
ಮಡಿಕೇರಿ ಫೆ.25 NEWS DESK : ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ನಡೆಯುವ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಫೆಬ್ರವರಿ, 26 ರಂದು ಬೆಳಗ್ಗೆ 9.30 ಗಂಟೆಯಿಂದ 12 ಗಂಟೆವರೆಗೆ ಸಾರ್ವಜನಿಕ ಭಕ್ತಾಧಿಗಳಿಗೆ ವಿಶೇಷ ಸೇವೆ ರುದ್ರಹೋಮ ಮತ್ತು ಏಕಾದಶ ರುದ್ರಾಭಿಷೇಕ ಹಾಗೂ ಅಲಂಕಾರ ಪೂಜೆ ನಡೆಯಲಿದೆ. ನಂತರ ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ ನಡೆಯಲಿದೆ. ಬಳಿಕ ವಿವಿಧ ಪೂಜೆ-ಅರ್ಚನೆಗಳು ನಡೆಯಲಿದೆ. ಈ ದಿನದಂದು ದೇವಾಲಯವು ರಾತ್ರಿಪೂರ್ತಿ ತೆರೆದಿರುತ್ತದೆ. ಭಕ್ತಾದಿಗಳು ದೇವಾಲಯದಲ್ಲಿ ನಡೆಯುವ ಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಬಾಜನರಾಗುವಂತೆ ಕೋರಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ.9902290302, 9845821566 ನ್ನು ಸಂಪರ್ಕಿಸಬಹುದು ಎಂದು ಶ್ರೀ ಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ದೇವರಾಜು ತಿಳಿಸಿದ್ದಾರೆ.









