Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೊಡವ ನ್ಯಾಷನಲ್ ಕೌನ್ಸಿಲ್ ನಿಂದ ಸಂಭ್ರಮದ ಎಡ್ಮ್ಯಾರ್ 1 ಆಚರಣೆ*
  • *ಮೂರ್ನಾಡು : ಏ.15 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
  • *ಶನಿವಾರಸಂತೆ ಅಂಬೇಡ್ಕರ್ ಭವನ ನಿರ್ಮಾಣ ಸಮಿತಿಯಿಂದ ಡಾ.ಅಂಬೇಡ್ಕರ್ ಜಯಂತಿಯ ಅರ್ಥಪೂರ್ಣ ಆಚರಣೆ*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.15 ರಂದು ನಡೆಯುವ ಪಂದ್ಯಗಳು*
  • *ಉಮೇಶ್ ಕುಮಾರ್ ಅವರಿಗೆ ಮಡಿಕೇರಿ ಗ್ರಾಮಾಂತರ ವೃತ್ತದ ಹೆಚ್ಚುವರಿ ಜವಾಬ್ದಾರಿ*
  • *ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕ.ರ.ವೇ ಸ್ವಾಭಿಮಾನಿ ಬಣದ ಕೊಡಗು ಘಟಕದಿಂದ ಸನ್ಮಾನ*
  • *ಹೊಸಪಟ್ಟಣದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಬಸವೇಶ್ವರ ಕನ್ನಂಬಾಡಮ್ಮ ದೇವರ ಪೂಜೋತ್ಸವ*
  • *ಹೆಬ್ಬಾಲೆಯಲ್ಲಿ ಫುಟ್ ಪಲ್ಸ್ ಉಚಿತ ಥೆರಪಿ ಶಿಬಿರ*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಮೈದಾನ 2 >>> ಏ.14 ರಂದು ಗೆಲುವು ಸಾಧಿಸಿದ ತಂಡಗಳು*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಮೈದಾನ 1 >>> ಏ.14 ರಂದು ಗೆಲುವು ಸಾಧಿಸಿದ ತಂಡಗಳು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಸೆಂಟ್ರಲ್ ಬ್ಯಾಂಕ್ : 4500 ಅಪ್ರೆಂಟಿಸ್ ಶಿಪ್ ಹುದ್ದೆಗಳು*
ಇತ್ತೀಚಿನ ಸುದ್ದಿಗಳು ಉದ್ಯೋಗ ಭಾಗ್ಯ ಕೊಡಗು ಜಿಲ್ಲೆ

