Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೆದಮುಳ್ಳುರು–ತೋರ–ಪಾಲಂಗಾಲ ರಸ್ತೆ ಅವ್ಯವಸ್ಥೆ : ಗ್ರಾಮಸ್ಥರ ಅಸಮಾಧಾನ* 
  • *ಭತ್ತದ ಬೆಳೆಗೆ ಬೆಂಕಿ ರೋಗ : ತುರ್ತು ನಿರ್ವಹಣೆಗೆ ಕೃಷಿ ಇಲಾಖೆ ಮನವಿ*
  • *ಕೊಡ್ಲಿಪೇಟೆಯಲ್ಲಿ ಕರವೇ ನೂತನ ಸದಸ್ಯರ ಸೇರ್ಪಡೆ : ಪದಗ್ರಹಣ*
  • *ಆರ್ಥಿಕ ವಂಚನೆ ಮತ್ತು ಸೈಬರ್ ಬೆದರಿಕೆಗಳಿಂದ ಎಚ್ಚರ ವಹಿಸಿ: ಠಾಣಾಧಿಕಾರಿ ಕಾಳೇಗೌಡ; ತಿತಿಮತಿಯಲ್ಲಿ ಆರ್ಥಿಕ ಜಾಗೃತಿ ಸಾಕ್ಷರತಾ ಸಂವಾದ ಕಾರ್ಯಕ್ರಮ*
  • *ಕೊಡಗಿನ ಶಮಾ ಅಪ್ಪಣ್ಣ ‘ಮಿಸೆಸ್ ಇಂಡಿಯಾ ವುಮೆನ್ ಆಫ್ ಸಬ್‌ಸ್ಟೆನ್ಸ್’ ಜಯಭೇರಿ*
  • *ವಿರಾಜಪೇಟೆಯಲ್ಲಿ ಅಕ್ಷರ ದಾಸೋಹ ನೌಕರರ ತಾಲೂಕು ಸಮ್ಮೇಳನ ಯಶಸ್ವಿ; ಮಹಿಳಾ ಕಾರ್ಮಿಕರ ಹಕ್ಕುಗಳಿಗಾಗಿ ಧ್ವನಿ, ನೂತನ ಪದಾಧಿಕಾರಿಗಳ ಆಯ್ಕೆ*
  • *ಸ್ವಉದ್ಯೋಗ ಮಾಹಿತಿ ಕಾರ್ಯಕ್ರಮ: ಗ್ರಾಮೀಣ ಭಾಗದ ಜನರಿಗೆ ಉದ್ಯೋಗದ ಹಲವು ಅವಕಾಶಗಳ ಪರಿಚಯ*
  • *ಕ್ರಿಶ್ಚಿಯನ್ ಮುಖಂಡರಿಂದ ಸಚಿವ ಯು.ಟಿ. ಖಾದರ್ ಭೇಟಿ*
  • *ಕೊಡಗು ಜೆಡಿಎಸ್ ಸಂಘಟನೆ ಬಲವರ್ಧನೆಗೆ ಒತ್ತು: ಕುಮಾರಸ್ವಾಮಿಗೆ ಮನವಿ*
  • *ಕಸ್ತೂರಿ ರಂಗನ್ ವರದಿ ತಿರಸ್ಕಾರಕ್ಕೆ ಶಾಸಕ ಡಾ. ಮಂತರ್ ಗೌಡ ಸ್ವಾಗತ: ರೈತರ ಪರ ಇರುವ ಭರವಸೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗು ಜಾನಪದ ಬೆಡಗು-ಜಾನಪದ ನಡೆ ವಿದ್ಯಾರ್ಥಿಗಳ ಕಡೆ ಕಾರ್ಯಕ್ರಮ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗು ಜಾನಪದ ಬೆಡಗು-ಜಾನಪದ ನಡೆ ವಿದ್ಯಾರ್ಥಿಗಳ ಕಡೆ ಕಾರ್ಯಕ್ರಮ*

