
ಮಡಿಕೇರಿ ಫೆ.21 NEWS DESK : ಇತಿಹಾಸ ಪ್ರಸಿದ್ಧದ ಬೊಟ್ಟಿಯತ್ ನಾಡ್ ಶ್ರೀ ಈಶ್ವರ ದೇವಾಲಯದ ವಾರ್ಷಿಕೋತ್ಸವವು ಫೆ.22 ಹಾಗೂ 23 ರಂದು ನಡೆಯಲಿದೆ ಎಂದು ತಕ್ಕಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ತಿಳಿಸಿದ್ದಾರೆ. ಫೆ.15ರಂದು ಕೊಡಿಮರ ನಿಲ್ಲಿಸುವ ಮೂಲಕ ಆರಂಭಗೊಂಡಿದ್ದು, ಫೆ.22 ರಂದು ಸಂಜೆ 4.30 ಗಂಟೆಗೆ ಎತ್ತು ಪೋರಾಟ್ ಆಗಮಿಸುವ ಮೂಲಕ ನೆರ್ಪು ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ನಂತರ ವಿವಿಧ ಪೂಜಾವಿಧಿ ವಿಧಾನಗಳು ನಡೆಯಲಿವೆ. 23ರಂದು ಬೆಳಿಗ್ಗೆಯಿಂದಲೆ ವಿವಿಧ ಪೂಜಾ ವಿಧಿವಿಧಾನಗಳು ನಡೆಯಲಿದ್ದು, ರಾತ್ರಿ 7 ಗಂಟೆಗೆ ದೇವರ ಅವಭೃತ ಸ್ನಾನ (ದೇವ ಕುಳಿಪೊ) ನಡೆಯಲಿದೆ. ಬಳಿಕ ಅನ್ನಸಂತರ್ಪಣೆ ಕಾರ್ಯ ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ತಿಳಿಸಿದ್ದಾರೆ. ಬೊಟ್ಟಿಯತ್ ನಾಡಿಗೆ ಸೇರಿದ ಕುಂದಾ, ಮುಗುಟಗೇರಿ, ಹಳ್ಳಿಗಟ್ಟು, ಹುದೂರು, ಈಚೂರು ಹಾಗೂ ಅರುವತೋಕ್ಲು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ನಾಡ್ ದೇವಸ್ಥಾನ ಎಂದು ಖ್ಯಾತಿ ಪಡೆದಿರುವ ಕುಂದಾ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಈಶ್ವರ ದೇವಸ್ಥಾನಕ್ಕೆ ಪೂರ್ವ ಕಾಲದ ಇತಿಹಾಸವಿದ್ದು ಇಲ್ಲಿನ ತಕ್ಕಮುಖ್ಯಸ್ಥರಾಗಿ ಮನೆಯಪಂಡ ಹಾಗೂ ಸಣ್ಣುವಂಡ ಕುಟುಂಬ ಕಾರ್ಯನಿರ್ವಹಿಸುತ್ತಾರೆ.