*ಸೆಂಟ್ರಲ್ ಬ್ಯಾಂಕ್ : 4500 ಅಪ್ರೆಂಟಿಸ್ ಶಿಪ್ ಹುದ್ದೆಗಳು*

ಜೂನ್ 16, 20254 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

(Box)  ಅಪ್ರೆಂಟಿಸ್ ಕಾಯಿದೆ, 1961 ರ ಅಡಿಯಲ್ಲಿ ಮತ್ತು ಅಪ್ರೆಂಟಿಸ್ಶಿಪ್ ನೀತಿಯ ಪ್ರಕಾರ ಅಪ್ರೆಂಟಿಸ್‍ಗಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. 1911 ರಲ್ಲಿ ಸ್ಥಾಪನೆಯಾದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿದೆ. ದೇಶಾದ್ಯಂತ 4,500 ಕ್ಕೂ ಮಿಕ್ಕಿ ಶಾಖೆಗಳು, ಹಾಗೂ ನೆಟ್ವರ್ಕ್ ಮೂಲಕ ಕಾರ್ಯನಿರ್ವಹಿಸುವ ಒಟ್ಟು 7,00,000 ಕೋಟಿ ರೂ.ಗಳಿಗಿಂತ ಹೆಚ್ಚಿನ ವ್ಯವಹಾರದೊಂದಿಗೆ, 33,000 ಕ್ಕೂ ಹೆಚ್ಚು ಉದ್ಯೋಗಿಗಳ ಬಲದೊಂದಿಗೆ ನಡೆಸಲ್ಪಡುತ್ತಿರುವ. ಅಗ್ರಗಣ್ಯ ಬ್ಯಾಂಕ್ ಎಂದು ಗುರುತಿಸಲ್ಪಟ್ಟಿದೆ. ಕೇಂದ್ರ ಉನ್ನತ ಶಿಕ್ಷಣ ಸಚಿವಾಲಯದ ಸಹಭಾಗಿತ್ವದಲ್ಲಿ ಬ್ಯಾಂಕ್ ಈ ಅಪ್ರೆಂಟಿಸ್ ಷಿಪ್ ನೀಡುತ್ತಿದೆ. 1961ರ ಅಪ್ರೆಂಟಿಸ್ ಷಿಪ್ ಆಕ್ಟ್ ಪ್ರಕಾರವೇ ಈ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದ್ದು, 2025-26 ನೇ ಸಾಲಿನಲ್ಲಿ ದೇಶಾದ್ಯಂತ ಒಟ್ಟು 4,500 ಅಭ್ಯರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಕರ್ನಾಟಕದಿಂದ 105 ಮಂದಿಗೆ ಅವಕಾಶ ಸಿಗಲಿದೆ. ಆನ್ಲೈನ್ ಪರೀಕ್ಷೆ ಮೂಲಕ ಕರ್ನಾಟಕ ಸೇರಿದಂತೆ ದೇಶದಾದ್ಯಂತವಿರುವ ಶಾಖೆಗಳಲ್ಲಿ ಈ ತರಬೇತಿಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಮತ್ತು ನೇಮಕ ಮಾಡಿಕೊಳ್ಳಲಾಗುತ್ತದೆ.

ಅರ್ಹತೆಗಳೇನು…? ::  ಕಲೆ, ವಿಜ್ಞಾನ, ವಾಣಿಜ್ಯ ಸೇರಿದಂತೆ ಯಾವುದೇ ವಿಷಯಗಳಲ್ಲಿ ಪದವಿ ಪಡೆದಿದ್ದರೂ ಅರ್ಜಿ ಸಲ್ಲಿಸುವ ಅವಕಾಶವಿದೆ. ಆದರೆ, ಅಭ್ಯರ್ಥಿಗಳು ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ನಿಗದಿತ ವಿದ್ಯಾರ್ಹತೆ ಪಡೆದಿರಬೇಕು. 2021 ರ ಜನವರಿ 1 ರೊಳಗೆ ಅಭ್ಯರ್ಥಿಗಳು ನಿಗದಿಪಡಿಸಿದ ವಿದ್ಯಾರ್ಹತೆಗೆ ಸಂಬಂಧಿಸಿದ ಪ್ರಮಾಣಪತ್ರವನ್ನುಹೊಂದಿರಬೇಕು.

ವಯೋಮಿತಿ ಏಷ್ಟು..? :: 1997 ರ ಮೇ 31 ಮತ್ತು 2005 ರ ಮೇ 31ರ ನಡುವೆ ಜನಿಸಿದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಎಸ್ಸಿ/ಎಸ್ಟಿ/ಒಬಿಸಿ ಮತ್ತು ವಿಶೇಷ ಚೇತನ ಅಭ್ಯರ್ಥಿಗಳಿಗೆ ಸರಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕವೆಷ್ಟು..? :: ಈ ಉದ್ಯೋಗ ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 800 ರೂ. ಶುಲ್ಕ ಪಾವತಿಸಬೇಕು. ಎಸ್ಸಿ/ಎಸ್ಟಿ, ಮಹಿಳಾ ಅಭ್ಯರ್ಥಿಗಳು ಹಾಗೂ ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳು 600 ರೂ. ಶುಲ್ಕ ಹಾಗೂ ವಿಶೇಷ ಚೇತನ ಅಭ್ಯರ್ಥಿಗಳು 400 ರೂ. ಶುಲ್ಕ ಪಾವತಿಸಲು ಸೂಚಿಸಲಾಗಿದೆ ಎಲ್ಲಾ ವರ್ಗದ ಅಭ್ಯರ್ಥಿಗಳೂ ಈ ಶುಲ್ಕದಮೇಲೆ ಶೇ.18 ರಷ್ಟು ಜಿಎಸ್ಟಿ ಪಾವತಿಸಬೇಕು.

