
ನಾಪೋಕ್ಲು ಫೆ.21 NEWS DESK : ಈಸ್ಟ್ ಕೊಳಕೇರಿ ಗ್ರಾಮದ ಬಿದ್ದಾಟಂಡ ವಾಡೆ ಸಮೀಪ ಇರುವ ಶ್ರೀ ಮಹಾದೇವ ಕೋಟ ಈಶ್ವರ ದೇವಾಲಯದಲ್ಲಿ ಫೆ.26 ರಂದು ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದೆ. ಅಂದು ಬೆಳಿಗ್ಗೆ 9 ಗಂಟೆಗೆ ರುದ್ರಾಭಿಷೇಕ, ಮಹಾಪೂಜೆ ಹಾಗೂ ಅನ್ನದಾನ ಜರಗಲಿದೆ. ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ವರದಿ : ದುಗ್ಗಳ ಸದಾನಂದ.