ಫೆಬ್ರವರಿ 21, 20251 Min ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಫೆ.21 NEWS DESK : ಕರ್ನಾಟಕ ಜಾನಪದ ಅಕಾಡೆಮಿ ಮತ್ತು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಂಯುಕ್ತಾಶ್ರಯದಲ್ಲಿ ಫೆ.24 ರಂದು ಕಾಲೇಜು ಸಭಾಂಗಣದಲ್ಲಿ ‘ಕೊಡಗು ಜಾನಪದ ಬೆಡಗು-ಜಾನಪದ ನಡೆ ವಿದ್ಯಾರ್ಥಿಗಳ ಕಡೆ’ ಎನ್ನುವ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ.ಕಾವೇರಿ ಪ್ರಕಾಶ್, ಜಾನಪದ ಎನ್ನುವುದು ಸಾಹಿತ್ಯದ ಮೂಲಬೇರು. ಇಂತಹ ಅಮೂಲ್ಯ ಜಾನಪದ ಸಂಸ್ಕೃತಿ ಪರಂಪರೆಗಳು ತಲೆತಲಾಂತರಗಳಿಂದ ಹರಿದು ಬಂದಿದ್ದು, ಇದನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು. ಅಂದು ಬೆಳಗ್ಗೆ 10.30 ಗಂಟೆಗೆ ‘ಕೊಡಗು ಜಾನಪದ ಬೆಡಗು’ ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವ ಪ್ರಸಾದ್ ಅವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ವೆಂಕಟೇಶ ಪ್ರಸನ್ನ ಪಿ.ಕೆ. ವಹಿಸಲಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದ ಸಹ ಸಂಚಾಲಕರು ಹಾಗೂ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಮೋಹನ್ ಕುಮಾರ್ ಅವರು ಮಾತನಾಡಿ, ಕಾರ್ಯಕ್ರಮದಲ್ಲಿ ‘ಕೊಡಗಿನ ಸಾಂಪ್ರದಾಯಿಕ ಊಟೋಪಚಾರಗಳು’ ವಿಷಯದ ಕುರಿತು  ಡಾ.ಕಾವೇರಿ ಪ್ರಕಾಶ್ ಮತ್ತು ‘ಬುಡಕಟ್ಟು ಸಂಸ್ಕೃತಿಯಲ್ಲಿ ಕುಡಿಯರು’ ವಿಷಯದ ಕುರಿತು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಅವರು ವಿಷಯ ಮಂಡನೆ ಮಾಡಲಿದ್ದಾರೆ ಎಂದರು. ಅತಿಥಿಗಳಾಗಿ ಐಕ್ಯೂಎಸಿ ಸಂಚಾಲಕರಾದ ಡಾ.ನಿರ್ಮಲ ಕೆ.ಡಿ., ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾದ ಅಂಬೇಕಲ್ ನವೀನ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸ ಡಾ.ಮೋಹನ್ ಕುಮಾರ್, ಜಾನಪದ ಅಕಾಡೆಮಿಯ ಸದಸ್ಯ ಸಂಚಾಲಕ ಡಾ.ಮೈಸೂರು ಉಮೇಶ್ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಕಡ್ಲೇರ ತುಳಸಿ ಮೋಹನ್ ತಂಡದಿಂದ ಸುಗ್ಗಿ ಕುಣಿತ, ವಿಷ್ಣು ಪ್ರಿಯ ಮತ್ತು ತಂಡದಿಂದ ಕೊಡವ ಜಾನಪದ ನೃತ್ಯ, ಕುಡಿಯರ ಮುತ್ತಪ್ಪ ತಂಡದಿಂದ ದುಡಿಕೊಟ್ಟ್ ಪಾಟ್ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.  ಸುದ್ದಿಗೋಷ್ಠಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಚೈತ್ರ ಎಸ್.ಜಿ., ಕಾಲೇಜು ವಿದ್ಯಾರ್ಥಿ ಸಂಘದ ವಿಷ್ಣು ಪ್ರಿಯ, ಯೋಗೇಶ್ ಹಾಗೂ ಸುಫಾನ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Related Posts

