
ಮಡಿಕೇರಿ ಮಾ.11 NEWS DESK : ನಾಪೋಕ್ಲು ಠಾಣಾ ಆವರಣದಲ್ಲಿ ಮಡಿಕೇರಿ ಉಪ ವಿಭಾಗದ ಡಿ.ಎಸ್.ಪಿ ನೇತೃತ್ವದಲ್ಲಿ ಜನಸಂಪರ್ಕ ಸಭೆ ನಡೆಯಿತು. ಸಭೆಯಲ್ಲಿ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ, ಬಾಲ ಕಾರ್ಮಿಕ ನಿಷೇಧ ಕಾಯ್ದೆ, ಅಪ್ರಾಪ್ತ ಬಾಲಕರ ವಾಹನ ಚಾಲನೆ, ಕುಡಿದು ವಾಹನ ಚಾಲನೆ, ಕಾಫಿ ಖರೀದಿದಾರರಿಗೆ ಸೂಚನೆಗಳು, ಅಕ್ರಮ ಮದ್ಯ ಮಾರಾಟ, ಮಾದಕ ವಸ್ತು ಮಾರಾಟ, ಸೇವನೆ ಬಗ್ಗೆ ಮುಂತಾದ ಅಂಶಗಳ ಬಗ್ಗೆ ಅರಿವು ಮೂಡಿಸಲಾಯಿತು.