ನೆನಪಿಡಿ:4500 ಅಭ್ಯರ್ಥಿಗಳಿಗೆ ಅವಕಾಶ,  ಅರ್ಜಿ ಸಲ್ಲಿಸಲು ಜೂನ್ 25 ರ ಗಡುವು, ಪದವೀಧರರಿಗೆ ಅವಕಾಶ
ಕರ್ನಾಟಕಕ್ಕೆ ಮೀಸಲಿಟ್ಟ ಸ್ಥಾನಗಳು: 105
ವಿವರಗಳಿಗೆ: https://centralbankofindia.co.in
ಆಯ್ಕೆ ಹೇಗೆ ? : ಆನ್ಲೈನ್ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ನಡೆಯಲಿದೆ.
ಪರೀಕ್ಷೆಯ ವಿಷಯಗಳೇನು?
* ಕ್ವಾಂಟಿಟೇಟಿವ್, ಜನರಲ್ ಇಂಗ್ಲಿಷ್ ಮತ್ತು ರೀಸನಿಂಗ್ ಅಪ್ಟಿಟ್ಯೂಡ್, ಕಂಪ್ಯೂಟರ್ ನಾಲೆಜ್, 15ಘಿ4- 60 ಪ್ರಶ್ನೆಗಳು.
* ಬೇಸಿಕ್ ರಿಟೇಲ್ ಲಿಯಾಬಿಲಿಟಿ ಪ್ರಾಡಕ್ಟ್, 10 ಪ್ರಶ್ನೆಗಳು.
* ಬೇಸಿಕ್ ರಿಟೇಲ್ ಅಸೆಟ್ ಪ್ರಾಡಕ್ಟ್, 10 ಪ್ರಶ್ನೆಗಳು.
* ಬೇಸಿಕ್ ಇನ್ವೆಸ್ಟ್ಮೆಂಟ್ ಪ್ರಾಡಕ್ಟ್ 10 ಪ್ರಶ್ನೆಗಳು.
* ಮತ್ತು ಬೇಸಿಕ್ ಇನ್ಸೂರೆನ್ಸ್ ಪ್ರಾಡಕ್ಟ 10 ಪ್ರಶ್ನೆಗಳು ವಿಷಯಗಳಿಗೆ ಸಂಬಂಧಿಸಿದ 100 ಪ್ರಶ್ನೆ, 100 ಅಂಕಗಳಿರುತ್ತವೆ.
* ವಸ್ತುನಿಷ್ಠ ಪರೀಕ್ಷೆಗಳಲ್ಲಿ ತಪ್ಪು ಉತ್ತರಗಳಿಗೆ ಯಾವುದೇ ಋಣಾತ್ಮಕ ಅಂಕಗಳು ಇರುವುದಿಲ್ಲ.
ಒಂದಿಷ್ಟು ಗಮನಿಸಿ:
* ಸ್ವಂತ ಖರ್ಚಿನಲ್ಲಿಯೇ ಅಭ್ಯರ್ಥಿಗಳು ನೇಮಕ ಪ್ರಕ್ರಿಯೆಗಳಿಗೆ ಹಾಜರಾಗಬೇಕು.
* ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಕಡ್ಡಾಯ.
* ಅಂತಿಮವಾಗಿ ದಾಖಲಾತಿ ಪರಿಶೀಲನೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.
* ಅಭ್ಯರ್ಥಿಗಳು ಸ್ಥಳೀಯ ಭಾಷೆಗಳಲ್ಲಿ ಹಿಡಿತ ಹೊಂದಿರಬೇಕು.
* 8, 10 ಅಥವಾ ದ್ವಿತೀಯ ಪಿಯುಸಿ ಅಥವಾ ಪದವಿಯಲ್ಲಿ ಅಭ್ಯರ್ಥಿಗಳು ಸ್ಥಳೀಯ ಭಾಷೆಯನ್ನು ಒಂದು ವಿಷಯವನ್ನಾಗಿ ಅಧ್ಯಯನ ಮಾಡಿರಬೇಕು.
ಅಪ್ರೆಂಟಿಸ್ಷಿಪ್ ಒಂದು ಉದ್ಯೋಗ ತರಬೇತಿಯೇ ಹೊರತು ಬ್ಯಾಂಕ್ನಿಂದ ನಡೆಯುವ ನೇಮಕಾತಿ ಆಗಿರುವುದಿಲ್ಲ.
