
ಮಡಿಕೇರಿ NEWS DESK ಮೇ 15 : ಮಾದಕ ವಸ್ತು ಎಂಡಿಎಂಎಯನ್ನು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ. ಮಡಿಕೇರಿ ನಗರದ ಅಬ್ದುಲ್ ಕಲಾಂ ಬಡಾವಣೆಯ ನಿವಾಸಿ ಮೊಹಮ್ಮದ್ ಶರ್ಜಿಲ್ (41) ಬಂಧಿತ ಆರೋಪಿಯಾಗಿದ್ದು, ಈತನ ಬಳಿಯಿಂದ 3.66 ಗ್ರಾಂ ಎಂಡಿಎಂಎಯನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ಮಹದೇವಪೇಟೆಯಲ್ಲಿರುವ ಎ.ವಿ ಶಾಲೆ ಕಡೆಯಿಂದ ಅಬ್ಬಿಫಾಲ್ಸ್ ಕಡೆಗೆ ಹೋಗುವ ಜಂಕ್ಷನ್ ನಲ್ಲಿ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದರು. ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಸೂರಜ್ ಪಿ.ಎ, ನಗರ ಸಿಪಿಐ ರಾಜು.ಪಿ.ಕೆ, ಪಿಎಸ್‌ಐ ಅನ್ನಪೂರ್ಣ ಎಸ್.ಶಂಕರಗುಳ್ಳಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.








