
ನಾಪೋಕ್ಲು ಫೆ.17 NEWS DESK : ಕರಾಟೆ ವಿಭಾಗದ ಗುಂಪಿನಲ್ಲಿ 30 ನಿಮಿಷಗಳ ಕಾಲ ತಡೆ ರಹಿತ ಕಟಾ ಮಾಡಿ ಗಿನ್ನಿಸ್ ದಾಖಲೆ ಮಾಡಿರುವ ಕೊಡಗಿನ ಶಝಾ ಫಾತಿಮಾಳನ್ನು ಗ್ರಾಮಸ್ಥರು ಸನ್ಮಾನಿಸಿದರು. ಮಡಿಕೇರಿ ತಾಲೂಕಿನ ಬೇತು ಗ್ರಾಮದಲ್ಲಿ ನಾಪೋಕ್ಲು ಸ್ನೇಹಿತರ ಬಳಗದ ವತಿಯಿಂದ ಆಯೋಜಿಸಲಾದ ಭಾವಪೂರ್ಣ ಕಾರ್ಯಕ್ರಮದಲ್ಲಿ ಜಮಾಯತ್ ಅಧ್ಯಕ್ಷ ಎಂ.ಹೆಚ್ ಅಬ್ದುಲ್ ರೆಹಮಾನ್ ಸನ್ಮಾನಿಸಿ ಗೌರವಿಸಿದರು. ಬೆಂಗಳೂರಿನ ಬರಕಾ ಇಂಟನ್ರ್ಯಾಷನಲ್ ಸ್ಕೂಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಏಳನೇ ತರಗತಿ ವಿದ್ಯಾರ್ಥಿನಿ ಶಝಾ ಫಾತಿಮಾ ತಮಿಳುನಾಡಿನ ಚೆನ್ನೈನಲ್ಲಿ ಇತ್ತೀಚೆಗೆ ಜರುಗಿದ ಕರಾಟೆ ವಿಭಾಗದ ಗುಂಪಿನಲ್ಲಿ 30 ನಿಮಿಷಗಳ ಕಾಲ ತಡೆರಹಿತ ಕಟಾ ಮಾಡಿ ಗಿನ್ನಿಸ್ ದಾಖಲೆ ಬರೆದಿದ್ದಾರೆ. ಜೊತೆಗೆ ಕುಮಿಟೆ ವೈಯುಕ್ತಿಕ ವಿಭಾಗದಲ್ಲೂ ಚಿನ್ನದ ಪದಕಕ್ಕೆ ಪಡೆದುಕೊಂಡಿದ್ದಾಳೆ. ಶಝಾ ಫಾತಿಮಾ ನಾಪೋಕ್ಲುವಿನ ಬೇತು ಗ್ರಾಮದ ನಿವಾಸಿ ಕಾಸಿಂ (ಬಹದ್ದೂರ್) ಮತ್ತು ಸೌಸ್ರೀನ್ ದಂಪತಿಯ ಪುತ್ರಿ. ಇವಳು ಝಕಿಯಾ ಯಾಸ್ಮಿನ್ ಮತ್ತು ನದೀಮ್ ರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ. ಈ ಸಂದರ್ಭ ಕಾರ್ಯಕ್ರಮದಲ್ಲಿ ಎಂ.ಎಸ್.ಸಲೀಂ, ಎಂ.ಎಂ.ಅಬೂಬಕರ್. ಪಿ.ಎಂ.ಅಬ್ದುಲ್ ಅಜೀಜ್, ಪಿ.ಎಸ್.ಆಬಿದ್, ಎಂ.ಐ.ಕುರೈಸಿ. ಪಿ.ಎಂ.ರಶೀದ್, ಸಿ.ಹೆಚ್.ಅಹಮದ್, ಪಿ.ಎಮ್.ಅರಫತ್, ಪಿ.ಎಂ.ಯೂನಸ್ ಮತ್ತಿತರರು ಉಪಸ್ಥಿತರಿದ್ದರು.
ವರದ : ದುಗ್ಗಳ ಸದಾನಂದ.