ಅಪ್ರೆಂಟಿಸ್ಷಿಪ್ ಕುರಿತಾದ ಮಾಹಿತಿ ಯನ್ನು ಪಡೆಯಲಿಚ್ಛಿಸುವವರು ಇಮೇಲ್ ಮೂಲಕವೂ ಮಾಹಿತಿ ಪಡೆದು ಕೊಳ್ಳಬಹುದು. ಅಪ್ರೆಂಟಿಸ್ಶಿಪ್ ಆಯ್ಕೆ ಪ್ರಕ್ರಿಯೆ ಮುಗಿಯುವ ತನಕ ಅಭ್ಯರ್ಥಿಗಳು ತಮ್ಮ ಬಾವಚಿತ್ರವನ್ನು ಬದಲಾಯಿಸಿ ಕೊಳ್ಳದಂತೆ ಸೂಚಿಸಲಾಗಿದೆ. ಆನ್ಲೈನ್ ಪರೀಕ್ಷೆಯ ಸಮಯದಲ್ಲಿ ಅದೇ ಬಾವಚಿತ್ರವನ್ನು ತೋರಿಸಲು ವಿಫಲವಾದರೆ ಅನರ್ಹತೆಗೆ ಕಾರಣವಾಗಬಹುದು. ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅವನು/ಅವಳು ಮಾಡಿದ ಸಹಿಯನ್ನು ಮುಂದೆಯೂ ಖಚಿತಪಡಿಸಿಕೊಳ್ಳಬೇಕು.ಅಂದರೆ ಅವನ/ಅವಳ ಕರೆ ಪತ್ರ, ಹಾಜರಾತಿ ಪತ್ರ ಇತ್ಯಾದಿಗಳಲ್ಲಿ ಮತ್ತು ಭವಿಷ್ಯದಲ್ಲಿ ಬ್ಯಾಂಕಿನೊಂದಿಗಿನ ಎಲ್ಲಾ ಪತ್ರ ವ್ಯವಹಾರಗಳಲ್ಲಿ ಸಹಿ ಒಂದೇ ಆಗಿರಬೇಕು ಮತ್ತು ಯಾವುದೇ ರೀತಿಯ ವ್ಯತ್ಯಾಸ ಇರಬಾರದು.
ಅರ್ಜಿ ಸಲ್ಲಿಸುವುದು ಹೇಗೆ…?:
ಅಭ್ಯರ್ಥಿಗಳು ಈ ತರಬೇತಿ ಪಡೆಯುವುದಾದರೆ www.nats.education.gov.in ಹೆಸರು ನೋಂದಾಯಿಸಬೇಕು. ಈ ವೆಬ್ಸೈಟ್ ನಲ್ಲಿ ನೀವು “Apprenticeship with Central Bank of India” ಎಂದು ನಮೂದಿಸಲಾದ ವಿಭಾಗದಲ್ಲಿ ಅರ್ಜಿ ಸಲ್ಲಿಸುವ ಆಯ್ಕೆಯನ್ನು ನೀಡಲಾಗಿದೆ. ಒಬ್ಬ ಅಭ್ಯರ್ಥಿ ಒಂದು ವಲಯಕ್ಕೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ. ಈಗಾಗಲೇ ಅಪ್ರೆಂಟಿಸ್ಷಿಪ್ ಪಡೆದಿರುವವರು ಮತ್ತು ಪಡೆಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಮಾತ್ರವಲ್ಲ, ಈಗಾಗಲೇ ಉದ್ಯೋಗಕ್ಕೆ ಸೇರಿ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸೇವಾನುಭವವುಳ್ಳ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟ ಪಡಿಸಲಾಗಿದೆ.

