ಈಗಾಗಲೆ ಸ್ಮಶಾನವೆಂದು ಗುರುತಿಸಲ್ಪಟ್ಟ ಜಾಗವನ್ನು ನೀಡಬೇಕು. ಇಲ್ಲವೆ, ಇದಕ್ಕೆ ಬದಲಿಯಾಗಿ ಕಂದಾಯ ಇಲಾಖೆ ಸೂಚಿಸಿರುವ ಜಾಗಕ್ಕೆ ಆರ್‍ಟಿಸಿ ಮಾಡಿ ನೀಡಬೇಕೆಂದು ಆಗ್ರಹಿಸಿದ ಭರತ್, ತಮ್ಮ ಬೇಡಿಕೆ ಈಡೇರಿಕೆಗೆ ಮಾರ್ಚ್ ಅಂತ್ಯದವರೆಗೆ ಕಾಲಾವಕಾಶ ನೀಡಲಾಗುವುದು. ಇದಕ್ಕೆ ಸೂಕ್ತ ಸ್ಪಂದನ ದೊರಕದಿದ್ದಲ್ಲಿ ಮಾರ್ಚ್ ಅಂತ್ಯಕ್ಕೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸ್ಮಶಾನ ಹೋರಾಟ ಸಮಿತಿಯ ಪ್ರಮುಖರಾದ ಪಿ.ಜಿ.ಸುರೇಶ್, ಪಿ.ಬಿ.ಅಂತಪ್ಪ, ಟಿ.ಟಿ.ಉದಯಕುಮಾರ್ ಹಾಗೂ ಎನ್.ನಾರಾಯಣ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಶಾಸಕ ಎ.ಎಸ್.ಪೊನ್ನಣ್ಣ ಅವರ ಜನ್ಮದಿನಾಚರಣೆ : ತಲಕಾವೇರಿಯಲ್ಲಿ ವಿಶೇಷ ಪೂಜೆ : ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ* 

ಜುಲೈ 9, 2026

*ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5792 ಪ್ರಕರಣಗಳು ಇತ್ಯರ್ಥ*

ಜುಲೈ 9, 2026

*ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಡೆಂಗ್ಯೂ ಕುರಿತು ಮಾಹಿತಿ ಕಾರ್ಯಾಗಾರ*

ಜುಲೈ 9, 2026

*ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5792 ಪ್ರಕರಣಗಳು ಇತ್ಯರ್ಥ*

ಜುಲೈ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

ಮಡಿಕೇರಿ ಜು.9 NEWS DESK : ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 2002ರ ನ.4…

*ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಡೆಂಗ್ಯೂ ಕುರಿತು ಮಾಹಿತಿ ಕಾರ್ಯಾಗಾರ*

ಜುಲೈ 9, 2026

*ಅಂತರ ಜಿಲ್ಲಾ ಫುಟ್‌ಬಾಲ್ ಪಂದ್ಯಾವಳಿ : ಕೊಡಗು ತಂಡಕ್ಕೆ ಸತತ ಎರಡು ಭರ್ಜರಿ ಜಯ*

ಜುಲೈ 9, 2026

*ಶಕ್ತಿ ವೃದ್ಧಾಶ್ರಮದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಅವರ ಹುಟ್ಟುಹಬ್ಬ ಆಚರಣೆ : ಕಂಬಳಿ ವಿತರಣೆ*

ಜುಲೈ 9, 2026

ಜು.11 ಮತ್ತು 12ರಂದು ನಾಪೋಕ್ಲುವಿನಲ್ಲಿ “ಸಾಹಿತ್ಯೋತ್ಸವ-2026”

ಜುಲೈ 9, 2026

*ಜಲಾಶಯದ ನೀರನ್ನು ಅವಲಂಬಿಸಿ ಬೆಳೆ ಬೆಳೆಯದಂತೆ ರೈತರಿಗೆ ಕೊಡಗು ಜಿಲ್ಲಾಧಿಕಾರಿ ಮನವಿ*

ಜುಲೈ 9, 2026

*ಬಾಡಗರಕೇರಿ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಸಂಪನ್ನ*

ಜುಲೈ 9, 2026

*ಚೆಟ್ಟಿಮಾನಿ, ಕುಂದಚೇರಿ, ಕಾನಕಂಡಿ ರಸ್ತೆ ಉದ್ಘಾಟನೆ : ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಬದ್ಧ : ಶಾಸಕ ಎ.ಎಸ್.ಪೊನ್ನಣ್ಣ ಭರವಸೆ*

ಜುಲೈ 9, 2026

*ಬಿ.ಆರ್.ಭವಿಷ್‍ಗೆ ಸನ್ಮಾನ*

ಜುಲೈ 8, 2026

*ವಿದ್ಯಾರ್ಥಿಗಳಿಗೆ ಪರಿಕರಗಳ ವಿತರಣೆ : ವಿದ್ಯಾರ್ಥಿಗಳು ಶಿಕ್ಷಣಕ್ಕೆ ಒತ್ತು ನೀಡಿ : ಪಿ.ಯು.ರಾಬಿನ್ ದೇವಯ್ಯ*

ಜುಲೈ 8, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.