
ಸುಂಟಿಕೊಪ್ಪ NEWS DESK ಜೂ.22 : ಸುಂಟಿಕೊಪ್ಪ ಮಲಯಾಳಿ ಸಮಾಜದ 2025-26ನೇ ಸಾಲಿನ ಅಧ್ಯಕ್ಷರಾಗಿ ಆರ್.ರಮೇಶ್ ಪಿಳ್ಳೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಸ್.ಅನಿಲ್ ಕುಮಾರ್ ಆಯ್ಕೆಯಾಗಿದ್ದಾರೆ. ಸುಂಟಿಕೊಪ್ಪ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸಮಾಜದ ಅಧ್ಯಕ್ಷ ಎಂ.ಆರ್.ಶಶಿ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ವಾಸುದೇವ, ಟಿ.ಕೆ.ಹರೀಶ್ , ಖಜಾಂಚಿ ಅನೀಶ್.ಕೆ , ಸಹ ಕಾರ್ಯದರ್ಶಿಗಳಾಗಿ ಗಿರೀಶ್ ಮತ್ತು ಜಿ.ಪಿ.ಅನಿಲ್ ಕುಮಾರ್ ಸಂಘಟನಾ ಕಾರ್ಯದರ್ಶಿಗಳಾಗಿ ಕೆ.ರಾಜೇಶ್, ವಿ.ಕೆ.ರಾಜು, ಕ್ರೀಡಾ ಕಾರ್ಯದರ್ಶಿಗಳಾಗಿ ಪಿ.ಸಿ.ಸುರೇಶ್, ಬಿಜು ಪಿ.ಆರ್, ಗೌರವ ಅಧ್ಯಕರಾಗಿ ಭಾಸ್ಕರನ್, ವೇಲಾಯುಧನ್ ಹಾಗೂ 6 ಮಂದಿ ಸಲಹಾ ಸಮಿತಿ ಸದಸ್ಯರು, 8 ಮಂದಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.