ಪರೀಕ್ಷೆಯ ದಿನಾಂಕ ಯಾವುದು?: ಆನ್ ಲೈನ್ ನಲ್ಲಿ ಪರೀಕ್ಷೆ ಜುಲೈ ಮೊದಲವಾರ, 2025 ರಂದು. (ಬದಲಾಗಬಹುದು, ವೆಬ್ ಸೈಟ್ ಗಮನಿಸುತ್ತೀರಿ)
* ಪರೀಕ್ಷಾ ಶುಲ್ಕವನ್ನು ಪಾವತಿಸಿದ ಎಲ್ಲಾ ಅರ್ಜಿದಾರರಿಗೆ ಪರೀಕ್ಷೆಯ ದಿನಾಂಕ ಮತ್ತು ಸಮಯದೊಂದಿಗೆ BFSI SSC ಯಿಂದ ಸೂಚನೆಯನ್ನು ನೀಡಲಾಗುತ್ತದೆ.
* ಎಲ್ಲಾ ಅರ್ಜಿದಾರರು ಅರ್ಜಿ ಸಲ್ಲಿಸುವ ಸಂದರ್ಬದಲ್ಲಿ ಅಪ್ಲೋಡ್ ಮಾಡಿದ ಅದೇ Iಆ ಪುರಾವೆಯನ್ನು ನೀಡಬೇಕು.
ಕರ್ನಾಟಕದಲ್ಲಿ ಹುದ್ದೆಗಳು ಎಲ್ಲಲ್ಲಿ?: ಬೆಂಗಳೂರು ಗ್ರಾಮಾಂತರ-3, ಬೆಂಗಳೂರು ನಗರ-37, ಚಾಮರಾಜನಗರ-1, ಚಿಕ್ಕಬಳ್ಳಾಪುರ-3, ಚಿಕ್ಕಮಗಳೂರು-1, ಹಾಸನ-3, ಕೊಡಗು-3, ಕೋಲಾರ-1, ಮಂಡ್ಯ-2, ಮೈಸೂರು-4, ರಾಮನಗರ-2, ತುಮಕೂರು-1, ಬಾಗಲಕೋಟೆ-4, ಬಳ್ಳಾರಿ-2, ಬೆಳಗಾವಿ-3, ಬೀದರ್-1, ಚಿತ್ರದುರ್ಗ-1, ದಕ್ಷಿಣ ಕನ್ನಡ-3, ದೇವನಗೆರೆ-3, ದಾರವಾಡ-4. ಗದಗ-2, ಹಾವೇರಿ-3, ಕಲಬುರಗಿ-2, ಕೊಪ್ಪಳ-2, ರಾಯಚೂರು-3, ಶಿವಮೊಗ್ಗ-1,ಉಡುಪಿ-2, ಉತ್ತರ ಕನ್ನಡ-4, ವಿಜಯನಗರ-1, ವಿಜಯಪುರ-3, ಯಾದಗಿರಿ-2
ಭಾಷಾವಾರು ನೇಮಕಾತಿ: ರಾಜ್ಯದ ಪಾಲಿನ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ಥಳೀಯ ಭಾಷೆಯಲ್ಲಿಓದುವುದು, ಬರೆಯುವ ಮಾತನಾಡುವುದು ಮತ್ತು ಅರ್ಥಮಾಡಿಕೊಳ್ಳುವುದರಲ್ಲಿ ಪ್ರವೀಣರಾಗಿರಬೇಕು.