*ಕೆದಮುಳ್ಳುರು–ತೋರ–ಪಾಲಂಗಾಲ ರಸ್ತೆ ಅವ್ಯವಸ್ಥೆ : ಗ್ರಾಮಸ್ಥರ ಅಸಮಾಧಾನ* 

ಸೆಪ್ಟೆಂಬರ್ 30, 2026

*ಭತ್ತದ ಬೆಳೆಗೆ ಬೆಂಕಿ ರೋಗ : ತುರ್ತು ನಿರ್ವಹಣೆಗೆ ಕೃಷಿ ಇಲಾಖೆ ಮನವಿ*

ಸೆಪ್ಟೆಂಬರ್ 30, 2026

*ಕೊಡ್ಲಿಪೇಟೆಯಲ್ಲಿ ಕರವೇ ನೂತನ ಸದಸ್ಯರ ಸೇರ್ಪಡೆ : ಪದಗ್ರಹಣ*

ಸೆಪ್ಟೆಂಬರ್ 30, 2026

*ಭತ್ತದ ಬೆಳೆಗೆ ಬೆಂಕಿ ರೋಗ : ತುರ್ತು ನಿರ್ವಹಣೆಗೆ ಕೃಷಿ ಇಲಾಖೆ ಮನವಿ*

ಸೆಪ್ಟೆಂಬರ್ 30, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಸೆ.30 NEWS DESK : ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತದ ಬೆಳೆಗೆ ಅಲ್ಲಲ್ಲಿ ಬೆಂಕಿ ರೋಗದ ಬಾಧೆ ಕಂಡುಬಂದಿದ್ದು,…

*ಕೊಡ್ಲಿಪೇಟೆಯಲ್ಲಿ ಕರವೇ ನೂತನ ಸದಸ್ಯರ ಸೇರ್ಪಡೆ : ಪದಗ್ರಹಣ*

ಸೆಪ್ಟೆಂಬರ್ 30, 2026

*ಆರ್ಥಿಕ ವಂಚನೆ ಮತ್ತು ಸೈಬರ್ ಬೆದರಿಕೆಗಳಿಂದ ಎಚ್ಚರ ವಹಿಸಿ: ಠಾಣಾಧಿಕಾರಿ ಕಾಳೇಗೌಡ; ತಿತಿಮತಿಯಲ್ಲಿ ಆರ್ಥಿಕ ಜಾಗೃತಿ ಸಾಕ್ಷರತಾ ಸಂವಾದ ಕಾರ್ಯಕ್ರಮ*

ಸೆಪ್ಟೆಂಬರ್ 30, 2026

*ಕೊಡಗಿನ ಶಮಾ ಅಪ್ಪಣ್ಣ ‘ಮಿಸೆಸ್ ಇಂಡಿಯಾ ವುಮೆನ್ ಆಫ್ ಸಬ್‌ಸ್ಟೆನ್ಸ್’ ಜಯಭೇರಿ*

ಸೆಪ್ಟೆಂಬರ್ 30, 2026

*ವಿರಾಜಪೇಟೆಯಲ್ಲಿ ಅಕ್ಷರ ದಾಸೋಹ ನೌಕರರ ತಾಲೂಕು ಸಮ್ಮೇಳನ ಯಶಸ್ವಿ; ಮಹಿಳಾ ಕಾರ್ಮಿಕರ ಹಕ್ಕುಗಳಿಗಾಗಿ ಧ್ವನಿ, ನೂತನ ಪದಾಧಿಕಾರಿಗಳ ಆಯ್ಕೆ*

ಸೆಪ್ಟೆಂಬರ್ 30, 2026

*ಸ್ವಉದ್ಯೋಗ ಮಾಹಿತಿ ಕಾರ್ಯಕ್ರಮ: ಗ್ರಾಮೀಣ ಭಾಗದ ಜನರಿಗೆ ಉದ್ಯೋಗದ ಹಲವು ಅವಕಾಶಗಳ ಪರಿಚಯ*

ಸೆಪ್ಟೆಂಬರ್ 30, 2026

*ಕ್ರಿಶ್ಚಿಯನ್ ಮುಖಂಡರಿಂದ ಸಚಿವ ಯು.ಟಿ. ಖಾದರ್ ಭೇಟಿ*

ಸೆಪ್ಟೆಂಬರ್ 30, 2026

*ಕೊಡಗು ಜೆಡಿಎಸ್ ಸಂಘಟನೆ ಬಲವರ್ಧನೆಗೆ ಒತ್ತು: ಕುಮಾರಸ್ವಾಮಿಗೆ ಮನವಿ*

ಸೆಪ್ಟೆಂಬರ್ 30, 2026

*ಕಸ್ತೂರಿ ರಂಗನ್ ವರದಿ ತಿರಸ್ಕಾರಕ್ಕೆ ಶಾಸಕ ಡಾ. ಮಂತರ್ ಗೌಡ ಸ್ವಾಗತ: ರೈತರ ಪರ ಇರುವ ಭರವಸೆ*

ಸೆಪ್ಟೆಂಬರ್ 30, 2026

*ಗ್ರಾಮೀಣಾಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ*

ಸೆಪ್ಟೆಂಬರ್ 30, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.