
ನಾಪೋಕ್ಲು ಮಾ.6 NEWS DESK : ಪೇರೂರು ದವಸ ಭಂಡಾರದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಮೂವೇರ ಪೆಮ್ಮಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬೊಟ್ಟೋಳಂಡ ಕರುಂಬಯ್ಯ, ನಿರ್ದೇಶಕರುಗಳಾಗಿ ಬೊಟ್ಟೋಳಂಡ ಮಿಟ್ಟು ಪೂಣಚ್ಚ, ತೋಲಂಡ ಕಾವೇರಪ್ಪ, ಬೊಟ್ಟೋಳಂಡ ಕುಶಾಲಪ್ಪ, ಮಚ್ಚುರ ಬಿದ್ದಯ್ಯ, ಪಾಲೇಯಡ ದೇವಯ್ಯ, ಆನೇಡ ಚಿಣ್ಣಪ್ಪ, ತೆಕ್ಕಡ ಭೀಮಯ್ಯ, ಬೊಟ್ಟೋಳಂಡ ರೇಷ್ಮ, ಪಾಲೆಯಡ ಪೂವಮ್ಮ ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯನ್ನು ಸಹಕಾರ ಸಂಘಗಳ ಸಹ ನಿಬಂಧಕರಾದ ಸಂದಿಪ್ ಮತ್ತು ಪೇರೂರು ದವಸಭಂಡಾರದ ಕಾರ್ಯದರ್ಶಿ ಅಪ್ಪಚ್ಚೀರ ಬೋಪಯ್ಯ ಕಾರ್ಯ ನಿರ್ವಹಿಸಿದರು.
ವರದಿ : ದುಗ್ಗಳ ಸದಾನಂದ.