ತರಬೇತಿಯ ಅವಧಿ ಮತ್ತು ಸ್ಟೈಪೆಂಡ್ : ತರಬೇತಿ ಅವಧಿ ಕೇವಲ ಒಂದು ವರ್ಷದ್ದಾಗಿರುತ್ತದೆ. ಒಂದು ವರ್ಷ ತರಬೇತಿಯ ಅವಧಿಯಲ್ಲಿ ಅಭ್ಯರ್ಥಿಗಳಿಗೆ ತಿಂಗಳಿಗೆ ?15,000 ಸ್ಟೈಪೆಂಡ್ ನೀಡಲಾಗುತ್ತದೆ. ಇದರ ಹೊರತಾಗಿ ಯಾವುದೇ ಭತ್ಯೆಯನ್ನು ನೀಡಲಾಗುವುದಿಲ್ಲ.
ಅಪ್ರೆಂಟಿಸಿಶಿಪ್ ಅನುಕೂಲಗಳು: ಅಪ್ರೆಂಟಿಸ್ಗಳಾಗಿ ನೇಮಕ ಗೊಂಡರೆ ಅದು ಬ್ಯಾಂಕ್ನಲ್ಲಿ ಉದ್ಯೋಗ ನೀಡಿದೆ ಎಂದರ್ಥವಲ್ಲ. ಇದೊಂದು ತರಬೇತಿಯಾಗಿದ್ದು, ಭವಿಷ್ಯದಲ್ಲಿ ಬ್ಯಾಂಕ್ನಲ್ಲಿ ಉದ್ಯೋಗ ಪಡೆಯಲು ಸಹಾಯವಾಗುತ್ತದೆ.ಬ್ಯಾಂಕಿಂಗ್ ನೇಮಕಾತಿಯ ನೀತಿ ನಿಯಮಗಳನ್ನು ಕಾಲಕಾಲಕ್ಕೆ ಮಾಡಿದ ತಿದ್ದುಪಡಿಯಂತೆ, ಜೂನಿಯರ್ ಅಸೋಸಿಯೇಟ್‍ಗಳ ನೇಮಕಾತಿಯಲ್ಲಿ ಅಪ್ರೆಂಟಿಸ್‍ಗಳಿಗೆ ಹೆಚ್ಚಿನ ಮಾನ್ಯತೆ ಅಥವಾ ಆದ್ಯತೆ (weightage) ನೀಡಲಾಗುತ್ತದೆ. ಅಪ್ರೆಂಟಿಸಿಶಿಪ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಮತ್ತು ತರಬೇತಿ ಅವಧಿಯಲ್ಲಿ ಸಂಪೂರ್ಣವಾಗಿ ತೃಪ್ತಿದಾಯಕ ನಡವಳಿಕೆಗೆ ಒಳಪಟ್ಟಿರುವ ಅಪ್ರೆಂಟಿಸ್‍ಗಳಿಗೆ ಜೂನಿಯರ್ ಅಸೋಸಿಯೇಟ್‍ಗಳ ನೇಮಕಾತಿಯಲ್ಲಿ ಕೆಲವೊಂದು ನಿಯಮ ಸಡಿಲಿಕೆ ಮಾಡಲಾಗಿರುತ್ತದೆ.
ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಕೌಶಲ್ಯ ಮೌಲ್ಯಮಾಪನ ಪರೀಕ್ಷೆ (ಟ್ರೇಡ್ ಪರೀಕ್ಷೆ) ಮತ್ತು ಜಂಟಿ ರಾಷ್ಟ್ರೀಯತೆಯ ಅಪ್ರೆಂಟಿಸ್ ಶಿಪ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.

ಮಾಹಿತಿ :: ಆರ್.ಕೆ.ಬಾಲಚಂದ್ರ,
ಬ್ಯಾಂಕಿಂಗ್ ಹಾಗೂ ಸಾಪ್ಟ್ ಸ್ಕಿಲ್ ತರಬೇತುದಾರರು
ಮತ್ತು ವೃತ್ತಿ ಮಾರ್ಗದರ್ಶಕರು.  

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕೊಡವ ನ್ಯಾಷನಲ್ ಕೌನ್ಸಿಲ್ ನಿಂದ ಸಂಭ್ರಮದ ಎಡ್ಮ್ಯಾರ್ 1 ಆಚರಣೆ*

ಏಪ್ರಿಲ್ 14, 2026

*ಮೂರ್ನಾಡು : ಏ.15 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಏಪ್ರಿಲ್ 14, 2026

*ಶನಿವಾರಸಂತೆ ಅಂಬೇಡ್ಕರ್ ಭವನ ನಿರ್ಮಾಣ ಸಮಿತಿಯಿಂದ ಡಾ.ಅಂಬೇಡ್ಕರ್ ಜಯಂತಿಯ ಅರ್ಥಪೂರ್ಣ ಆಚರಣೆ*

ಏಪ್ರಿಲ್ 14, 2026

*ಮೂರ್ನಾಡು : ಏ.15 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಏಪ್ರಿಲ್ 14, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಏ.14  NEWS DESK  :  66/33/11 ಕೆ.ವಿ MUSS ಮಗ್ಗುಲ, ವಿರಾಜಪೇಟೆ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ 33ಏಗಿ…

*ಶನಿವಾರಸಂತೆ ಅಂಬೇಡ್ಕರ್ ಭವನ ನಿರ್ಮಾಣ ಸಮಿತಿಯಿಂದ ಡಾ.ಅಂಬೇಡ್ಕರ್ ಜಯಂತಿಯ ಅರ್ಥಪೂರ್ಣ ಆಚರಣೆ*

ಏಪ್ರಿಲ್ 14, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.15 ರಂದು ನಡೆಯುವ ಪಂದ್ಯಗಳು*

ಏಪ್ರಿಲ್ 14, 2026

*ಉಮೇಶ್ ಕುಮಾರ್ ಅವರಿಗೆ ಮಡಿಕೇರಿ ಗ್ರಾಮಾಂತರ ವೃತ್ತದ ಹೆಚ್ಚುವರಿ ಜವಾಬ್ದಾರಿ*

ಏಪ್ರಿಲ್ 14, 2026

*ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕ.ರ.ವೇ ಸ್ವಾಭಿಮಾನಿ ಬಣದ ಕೊಡಗು ಘಟಕದಿಂದ ಸನ್ಮಾನ*

ಏಪ್ರಿಲ್ 14, 2026

*ಹೊಸಪಟ್ಟಣದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಬಸವೇಶ್ವರ ಕನ್ನಂಬಾಡಮ್ಮ ದೇವರ ಪೂಜೋತ್ಸವ*

ಏಪ್ರಿಲ್ 14, 2026

*ಹೆಬ್ಬಾಲೆಯಲ್ಲಿ ಫುಟ್ ಪಲ್ಸ್ ಉಚಿತ ಥೆರಪಿ ಶಿಬಿರ*

ಏಪ್ರಿಲ್ 14, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಮೈದಾನ 2 >>> ಏ.14 ರಂದು ಗೆಲುವು ಸಾಧಿಸಿದ ತಂಡಗಳು*

ಏಪ್ರಿಲ್ 14, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಮೈದಾನ 1 >>> ಏ.14 ರಂದು ಗೆಲುವು ಸಾಧಿಸಿದ ತಂಡಗಳು*

ಏಪ್ರಿಲ್ 14, 2026

*ಕುಶಾಲನಗರ ತಾಲ್ಲೂಕು ಪತ್ರಕರ್ತರ ಸಂಘದಿಂದ ನಾಲ್ವರಿಗೆ ‘ನೇಗಿಲಯೋಗಿ’ ಪ್ರಶಸ್ತಿ*

ಏಪ್ರಿಲ್ 14, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.